West Bengal Assembly Election 2021: ECI ಕಟ್ಟುನಿಟ್ಟಿನ ಕ್ರಮ , RO ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆ
ಕೋಲ್ಕತ್ತಾದ ಬಲ್ಲಿಗಂಜ್ ಅಸೆಂಬ್ಲಿ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಚುನಾವಣಾ ಆಯೋಗ ಬದಲಾಯಿಸಿದೆ.
ಕೋಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ರಿಟರ್ನಿಂಗ್ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. 10 ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಆಯೋಗ ಬದಲಾಯಿಸಿದೆ.
ಬಲ್ಲಿಗಂಜ್ ವಿಧಾನಸಭಾ ಕ್ಷೇತ್ರದ RO ಬದಲು :
ಕೋಲ್ಕತ್ತಾದ ಬಲ್ಲಿಗಂಜ್ ಅಸೆಂಬ್ಲಿ ಕ್ಷೇತ್ರದ ರಿಟರ್ನಿಂಗ್ ಆಫೀಸರ್ (RO) ಸೇರಿದಂತೆ ಮೂವರು ಅಧಿಕಾರಿಗಳನ್ನು ಚುನಾವಣಾ ಆಯೋಗ (Election Commission) ಬದಲಾಯಿಸಿದೆ. ಹಲ್ಡಿಯಾದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಯ ಮಹಿಷಾದಲ್‌ನ ಸರ್ಕಲ್ ಇನ್ಸ್‌ಪೆಕ್ಟರ್ (CI) ಅವರನ್ನು ವರ್ಗಾಯಿಸಲಾಗಿದೆ.
ಇದನ್ನೂ ಓದಿ : "ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ"
ಹೊಸ ಆರ್‌ಒ ಹುದ್ದೆಗೆ 3 ಅಧಿಕಾರಿಗಳ ಹೆಸರು ಕೇಳಿದ ಆಯೋಗ :
ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ (CEO) ಗೆ ಬರೆದ ಪತ್ರ ಬರೆದಿದೆ. ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಪ್ರಸ್ತುತ ಬಲ್ಲಿಗಂಜ್ ನ ರಿಟರ್ನಿಂಗ್ ಆಫೀಸರ್ (RO) ಅನ್ನು ತಕ್ಷಣವೇ ಬೇರೆ ಸ್ಥಳಕ್ಕೆ ವರ್ಗಾಯಿಸುವಂತೆ (Transfer) ಆದೇಶ ನೀಡಲಾಗಿದೆ.
ಹೊಸ ಅಧಿಕಾರಿಗಳ ನೇಮಕ :
ಚುನಾವಣಾ ಆಯೋಗವು ಹಲ್ಡಿಯಾ ಎಸ್‌ಡಿಪಿಒ ಬರುನ್ ಬೈದ್ಯ ಅವರ ಸ್ಥಾನಕ್ಕೆ ಉತ್ತಮ್ ಮಿತ್ರ ಅವರನ್ನು ನೇಮಿಸಿದೆ. ಮಹಿಷಾದಲ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಬಿಚಿತ್ರ ಬಿಕಾಸ್ ರಾಯ್ ಅವರ ಜಾಗಕ್ಕೆ ಸಿರ್ಸೆಂದು ದಾಸ್ ಅವರನ್ನು ನೇಮಿಸಲಾಗಿದೆ. ದಾಸ್ ಅವರನ್ನು ಪ್ರಸ್ತುತ ಜಲ್ಪೈಗುರಿಯ ಸರ್ಕ್ಯೂಟ್ ಬೆಂಚ್ನಲ್ಲಿ ಇನ್ಸ್ಪೆಕ್ಟರ್ ಆಗಿ ನೇಮಿಸಲಾಗಿದೆ.
ಇದನ್ನೂ ಓದಿ : Tamil Nadu Election 2021 : ಶಾಸಕರ ಡ್ರೈವರ್ ಮನೆ ಮೇಲೆ ಐಟಿ ದಾಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.