ಕೊಲ್ಕತ್ತಾ: 10 ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ರಾಜ್ಯದ ಕೆಲವು ಪ್ರದೇಶಗಳಲ್ಲಿ ಸೋಮವಾರದಿಂದ ಪ್ರಾರಂಭವಾಗುವ 10 ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಯ ದಿನಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ (West Bengal ) ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

2019 ಮತ್ತು 2020 ರಲ್ಲಿ ಪರೀಕ್ಷೆಗಳು ಪ್ರಾರಂಭವಾದ ಒಂದು ಗಂಟೆಯೊಳಗೆ ಮಾಲ್ಡಾ ಮತ್ತು ಮುರ್ಷಿದಾಬಾದ್ ಸೇರಿದಂತೆ ಹಲವಾರು ಜಿಲ್ಲೆಗಳ ಕೆಲವು ಪರೀಕ್ಷಾ ಕೇಂದ್ರಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮವು ಅನಿವಾರ್ಯವಾಗಿದೆ ಎಂದು ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?


ಪರೀಕ್ಷಾರ್ಥಿಗಳು ಪಠ್ಯಪುಸ್ತಕಗಳು ಅಥವಾ ಲಿಖಿತ ಉತ್ತರಗಳನ್ನು ಶೌಚಾಲಯಗಳಲ್ಲಿ ಸಿದ್ಧವಾಗಿಟ್ಟಿದ್ದಾರೆ ಎಂಬ ಆರೋಪಗಳಿವೆ.ಹಾಗಾಗಿ ಹಲವು ಪರೀಕ್ಷಾ ಕೇಂದ್ರಗಳು ಸಿಸಿಟಿವಿ ಕಣ್ಗಾವಲಿನಲ್ಲಿರಲಿವೆ.ಪರೀಕ್ಷೆಯ ಸಮಯದಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಇದನ್ನೂ ಓದಿ: James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್‌..! ಹೊಸ ದಾಖಲೆ ಬರೆದ 'ಜೇಮ್ಸ್'..!


ಈ ವರ್ಷ ಮಾಧ್ಯಮಿಕ ಪರೀಕ್ಷೆಗೆ ಅಂದಾಜು 6,21,931 ಬಾಲಕಿಯರು ಮತ್ತು 4,96,890 ಬಾಲಕರು ಹಾಜರಾಗಲಿದ್ದಾರೆ.
2021 ರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆ (Exams) ಯು ನಡೆಯದೇ ಇದ್ದಾಗ, ಮಂಡಳಿಯು ರಚಿಸಿದ ತಜ್ಞರ ಸಮಿತಿಯು ರೂಪಿಸಿದ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.