Anant Ambani weight  : ಈ ವಿಚಾರದ ಕುರಿತು ತಿಳಿದುಕೊಳ್ಳಲೇಬೇಕು.. ಏಕೆಂದರೆ ಕೆಲವರು ಅವರ ದಪ್ಪ ದೇಹವನ್ನು ನೋಡಿ ಹಾಸ್ಯ ಮಾಡುತ್ತಾರೆ.. ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ. ಅಲ್ಲದೆ, ಆಗರ್ಭ ಶ್ರೀಮಂತರಾಗಿರುವ ಅವರು ತೆಳ್ಳಗಾಗುವ ಅವಶ್ಯಕತೆ ಇಲ್ಲ ಹಣವಿದೆ ಸುಂದರ ಹುಡುಗಿ ಸಿಕ್ಕಿದ್ದಾಳೆ ಅಂತ ಮಾತನಾಡಿಕೊಂಡರು.. ಹಾಗಿದ್ರೆ ನೀವು ಅನಂತ್‌ ಅವರ ಹಿಂದಿನಿ ಫೋಟೋಗಳನ್ನು ನೋಡಿದ್ದೀರಾ.. ಆ ಸಖತ್‌ ಸಣ್ಣಗೆ ಹ್ಯಾಂಡ್ಸಮ್‌ ಇದ್ರು.. ಅವರಿಗೆ ಸಡನ್ನಾಗಿ ಏನಾಯ್ತು.. ಬನ್ನಿ ತಿಳಿಯೋಣ..


COMMERCIAL BREAK
SCROLL TO CONTINUE READING

ಹೌದು.. ಮುಖೇಶ್ ಅಂಬಾನಿಯವರು ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು. ಅವರ ಮಾತುಗಳು ಹಲವರನ್ನು ಕಣ್ಣೀರಿಡುವಂತೆ ಮಾಡಿದರು. ತಮ್ಮ ಜೀವಮಾನದ ಆರೋಗ್ಯ ಹೋರಾಟಗಳು ಮತ್ತು ಪೋಷಕರ ಬೆಂಬಲದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ, ತಾವು ಎದುರಿಸುತ್ತಿರುವ ಆರೋಗ್ಯ ಸವಾಲುಗಳನ್ನು ತಿಳಿಸಿದರು.


ಇದನ್ನೂ ಓದಿ:ಬೇಸಿಗೆ ಬಿಸಿ ನಡುವೆ ಕೇತಿಕಾ ಸೌಂದರ್ಯ ಮೈಬಿಸಿ ಹೆಚ್ಚಿಸುತ್ತಿದೆ..! ಬೇಕಿದ್ರೆ ಫೋಟೋಸ್‌ ನೋಡಿ..


ಅನಂತ್ ಅವರು ತಮ್ಮ ತಾಯಿ ನೀತಾ ಅಂಬಾನಿಯವರಿಗಹೆ ಕೃತಜ್ಞತೆಗಳನ್ನು ಸಲ್ಲಿಸುವ ಮೂಲಕ ತಮ್ಮ ಭಾವನಾತ್ಮಕ ಭಾಷಣವನ್ನು ಪ್ರಾರಂಭಿಸಿದರು. ಅವರು ಬಾಲ್ಯದಿಂದಲೂ ತಮ್ಮ ಆರೋಗ್ಯದ ಹೋರಾಟದ ಬಗ್ಗೆ ಧೈರ್ಯದಿಂದ ಹೇಳಿಕೊಂಡರು. ʼನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ ಆದರೆ ನನ್ನ ತಂದೆ ಮತ್ತು ತಾಯಿ ನನಗೆ ಅದನ್ನು ಅನುಭವಿಸಲು ಬಿಡಲಿಲ್ಲʼ ಎಂದು ಅವರು ಹೇಳಿ ಕಣ್ಣೀರಿಟ್ಟರು.


ಅನಂತ್ ಭಾಷಣದ ವೇಳೆ ಮುಖೇಶ್ ಅಂಬಾನಿಯವರು ಕಣ್ಣೀರಿಟ್ಟಿದ್ದರು. ತಾಯಿ ನೀತಾ ಅಂಬಾನಿ ಅವರ ಪ್ರಕಾರ, ಅನಂತ್ ಅವರ ಆಸ್ತಮಾಕ್ಕೆ ವ್ಯಾಪಕವಾದ ಸ್ಟೆರಾಯ್ಡ್ ಚಿಕಿತ್ಸೆಯ ಅಗತ್ಯವಿತ್ತು, ಇದು ತೂಕ ಹೆಚ್ಚಳಕ್ಕೆ ಕಾರಣವಾಯಿತು. ತೂಕ ಹೆಚ್ಚಾಗುವುದು, ದೀರ್ಘಾವಧಿಯ ಸ್ಟೀರಾಯ್ಡ್ ಬಳಕೆಯ ಸಾಮಾನ್ಯ ಅಡ್ಡ ಪರಿಣಾಮ, ಇದೇ ಅವನಿಗೆ ಹೆಚ್ಚುವರಿ ಸವಾಲುಗಳನ್ನು ಒಡ್ಡಿತು ಅಂತ ಹೇಳಿದ್ದಾರೆ.


ಇದನ್ನೂ ಓದಿ: ಮಗನ ಮದುವೆಗೆ ಕರೆಯದ ʼಅಂಬಾನಿʼ ವಿರುದ್ಧ ರಾಖಿ ಗರಂ..! ಎನಂದ್ಲು ಗೊತ್ತೆ ಬಿಟೌನ್‌ ಸುಂದ್ರಿ


ಅಲ್ಲದೆ, ಅನಂತ್ ಅವರು ಕೇವಲ 18 ತಿಂಗಳುಗಳಲ್ಲಿ 108 ಕೆಜಿಗಳಷ್ಟು ತೂಕವನ್ನು ಕಳೆದುಕೊಂಡರೂ, ಅವರ ಗಂಭೀರ ಆಸ್ತಮಾ ಸ್ಥಿತಿಯನ್ನು ನಿರ್ವಹಿಸುವಾಗ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಒಂದು ಹೋರಾಟವಾಗಿದೆ. ಅವರ ಆಸ್ತಮಾವನ್ನು ನಿಯಂತ್ರಿಸಲು ಸ್ಟೀರಾಯ್ಡ್‌ಗಳ ಅಗತ್ಯವು ತೂಕ ನಿರ್ವಹಣೆಗೆ ಕಠಿಣವಾಗಿದೆ. ಇದು ಒಂದು ಸಾವಿನ ಜೊತೆ ಯುದ್ಧ ಮಾಡುವ ರೀತಿ..


ಏಕೆಂದರೆ ಸ್ಟೀರಾಯ್ಡ್‌ಗಳು ದೇಹದ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತವೆ, ಇದು ಹೆಚ್ಚಿದ ಹಸಿವು ಮತ್ತು ನಂತರದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅನಂತ್ ಅವರ ಹಿಂದು ಮುಂದು ಯೋಚಿಸದೇ ಈ ವಿಚಾರವನ್ನು ಬಹಿರಂಗಪಡಿಸಿದ್ದು ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇನ್ನಾದರೂ ಒಬ್ಬರನ್ನು ಹೀಯಾಳಿಸುವ ಮುನ್ನ ಅವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವುದು ಉತ್ತಮ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.