ದೇಶದ ಗಣ್ಯರಿಗೆ ನೀಡಲಾಗುವ Y, Z ಮತ್ತು Z+ ಕೆಟಗರಿ ಭದ್ರತೆ ಎಂದರೇನು? ಇವುಗಳ ನಡುವಿನ ವ್ಯತ್ಯಾಸವೇನು ಗೊತ್ತಾ?
Y Z and Z+ category security: ಅಂದಹಾಗೆ Y, Z ಮತ್ತು Z Plus ಭದ್ರತೆ ಎಂದರೆ ಏನು? ಅವುಗಳ ನಡುವಿನ ವ್ಯತ್ಯಾಸವೇನು ಎಂದು ತಿಳಿದುಕೊಳ್ಳೋಣ,
Y Category Security: ಜಾರ್ಖಂಡ್’ನಲ್ಲಿ ವಿವಿಐಪಿ ಮತ್ತು ವಿಐಪಿ ಜನರ ಭದ್ರತಾ ವರ್ಗದ ಕುರಿತು ಅಪ್‌ಡೇಟ್ ಮಾಡಲಾಗಿದೆ. ವಿಶೇಷ ಶಾಖೆಯು ಪ್ರತಿಷ್ಠಿತ ವ್ಯಕ್ತಿಗಳಿಗೆ ಭದ್ರತಾ ರಕ್ಷಣೆಯ ವರ್ಗಗಳನ್ನು ನೀಡಿದೆ. ಇದರಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಚಂಪೈ ಸೊರೆನ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: Starbucks : ಕೊಯಮತ್ತೂರಿನಲ್ಲಿ ಮೊದಲ ಸ್ಟಾರ್ ಬಕ್ಸ್ , ಇದು ಭಾರತದಲ್ಲಿ 400ನೇ ಮಳಿಗೆ
ರಾಜ್ಯಸಭಾ ಸದಸ್ಯ ಶಿಬು ಸೊರೆನ್, ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್, ಕೇಂದ್ರ ಸಚಿವ ಅರ್ಜುನ್ ಮುಂಡಾ, ಒಡಿಶಾ ರಾಜ್ಯಪಾಲ ರಘುವರ್ ದಾಸ್ ಅವರಿಗೂ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.
ಅಂದಹಾಗೆ Y, Z ಮತ್ತು Z Plus ಭದ್ರತೆ ಎಂದರೆ ಏನು? ಅವುಗಳ ನಡುವಿನ ವ್ಯತ್ಯಾಸವೇನು ಎಂದು ತಿಳಿದುಕೊಳ್ಳೋಣ,
ವೈ ವರ್ಗ ಭದ್ರತೆ
Y ವರ್ಗದ ಭದ್ರತೆ ಕೆಲವು ಕಮಾಂಡೋಗಳನ್ನು ಒಳಗೊಂಡಂತೆ ಎಂಟರಿಂದ 11 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಇಬ್ಬರು ಪರ್ಸನಲ್ ಸೆಕ್ಯುರಿಟಿ ಅಧಿಕಾರಿಗಳು (ಪಿಎಸ್‌ಒ) ಕೂಡ ಭಾಗಿಯಾಗಿರುತ್ತಾರೆ. ಭಾರತದಲ್ಲಿ ಅನೇಕ ವಿಐಪಿಗಳಿಗೆ ಈ ಮಟ್ಟದ ಭದ್ರತೆಯನ್ನು ನೀಡಲಾಗಿದೆ.
Z ವರ್ಗ ಭದ್ರತೆ
ಝಡ್ ಕೆಟಗರಿ ಭದ್ರತೆಯಲ್ಲಿ 22 ಸಿಬ್ಬಂದಿ ಇರುತ್ತಾರೆ. ಅದರಲ್ಲಿ ಕೆಲವು ಕಮಾಂಡೋಗಳು ಮತ್ತು ಪೊಲೀಸರು ಕೂಡ ಸೇರಿರುತ್ತಾರೆ. ಯೋಗಗುರು ಸ್ವಾಮಿ ರಾಮದೇವ್ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: Right To Repair: ಇನ್ಮುಂದೆ RO ಕಂಪನಿ ಪ್ರತಿನಿಧಿ ನಿಮ್ಮನ್ನು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ!
Z Plus ವರ್ಗ ಭದ್ರತೆ
SPG ಕವರ್ ನಂತರ Z Plus ವರ್ಗದ ರಕ್ಷಣೆಯು ಅತ್ಯುನ್ನತ ಮಟ್ಟದ ರಕ್ಷಣೆಯಾಗಿದೆ ಎಂಬುದು ಗಮನಾರ್ಹವಾಗಿದೆ. ಇದರಲ್ಲಿ 55 ಭದ್ರತಾ ಸಿಬ್ಬಂದಿ ಇರುತ್ತಾರೆ. ಕೆಲವು ಸಿಆರ್‌ಪಿಎಫ್ ಕಮಾಂಡೋಗಳು ದಿನದ 24 ಗಂಟೆಯೂ ಭದ್ರತೆಯಲ್ಲಿ ನಿರತರಾಗಿರುತ್ತಾರೆ. ಭಾರತದಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್, ಅರವಿಂದ್ ಕೇಜ್ರಿವಾಲ್ ಮತ್ತು ಮುಖೇಶ್ ಅಂಬಾನಿ ಅವರಿಗೆ Z Plus ವರ್ಗದ ಭದ್ರತೆಯನ್ನು ನೀಡಲಾಗಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ