ಬಿಹಾರ ಚುನಾವಣೆಯಲ್ಲಿ ಕೊರೊನಾ ಇರಲಿಲ್ಲ,ರೈತರು ಹೋರಾಟಕ್ಕೆ ನಿಂತಾಗ ಮಾತ್ರ ಕೊರೊನಾ ಬಂದಿದೆ-ಯೋಗೇಂದ್ರ ಯಾದವ್
ಗುರುಗ್ರಾಮ್ ದಲ್ಲಿ ಹರಿಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ನವದೆಹಲಿ: ಗುರುಗ್ರಾಮ್ ದಲ್ಲಿ ಹರಿಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ನಡೆಸಿದ ಯೋಗೇಂದ್ರ ಯಾದವ್ ರಾಜ್ಯದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರು ಇತ್ತೀಚೆಗೆ ರೈತರೊಂದಿಗೆ ರ್ಯಾಲಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದರು.ಮನೋಹರ್ಲಾಲ್ ಖಟ್ಟರ್ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಬಹಳ ವಿಚಿತ್ರ ಸಾಂಕ್ರಾಮಿಕ ಇದೆ ಎಂದು ಅವರು ವ್ಯಂಗ್ಯವಾಡಿದರು.
ನಮ್ಮ ಗುರಿ ರೈತ ವಿರೋಧಿ ಪಕ್ಷವನ್ನು ಸೋಲಿಸುವುದು - ಯೋಗೇಂದ್ರ ಯಾದವ್
'ಸರ್ಕಾರವು ಬಳಸುತ್ತಿರುವ ತಂತ್ರಗಳು ಭಾರತೀಯ ರಾಷ್ಟ್ರೀಯವಾದಿಗಳ ವಿರುದ್ಧ ಬ್ರಿಟಿಷರು ಬಳಸಿದ ತಂತ್ರಗಳಿಗೆ ಹೋಲುತ್ತವೆ" ಎಂದು ಯಾದವ್ ತಿಳಿಸಿದರು, ಈ ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಬಂಗಾಳದ ಹೋರಾಟಗಾರರು ಹೋರಾಡಿದಂತೆ, ಇಂದು ದೇಶಾದ್ಯಂತ ಪಂಜಾಬಿನ ರೈತರು ದೇಶದ ರೈತರ ಪರವಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.