ಜನವರಿ 4 ರಂದು ನಡೆಯಲಿರುವ ಮುಂದಿನ ಸುತ್ತಿನ ಮಾತುಕತೆಯಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿಗೆ ಕಾನೂನು ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗಳನ್ನು ಕೇಂದ್ರ ನಿರಾಕರಿಸಿದರೆ ಪ್ರತಿಭಟನಾಕಾರ ರೈತರು ದೆಹಲಿ ಗಡಿಯಲ್ಲಿ ತಮ್ಮ ಆಂದೋಲನವನ್ನು ತೀವ್ರಗೊಳಿಸುತ್ತಾರೆ ಎಂದು ಯೋಗೇಂದ್ರ ಯಾದವ್, ರೈತ ಸಂಘಗಳ ಪರವಾಗಿ ಮಾತನಾಡುತ್ತಾ ಶುಕ್ರವಾರ ಮಾಹಿತಿ ನೀಡಿದರು.
ಈಗಾಗಲೇ ತಿರಸ್ಕರಿಸಲ್ಪಟ್ಟ ಹೊಸ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಭರವಸೆಯನ್ನು ಪುನರಾವರ್ತಿಸಬಾರದು ಆದರೆ ಇನ್ನೂ ಹೆಚ್ಚಿನ ಸುತ್ತಿನ ಮಾತುಕತೆಗಳನ್ನು ಬರೆಯುವಲ್ಲಿ ದೃಢವಾದ ಪ್ರಸ್ತಾವನೆಯನ್ನು ತರಬೇಕು ಎಂದು ಪ್ರತಿಭಟಿಸುವ ರೈತ ಸಂಘಗಳು ದೆಹಲಿ-ಸಿಂಗು ಗಡಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿವೆ."ಪ್ರತಿಭಟನಾ ನಿರತ ರೈತರು ತಿದ್ದುಪಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ನಾವು ಈಗಾಗಲೇ ಗೃಹ ಸಚಿವ ಅಮಿತ್ ಷಾ ಅವರಿಗೆ ತಿಳಿಸಿದ್ದೇವೆ" ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಶಿವ ಕುಮಾರ್ ಕಕ್ಕಾ ಹೇಳಿದ್ದಾರೆ.
ನಿನ್ನೆ ನಡೆದ ಸಭೆಗೆ ದೆಹಲಿ ಚಲೋದ ಏಳು ಸದಸ್ಯರ ರೈತರ ಸಮಿತಿಯ ಭಾಗವಾಗಿದ್ದ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಹಾಜರಾಗುವ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಮುಖ ಬೆಳವಣಿಗೆಯಲ್ಲಿ ದೆಹಲಿ ಪೊಲೀಸರು ಶನಿವಾರದಂದು ಫೆಬ್ರವರಿಯಲ್ಲಿ ನಡೆದ ದೆಹಲಿಯ ಗಲಭೆ ಪ್ರಕರಣದ ವಿಚಾರವಾಗಿ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞೆ ಜಯತಿ ಘೋಷ್, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ರಾಹುಲ್ ರಾಯ್ ಅವರ ಹೆಸರನ್ನು ಪೂರಕ ಚಾರ್ಜ್‌ಶೀಟ್‌ನಲ್ಲಿ ಪರಿಗಣಿಸಿದ್ದಾರೆ.
ಸ್ವರಾಜ್ ಇಂಡಿಯಾ ಪಕ್ಷವು ಪ್ರತಿಪಕ್ಷಗಳ ಮಹಾಘಟಬಂಧನ್ ದ ಭಾಗವಾಗಿರುವುದಿಲ್ಲ ತಮ್ಮ ಗುರಿ ರೈತ ವಿರೋಧಿ ಪಕ್ಷಗಳನ್ನು ಸೋಲಿಸುವುದು ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದರು.
ಸೇಲಂ-ಚೆನ್ನೈ ಎಕ್ಷ್ಪ್ರೆಸ್ ವೇ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಬಂದ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರನ್ನು ನಿನ್ನೆ ತಮಿಳುನಾಡಿನ ಪೊಲೀಸರು ತಿರುವಣ್ಣಾಮಲೈನಲ್ಲಿ ಬಂಧಿಸಿದ್ದರು.
ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ತಮಿಳುನಾಡಿನ ಪ್ರತಿಭಟನಾ ನಿರತರ ಭೇಟಿ ಸಂದರ್ಭದಲ್ಲಿ ಪೊಲೀಸರು ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರ ಫೋನ್ ಕಿತ್ತುಕೊಂಡು ವಾಹನದಲ್ಲಿ ತಳ್ಳಿದ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.