ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರದಂದು ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದಾರೆ.ಚಂಡೀಗಢದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕುಟುಂಬದ ಸಮೇತ ಪಾಲ್ಗೊಂಡಿದ್ದರು.


COMMERCIAL BREAK
SCROLL TO CONTINUE READING

ಇನ್ನೊಂದೆಡೆಗೆ ಪಂಜಾಬ್ ಸಿಎಂ ಮದುವೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆಪ್ ಸಂಸದ ರಾಘವ್ ಚಡ್ಡಾ ಕಾರ್ಯಕ್ರಮದ ಮೊದಲ ಫೋಟೋಗಳನ್ನು ಟ್ವೀಟ್ ಮಾಡಿ "ಇಂದು ನನ್ನ ಗೆಳೆಯನ ಮದುವೆ, ಇದಕ್ಕಾಗಿ ನಾವು ತುಂಬಾ ಉತ್ಸುಕರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Malaika Arora: ಡೀಪ್‌ ನೆಕ್‌ ಉಡುಪಿನಲ್ಲಿ ಮಲೈಕಾ ಅರೋರಾ


ಗುರುಪ್ರೀತ್ ಕೌರ್ ಯಾರು?


ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೋವಾಗೆ ಸೇರಿದ 30 ವರ್ಷದ ಗುರುಪ್ರೀತ್ ಕೌರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಅವರು 2018 ರಲ್ಲಿ ಹರಿಯಾಣದ ಖಾಸಗಿ ವಿಶ್ವವಿದ್ಯಾನಿಲಯದಿಂದ ಎಂಬಿಬಿಎಸ್ ಪದವಿಯನ್ನು ಪೂರೈಸಿದ್ದಾರೆ.ಅವರಿಗೆ ಇಬ್ಬರು ಸಹೋದರಿಯರಿದ್ದು, ಈಗ ಅವರು ವಿದೇಶದಲ್ಲಿ ನೆಲೆಸಿದ್ದಾರೆ.


ಗುರುಪ್ರೀತ್ ಕೌರ್ ಅವರಿಗೆ ಭಗವಂತ್ ಮಾನ್ ಅವರು ಮೊದಲಿನಿಂದಲೂ ಪರಿಚಿತರು, ಮನ್ ಸಹೋದರಿಯ ಸ್ನೇಹಿತರಾಗಿದ್ದರಿಂದ ಅವರು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು.ಮನ್ ಅವರಿಗೆ ಕೌರ್ ಅವರನ್ನು ಮದುವೆಯಾಗಲು ಅವರ ತಾಯಿ ಮತ್ತು ಸಹೋದರಿಯರು ಒತ್ತಾಯಿಸಿದ್ದರು ಎನ್ನಲಾಗಿದೆ.


ಇದನ್ನೂ ಓದಿ: Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?


ಇದು ಮಾನ್ ಅವರ ಎರಡನೇ ಮದುವೆಯಾಗಿದ್ದು.ಅವರ ಮೊದಲ ಪತ್ನಿ ಇಂದರ್‌ಜೀತ್ ಕೌರ್ 2015 ರಲ್ಲಿ ವಿಚ್ಛೇದನ ಪಡೆದಿದ್ದರು, ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಈಗ ಅವರು ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

.