Covid-19- ದೇಶಾದ್ಯಂತ ಇದ್ದಕ್ಕಿದ್ದಂತೆ ಕೋವಿಡ್ -19 ಪ್ರಕರಣ ಹೆಚ್ಚಳದ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಆರೋಗ್ಯ ಸಚಿವರು
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಪ್ರತಿಕ್ರಿಯಿಸಿದ್ದು ಕೋವಿಡ್ -19 ಪ್ರಕರಣಗಳಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನವದೆಹಲಿ: ಭಾರತದಲ್ಲಿ ಹಠಾತ್ತನೆ ಹೆಚ್ಚಳವಾಗುತ್ತಿರುವ ಕೊರೊನಾವೈರಸ್ (Coronavirus in India) ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ (Dr Harsh Vardhan) ಅವರು ಈ ಸಮಯದಲ್ಲಿ, ಕೋವಿಡ್ -19 ರ ಹೊಸ ಪ್ರಕರಣಗಳು ಹಠಾತ್ತನೆ ಹೆಚ್ಚಾಗುತ್ತಿರುವ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.
ಕೋವಿಡ್ -19 ಪ್ರಕರಣಗಳು ದೇಶಾದ್ಯಂತ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗಿದೆ?
ದೊಡ್ಡ ವಿವಾಹಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ರೈತರ ಚಳವಳಿಯಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸದಿರುವುದೇ ಕೋವಿಡ್ -19 (Covid 19) ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ (Dr Harsh Vardhan) ತಿಳಿಸಿದ್ದಾರೆ.
ಕರೋನಾವೈರಸ್ ಪ್ರಕರಣಗಳು ಅಧಿಕವಾಗಿರುವ 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಾದ ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ದೆಹಲಿ, ತಮಿಳುನಾಡು, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್ (Dr Harsh Vardhan) ಅವರು ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸದೇ ಇರುವುದೇ ಪ್ರಕರಣಗಳ ಏರಿಕೆಗೆ ಒಂದು ದೊಡ್ಡ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ - Lockdown: ಭಾರತದಲ್ಲಿ ಮತ್ತೆ ಒಂದು ತಿಂಗಳು ಲಾಕ್‌ಡೌನ್ ಆದರೆ ಏನಾಗುತ್ತೆ? ಅಮೆರಿಕದ ಕಂಪನಿ ಹೇಳಿದ್ದೇನು?
ಕೋವಿಡ್ ಮಾರ್ಗಸೂಚಿಗಳಿಗೆ 'ತಿಲಾಂಜಲಿ' :
ಇತ್ತೀಚಿನ ದಿನಗಳಲ್ಲಿ ಜನರು ಎಲ್ಲಿಯೂ ಕೂಡ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಸರಿಯಾಗಿ ಮಾಸ್ಕ್ (Mask) ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾರುಕಟ್ಟೆಗಳಲ್ಲಿ ಜನಸಂದಣಿ ದಟ್ಟವಾಗಿದೆ. ಈ ಕಾರಣದಿಂದಾಗಿ ಕರೋನಾವೈರಸ್‌ನ ಹೊಸ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಕಳೆದ ವರ್ಷ ನಮ್ಮಲ್ಲಿ ಲಸಿಕೆ ಕೂಡ ಇರಲಿಲ್ಲ. ಅದಾಗ್ಯೂ ಕರೋನಾ ಮಾರ್ಗಸೂಚಿಗಳನ್ನು ಅನುಸರಿಸಿದ್ದರಿಂದ ಕರೋನಾ ಪ್ರಕರಣಗಳಲ್ಲಿ ಈ ಮಟ್ಟದಲ್ಲಿ ಏರಿಕೆ ಕಂಡಿರಲಿಲ್ಲ ಎಂದು ಡಾ. ಹರ್ಷ್ ವರ್ಧನ್ ತಿಳಿಸಿದರು.
ಇದನ್ನೂ ಓದಿ - Coronavirus Return : ಒಂದೇ ದಿನಕ್ಕೆ 1.15 ಲಕ್ಷ ಹೊಸ ಪ್ರಕರಣಗಳು ವರದಿ, ಕರ್ನಾಟಕವೂ ಸೇರಿ ಕೆಲ ರಾಜ್ಯಗಳಲ್ಲಿ ಹೆಚ್ಚು ಕೇಸ್
ಈ ರಾಜ್ಯಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ:
ದೇಶದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹೊರತಾಗಿಯೂ, ಸಾವಿನ ಪ್ರಮಾಣವು ಶೇಕಡಾ 1.30 ರಷ್ಟಿದೆ. ಕರೋನಾವೈರಸ್‌ನಿಂದ ಚೇತರಿಸಿಕೊಳ್ಳುವವವರ ಪ್ರಮಾಣ ಶೇಕಡಾ 92.38 ಆಗಿದೆ ಎಂಬುದು ಸಮಾಧಾನಕರ ವಿಷಯವಾಗಿದೆ. ಆದರೆ ಛತ್ತೀಸ್‌ಗಢದಲ್ಲಿ ಸಕಾರಾತ್ಮಕತೆ ಪ್ರಮಾಣವು 20 ಪ್ರತಿಶತ ಮತ್ತು ಬೆಳವಣಿಗೆಯ ದರವು 8 ಪ್ರತಿಶತ ದಷ್ಟಿರುವುದು ಶೋಚನೀಯ ಸಂಗತಿ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.