ಸರಿಯಾಗಿ ಸೂರ್ಯೋದಯಕ್ಕೂ ಮುನ್ನ ಹುಂಜ ಏಕೆ ಕೂಗುತ್ತೆ ಗೊತ್ತೆ..? ಈ ವೈಜ್ಞಾನಿಕ ಕಾರಣಗಳನ್ನ ಕೇಳಿದ್ರೆ ಶಾಕ್ ಆಗ್ತೀರಾ..
Viral News : ಹಿಂದಿನ ಕಾಲದಲ್ಲಿ ಹುಂಜ ಕೂಗುವುದನ್ನು ಕೇಳಿ ಸೂರ್ಯೋದಯವಾಯ್ತು ಅಂತ ಎಳುತ್ತಿದ್ದರು. ಈಗ ಬೆಳಗ್ಗೆ ಬೇಗ ಅಲಾರಂ ಹಾಕಿಕೊಂಡು ಏಳುತ್ತಾರೆ.. ಆದರೆ ಆಗ ಅಂತಹ ತಂತ್ರಜ್ಞಾನ ಇರಲಿಲ್ಲ. ಹುಂಜ ಕೂಗುವ ಸದ್ದು ಕೇಳಿ ಈಗಷ್ಟೇ ಬೆಳಗಾಯಿತು ಅಂತ ಎದ್ದೇಳುತ್ತಿದ್ದರು.. ಅಸಲಿಗೆ ಹುಂಜ ಬೆಳಿಗ್ಗೆ ಏಕೆ ಕೂಗುತ್ತೆ ಎನ್ನುವ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ.. ಬನ್ನಿ ತಿಳಿಯೋಣ..
Reason behand Rooster crowing : ಹುಂಜದ ದೇಹದಲ್ಲಿ 'ಸಿರ್ಕಾಡಿಯನ್ ರಿದಮ್' ಎಂಬ ಆಂತರಿಕ ಗಡಿಯಾರವಿದೆ. ಈ ಗಡಿಯಾರವು ದಿನವಿಡೀ ಹುಂಜ ಏನು ಮಾಡಬೇಕು (24-ಗಂಟೆಗಳ ಚಕ್ರ), ಯಾವಾಗ ಮಲಗಬೇಕು ಮತ್ತು ಯಾವಾಗ ಎದ್ದೇಳಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ಸೂರ್ಯ ಉದಯಿಸಿದಾಗ ಮತ್ತು ಅಸ್ತಮಿಸುವಾಗ ಏನು ಮಾಡಬೇಕೆಂದು ಕೋಳಿಗೆ ಹೇಳುತ್ತದೆ.
ಸೂರ್ಯನು ಉದಯಿಸಲು ಪ್ರಾರಂಭಿಸಿದಾಗ, ಈ ಗಡಿಯಾರವು ಹುಂಜಕ್ಕೆ ಸಂಕೇತವನ್ನು ನೀಡುತ್ತದೆ. ಅಲ್ಲಿಯವರೆಗೂ ಮಲಗಿದ್ದ ಕೋಳಿಗೆ ಹೊಸ ದಿನವೊಂದು ಆರಂಭವಾಗಲಿದೆ ಎಂದು ತಿಳಿದು ಆಕ್ವಿವ್ ಆಗುತ್ತದೆ.. ಅದಕ್ಕೆ ಎದ್ದು ಜೋರಾಗಿ ಕೂಗುತ್ತದೆ..
ಇದನ್ನೂ ಓದಿ:ದೇಶದ ಸಮಗ್ರತೆ, ಐಕ್ಯತೆ ಸಾರುವ ‘ರಾಷ್ಟ್ರೀಯ ಏಕತಾ ದಿನಾಚರಣೆ'
ಕೋಳಿಗಳಿಗೂ ಸಹ ಈ ಜೈವಿಕ ಗಡಿಯಾರ ಇರುತ್ತದೆ.. ಆದರೆ ಅದು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಯಾವಾಗ ಮೊಟ್ಟೆಗಳನ್ನು ಇಡಬೇಕು ಎಂದು ಮಾತ್ರ ಹೇಳುತ್ತದೆ. ಕೋಳಿಗೆ ಮುಂಜಾನೆ ಎದ್ದು ಕೂಗುವ ಸ್ವಭಾವ ಇರುವುದಿಲ್ಲ.
ಬೆಳಕನ್ನು ಪತ್ತೆಹಚ್ಚುವ ಕಣ್ಣುಗಳು : ಹುಂಜದ ಕಣ್ಣುಗಳು ಬಹಳ ಬುದ್ಧಿವಂತ ಮತ್ತು ಸೂಕ್ಷ್ಮವಾಗಿರುತ್ತವೆ. ಸೂರ್ಯ ಉದಯಿಸಿದಾಗ, ಸ್ವಲ್ಪ ಬೆಳಕು ಇರುತ್ತದೆ, ಮತ್ತು ಕೋಳಿಯ ಕಣ್ಣುಗಳು ತಕ್ಷಣವೇ ಆ ಬೆಳಕನ್ನು ಗಮನಿಸುತ್ತವೆ. ಬೆಳಕನ್ನು ನೋಡುವ ಕಣ್ಣುಗಳು ಕೋಳಿಯ ಮೆದುಳಿಗೆ ಸಂಕೇತವನ್ನು ಕಳುಹಿಸುತ್ತವೆ. ಕೋಳಿ ಸಿಗ್ನಲ್ ಸ್ವೀಕರಿಸಿ, ಬೆಳಗ್ಗೆಯಾಗಿದೆ, ಉಳಿದ ಕೋಳಿಗಳನ್ನು ಎಬ್ಬಿಸಬೇಕು.. ಅಂತ ಯೋಚಿಸಿ ಕೂಗುತ್ತದೆಯಂತೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ