ಅಯೋಧ್ಯೆ ರಾಮ ಮಂದಿರ , 9 ರೈಲು ನಿಲ್ದಾಣ ಸ್ಪೋಟಿಸುವ ಎಚ್ಚರಿಕೆ, ಸ್ಟೇಷನ್ ಮಾಸ್ಟರ್ ಕೈಗೆ ಬೆದರಿಕೆ ಪತ್ರ
ಹಿಂದೂಸ್ತಾನವನ್ನು ನಾಶ ಮಾಡುವುದಾಗಿ ಆ ಪತ್ರದಲ್ಲಿ ಬರೆಯಲಾಗಿದೆ. ನವೆಂಬರ್ 26 ರಂದು, ಹಾಪುರ್, ಖುರ್ಜಾ, ಅಲಿಗಢ, ಕಾನ್ಪುರ್, ತುಂಡ್ಲಾ, ಬರೇಲಿ, ಮೊರಾದಾಬಾದ್, ಲಕ್ನೋ ಮತ್ತು ಗೋರಖ್‌ಪುರ ಸೇರಿದಂತೆ ಹಲವು ರೈಲು ನಿಲ್ದಾಣಗಳನ್ನು ಬಾಂಬ್‌ಗಳಿಂದ ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಪುರ್ : ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯ ರಾಮ ಮಂದಿರ (Ayodhya) ಸೇರಿದಂತೆ ದೇಶದ ಹಲವು ಪ್ರಮುಖ ದೇವಾಲಯಗಳು ಮತ್ತು 9 ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಹೀಗಂತ ಬೆದರಿಕೆ ಪತ್ರವನ್ನು ಹಾಪುರದ ಸ್ಟೇಷನ್ ಮಾಸ್ಟರ್ ಗೆ (Hapur's Station Master) ನೀಡಲಾಗಿದೆ. ಜಿಹಾದಿಗಳ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಈ ಪತ್ರದಲ್ಲಿ ಹೇಳಲಾಗಿದೆ. ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba) ಹೆಸರಿನಲ್ಲಿ ಈ ಬೆದರಿಕೆ ಪತ್ರ ನೀಡಲಾಗಿದೆ.
ಭಾರತವನ್ನು ನಾಶ ಮಾಡುವ ಬೆದರಿಕೆ :
ಹಿಂದೂಸ್ತಾನವನ್ನು ನಾಶ ಮಾಡುವುದಾಗಿ ಆ ಪತ್ರದಲ್ಲಿ ಬರೆಯಲಾಗಿದೆ. ನವೆಂಬರ್ 26 ರಂದು, ಹಾಪುರ್, ಖುರ್ಜಾ, ಅಲಿಗಢ, ಕಾನ್ಪುರ್, ತುಂಡ್ಲಾ, ಬರೇಲಿ, ಮೊರಾದಾಬಾದ್, ಲಕ್ನೋ ಮತ್ತು ಗೋರಖ್‌ಪುರ ಸೇರಿದಂತೆ ಹಲವು ರೈಲು ನಿಲ್ದಾಣಗಳನ್ನು ಬಾಂಬ್‌ಗಳಿಂದ ಸ್ಫೋಟಿಸಲಾಗುವುದು (Bomb Blast) ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : PM Mudra Loan : 1999 ರೂ. ಜಮಾ ಮಾಡಿದರೆ ಸಿಗಲಿದೆಯಾ 10 ಲಕ್ಷಗಳವರೆಗೆ ಲೋನ್ ? ಸರ್ಕಾರ ಹೇಳಿದ್ದೇನು ?
ಈ ನಗರಗಳ ದೇವಾಲಯಗಳನ್ನು ಸ್ಫೋಟಿಸುವ ಬೆದರಿಕೆ :
ಇದಿಷ್ಟೇ ಅಲ್ಲ ಡಿಸೆಂಬರ್ 6ರಂದು ಅಲಹಾಬಾದ್, ಅಯೋಧ್ಯೆ (Ayodhya) , ಹರಿದ್ವಾರ, ಉಜ್ಜಯಿನಿ, ಮುಂಬೈ, ಅಹಮದಾಬಾದ್ ದೇವಾಲಯಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಆ ಪತ್ರದಲ್ಲಿ ಹೇಳಲಾಗಿದೆ.
ಲಷ್ಕರ್-ಎ-ತೊಯ್ಬಾ ಹೆಸರಿನಲ್ಲಿ ಪತ್ರ :
ಆ ಪತ್ರದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ (Lashkar-e-Taiba) ಕಮಾಂಡರ್ ಅಮೀಮ್ ಶೇಖ್ ಹೆಸರನ್ನು ಉಲ್ಲೇಖಿಸಲಾಗಿದೆ. ತನ್ನನ್ನು ತಾನು ಕರಾಚಿಯ ನಿವಾಸಿ ಎಂದು ಕೂಡಾ ಹೇಳಲಾಗಿದೆ. ಪತ್ರದಲ್ಲಿ ಲಷ್ಕರ್-ಎ-ತೈಬಾ ಜಿಂದಾಬಾದ್ ಮತ್ತು ಪಾಕಿಸ್ತಾನ್ (Pakisan) ಜಿಂದಾಬಾದ್ ಎಂದು ಬರೆಯಲಾಗಿದೆ.
ಇದನ್ನೂ ಓದಿ : Sameer Wankhede ಬಳಿಕ Devendra Fadnavis ಮೇಲೆ ಹರಿಹಾಯ್ದ Nawab Malikರಿಂದ ಗಂಭೀರ ಆರೋಪ
ಹಾಪುರದ ಸ್ಟೇಷನ್ ಮಾಸ್ಟರ್‌ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ, ಎಚ್ಚರದಿಂದ ಇರುವಂತೆ ಎಡಿಜಿ ರೈಲ್ವೇ ಆದೇಶ ಹೊರಡಿಸಿದ್ದಾರೆ. ಇದೀಗ ಆ ಪತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪತ್ರವನ್ನು ಎಲ್ಲಿಂದ ಬಂತು, ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯುಪಿ ಎಟಿಎಸ್ (ATS) ಕೂಡ ತನಿಖೆ ನಡೆಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ