PM Mudra Loan : 1999 ರೂ. ಜಮಾ ಮಾಡಿದರೆ ಸಿಗಲಿದೆಯಾ 10 ಲಕ್ಷಗಳವರೆಗೆ ಲೋನ್ ? ಸರ್ಕಾರ ಹೇಳಿದ್ದೇನು ?

ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಕುರಿತ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 1999 ರೂಪಾಯಿಗಳನ್ನು ಠೇವಣಿ ಇಟ್ಟರೆ, ಪಿಎಂ ಮುದ್ರಾ ಯೋಜನೆಯಡಿಯಲ್ಲಿ ಸಾಲ ನೀಡಲಾಗುವುದು ಎಂದು ಈ ಸಂದೇಶದಲ್ಲಿ ಹೇಳಲಾಗುತ್ತದೆ.

Written by - Ranjitha R K | Last Updated : Nov 1, 2021, 12:54 PM IST
  • PM Mudra Loan ಅಡಿಯಲ್ಲಿ ನೀಡುತ್ತಿದೆಯಾ 10 ಲಕ್ಷಗಳವರೆಗೆ ಲೋನ್
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಸಂದೇಶ
  • ಫ್ಯಾಕ್ಟ್ ಚೆಕ್ ಮೂಲಕ ಪಿಐಬಿ ನೀಡಿದೆ ಈ ಮಾಹಿತಿ
PM Mudra Loan : 1999 ರೂ. ಜಮಾ ಮಾಡಿದರೆ ಸಿಗಲಿದೆಯಾ  10 ಲಕ್ಷಗಳವರೆಗೆ ಲೋನ್ ? ಸರ್ಕಾರ ಹೇಳಿದ್ದೇನು ?  title=
PM Mudra Loan (file photo)

ನವದೆಹಲಿ : PIB Fact Check : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಸಹಾಯ ಮಾಡಲು ವಿಭಿನ್ನ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದೇ ರೀತಿ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯೋಜನಕಾರಿ ಯೋಜನೆಯನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ. ಈ ಯೋಜನೆಯಡಿ ಸರ್ಕಾರದಿಂದ ಜನರಿಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಬಡ್ಡಿ ದರ ತೀರಾ ಕಡಿಮೆ. ಈ ಮಧ್ಯೆ, ಯೋಜನೆಯ ಬಗೆಗಿನ ಕೆಲವು ಸಂದೇಶಗಳು ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿದೆ ಸಂದೇಶ : 
ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಕುರಿತ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿದೆ. 1999 ರೂಪಾಯಿಗಳನ್ನು ಠೇವಣಿ ಇಟ್ಟರೆ, ಪಿಎಂ ಮುದ್ರಾ ಯೋಜನೆಯಡಿಯಲ್ಲಿ (PM mudra yojana) ಸಾಲ ನೀಡಲಾಗುವುದು ಎಂದು ಈ ಸಂದೇಶದಲ್ಲಿ ಹೇಳಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೇಂದ್ರ ಸರ್ಕಾರ ಹೊರಡಿಸಿರುವ ಪತ್ರ, ಸಾಲ ಕೊಡಿಸುವ ಗ್ಯಾರಂಟಿ ಎಂದು ಈ ಸಂದೇಶದಲ್ಲಿ ಹೇಳಲಾಗುತ್ತಿದೆ.

ಇದನ್ನೂ ಓದಿ : Pension Scheme: ಪ್ರತಿ ತಿಂಗಳು ರೂ. 210 ಠೇವಣಿ ಮಾಡಿ 5000 ರೂ. ಪಿಂಚಣಿ ಪಡೆಯಿರಿ

ಈ ವೈರಲ್ ಸಂದೇಶದ ಹಿಂದಿನ ಸತ್ಯವೇನು?
ನೀವು ಕೂಡಾ ಈ ಸಂದೇಶವನ್ನು ಸ್ವೀಕರಿಸಿದ್ದರೆ, ಮೊದಲು ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಿ. ಕೆಲವೊಮ್ಮೆ ಇಂತಹ ನಕಲಿ ಸಂದೇಶಗಳು ವೈರಲ್ (Viral) ಆಗುತ್ತವೆ. ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ವೈರಲ್ ಸಂದೇಶಗಳ ಸತ್ಯಾಸತ್ಯತೆ ಪರೀಕ್ಷಿಸುವ ಸರ್ಕಾರಿ ಮಾಹಿತಿ ಸಂಸ್ಥೆ PIB, ಅದರ ಸತ್ಯ-ಪರಿಶೀಲನೆ ಮಾಡಿದೆ. ಪಿಎಂ ಮುದ್ರಾ ಯೋಜನೆಗೆ ಸಂಬಂಧಿಸಿದ ಈ ವೈರಲ್ ಸಂದೇಶದ ಸಂಪೂರ್ಣ ತನಿಖೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದೆ.  

ಪಿಐಬಿ  ನೀಡಿದೆ ಈ ಮಾಹಿತಿ :
ಪಿಐಬಿ ಫ್ಯಾಕ್ಟ್ ಚೆಕ್ (PIB Fact check) ಟ್ವೀಟ್ ಮಾಡುವ ಮೂಲಕ, ಈ ಸಂದೇಶದ ಬಗ್ಗೆ ಮಾಹಿತಿ ನೀಡಿದೆ.  ಫ್ಯಾಕ್ಟ್ ಚೆಕ್ ನಂತರ ಈ ವೈರಲ್ ಸಂದೇಶ ಸಂಪೂರ್ಣ ನಕಲಿ ಎಂದು ಹೇಳಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸರ್ಕಾರವು ಅಂತಹ ಯಾವುದೇ ಪತ್ರವನ್ನು ನೀಡಿಲ್ಲ.  ಕೇಂದ್ರ ಸರ್ಕಾರದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಮೋಸದ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಿ ಎಂದು ಟ್ವೀಟ್‌ನಲ್ಲಿ (tweet) ಹೇಳಲಾಗಿದೆ.

 

ಇದನ್ನೂ ಓದಿ :  Bank Holidays November 2021: ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ, ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಎಂದರೇನು?
 8 ಏಪ್ರಿಲ್ 2015 ರಂದು ಕೇಂದ್ರ ಸರ್ಕಾರ 'ಪ್ರಧಾನ ಮಂತ್ರಿ ಮುದ್ರಾ ಯೋಜನೆ'ಯನ್ನು ಪ್ರಾರಂಭಿಸಿತ್ತು.  ಈ ಯೋಜನೆಯಡಿಯಲ್ಲಿ, ಸಾಮಾನ್ಯ ಜನರು ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸಾಲವನ್ನು ನೀಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಗ್ಯಾರಂಟಿ ನೀಡಲಾಗಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News