ಕೋಲ್ಕತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಬಿಜೆಪಿಗೆ ಸೇರಿದ ಮುಕುಲ್ ರಾಯ್ (Mukul Roy) ಅವರು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಭೇಟಿಯಾಗುವ ಮೊದಲೇ ಮುಕುಲ್ ರಾಯ್ ಟಿಎಂಸಿಗೆ ಮರಳುವ ಬಗ್ಗೆ ಊಹಾಪೋಹಗಳು ಹುಟ್ಟುಕೊಂಡಿವೆ.


COMMERCIAL BREAK
SCROLL TO CONTINUE READING

ಮುಕುಲ್ ರಾಯ್ ಅವರ ಮಡದಿ ಅನಾರೋಗ್ಯಕ್ಕೆ ಈಡಾಗಿದ್ದು ಅವರನ್ನು ನೋಡಲು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಬಂದಿದ್ದರು. ಜೂನ್ 2ರಂದು ಆಸ್ಪತ್ರೆಯಲ್ಲಿ ಮುಕುಲ್ ರಾಯ್ (Mukul Roy) ಮತ್ತು ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿದ್ದರು. ಅಂದಿನಿಂದಲೇ ರಾಜಕೀಯ ಸಮೀಕರಣವು ಬದಲಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಇಂದು ಮುಕುಲ್ ರಾಯ್ ಅವರು ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಭೇಟಿ ಮಾಡುತ್ತಿರುವುದು ಊಹೆಗಳಿಗೆ ಪುಷ್ಠಿ ನೀಡಿದೆ.


ಇದನ್ನೂ ಓದಿ - 7th Pay Commission : ಕೇಂದ್ರ ನೌಕರರ ವೇತನದ ಮೇಲೆ ಪರಿಣಾಮ ಬೀರುವ 'Fitment Factor' ಬಗ್ಗೆ ನಿಮಗೆಷ್ಟು ಗೊತ್ತು?


ಬಿಜೆಪಿಗೆ ಸೇರುವ ಮೊದಲು ಮುಕುಲ್ ರಾಯ್ (Mukul Roy) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ 2017 ರಲ್ಲಿ ಟಿಎಂಸಿ ಬಿಟ್ಟು ಬಿಜೆಪಿಗೆ ಸೇರಿದ್ದರು. ಸದ್ಯ ಮುಕುಲ್ ರಾಯ್ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.


ಇದನ್ನೂ ಓದಿ - ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ನೇಮಕ


ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ (West Bengal Assembly Election) ಮುನ್ನ ಹಲವು ಸಚಿವರು, ಶಾಸಕರು, ಸಂಸದರು ಮತ್ತು ನಾಯಕರು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದರು. ಈಗ ಬಹುತೇಕ ಮಂದಿ ಬಿಜೆಪಿ ಬಿಟ್ಟು ಟಿಎಂಸಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಮುಕುಲ್ ರಾಯ್ ಇಂದು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗುತ್ತಿರುವುದರಿಂದ ಅವರಿಗೆ ಟಿಎಂಸಿ ಬಾಗಿಲು ತೆರೆಯಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಚುನಾವಣಾ‌ ಸಮಯದಲ್ಲಿ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಬಾರದೆಂಬ ಕೂಗು ಟಿಎಂಸಿಯಲ್ಲಿ ಕೇಳಿಬರುತ್ತಿದೆ. ಅದೇ ಕಾರಣಕ್ಕೆ ಯಾರನ್ನೂ ಸೇರಿಸಿಕೊಂಡಿಲ್ಲ. ಆದುದರಿಂದ ಮರಳಿ ಮಾತೃ ಪಕ್ಷ ಸೇರುವ ಮುಕುಲ್ ರಾಯ್ ಇಚ್ಛೆ ಈಡೇರುತ್ತದೆ ಎಂದು ಹೇಳುವುದು ಅಷ್ಟು ಸುಲಭವೂ‌ ಅಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕಾದುನೋಡಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.