7th Pay Commission : ಕೇಂದ್ರ ನೌಕರರ ವೇತನದ ಮೇಲೆ ಪರಿಣಾಮ ಬೀರುವ 'Fitment Factor' ಬಗ್ಗೆ ನಿಮಗೆಷ್ಟು ಗೊತ್ತು?

ಡಿಎ ಹೆಚ್ಚಳವು ಮಾಸಿಕ ಪಿಎಫ್ ಕಡಿತದಲ್ಲಿ ಹೇಗೆ ಏರಿಕೆಗೆ ಕಾರಣವಾಗುತ್ತದೆ

Last Updated : Jun 11, 2021, 11:27 AM IST
  • ಸುಮಾರು 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ತಮ್ಮ ವೇತನ ಹೆಚ್ಚಳ
  • ಮಾಸಿಕ ವೇತನದ ಮೇಲೆ ಪರಿಣಾಮ ಬೀರುವ 7ನೇ ವೇತನ ಆಯೋಗದ ಫಿಟ್ ಮೆಂಟ್ ಫ್ಯಾಕ್ಟರ್
  • ಡಿಎ ಹೆಚ್ಚಳವು ಮಾಸಿಕ ಪಿಎಫ್ ಕಡಿತದಲ್ಲಿ ಹೇಗೆ ಏರಿಕೆಗೆ ಕಾರಣವಾಗುತ್ತದೆ
7th Pay Commission : ಕೇಂದ್ರ ನೌಕರರ ವೇತನದ ಮೇಲೆ ಪರಿಣಾಮ ಬೀರುವ 'Fitment Factor' ಬಗ್ಗೆ ನಿಮಗೆಷ್ಟು ಗೊತ್ತು? title=

ನವದೆಹಲಿ : ಸುಮಾರು 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ತಮ್ಮ ವೇತನ ಹೆಚ್ಚಳಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಮತ್ತು ಈ ಕುರಿತು ಅವರು ಉತ್ಸುಕರಾಗಿದ್ದಾರೆ. ಅವರ ಮಾಸಿಕ ವೇತನದ ಮೇಲೆ ಪರಿಣಾಮ ಬೀರುವ 7ನೇ ವೇತನ ಆಯೋಗದ ಫಿಟ್ ಮೆಂಟ್ ಫ್ಯಾಕ್ಟರ್ ಎಂದು ಕರೆಯಲ್ಪಡುವ ವಿಷಯ ಇದೆ ಎಂದು ಅವರು ತಿಳಿದಿರಬೇಕು. ಕೇಂದ್ರವು ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಘೋಷಿಸಿದ ಕೂಡಲೇ, ಈ 7ನೇ ವೇತನ ಆಯೋಗದ ಫಿಟ್ ಮೆಂಟ್ ಅಂಶದ ಬಗ್ಗೆ ಕೇಂದ್ರ ಸರ್ಕಾರಿ ನೌಕರರು (CGS) ಚರ್ಚೆ ನಡೆಸುತ್ತಿದ್ದಾರೆ. 7ನೇ ಸಿಪಿಸಿ ಫಿಟ್ ಮೆಂಟ್ ಅಂಶದ ಪ್ರಕಾರ, ಕೇಂದ್ರ ಸರ್ಕಾರಿ ಉದ್ಯೋಗಿಯ 7ನೇ ಸಿಪಿಸಿ ವೇತನವನ್ನು ನಿರ್ಧರಿಸಲಾಗುತ್ತದೆ.

ಜೆಸಿಎಂನ ರಾಷ್ಟ್ರೀಯ ಮಂಡಳಿಯ ಸಿಬ್ಬಂದಿ ತಂಡದ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಮಾತನಾಡಿ 7ನೇ ವೇತನ ಆಯೋಗ(7th Pay Commission)ದ ಫಿಟ್ ಮೆಂಟ್ ಅಂಶದ ಬಗ್ಗೆ ವಿವರಗಳನ್ನು ನೀಡಿದರು ಮತ್ತು ಡಿಎ ಯನ್ನು ಪುನಃಸ್ಥಾಪಿಸಿದ ನಂತರ, ಕೇಂದ್ರ ಸರ್ಕಾರಿ ಉದ್ಯೋಗಿಯ ಡಿಎ ಅಸ್ತಿತ್ವದಲ್ಲಿರುವ ಶೇಕಡಾ 17 ರಿಂದ ಕನಿಷ್ಠ ಶೇಕಡಾ 28 ಕ್ಕೆ ಜಿಗಿಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ : ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ

7ನೇ ವೇತನ ಆಯೋಗವನ್ನು ಅನುಷ್ಠಾನಗೊಳಿಸುವಾಗ 7ನೇ ಸಿಪಿಸಿ ಫಿಟ್ ಮೆಂಟ್(Fitment Factor) ಅಂಶವನ್ನು 2.57ಕ್ಕೆ ನಿಗದಿಪಡಿಸಲಾಗಿದೆ ಮತ್ತು ಉದ್ಯೋಗಿಯ ಮಾಸಿಕ ಮೂಲ ವೇತನ ಮತ್ತು ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಯಿಟಿಯಂತಹ ಮಾಸಿಕ ಕೊಡುಗೆ ಜುಲೈನಿಂದ ಏರಿಕೆ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು. ಏಳನೇ ವೇತನ ಆಯೋಗದ ಫಿಟ್ ಮೆಂಟ್ ಅಂಶವು ಮೂಲ ವೇತನವನ್ನು ಫಿಟ್ ಮೆಂಟ್ ಅಂಶದೊಂದಿಗೆ ಗುಣಿಸುವ ಮೂಲಕ ಮಾಸಿಕ ಮೂಲ ವೇತನವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ : CoWin Data Leak- ಕೋವಿನ್ ಅಪ್ಲಿಕೇಶನ್‌ನ ಡೇಟಾವನ್ನು ಹ್ಯಾಕ್ ಮಾಡಲಾಗಿದೆಯೇ?

ಡಿಎ ಹೆಚ್ಚಳವು(DA Hike) ಮಾಸಿಕ ಪಿಎಫ್ ಕಡಿತದಲ್ಲಿ ಹೇಗೆ ಏರಿಕೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ವಿವರಗಳನ್ನು ನೀಡಿದ ಟ್ರಾನ್ಸೆಂಡ್ ಕನ್ಸಲ್ಟೆಂಟ್ಸ್ ನ ವೆಲ್ತ್ ಮ್ಯಾನೇಜ್ ಮೆಂಟ್ ನ ನಿರ್ದೇಶಕ ಕಾರ್ತಿಕ್ ಝಾವೇರಿ ಅವರು ಮಾಸಿಕ ಪಿಎಫ್ ಅನ್ನು ಒಬ್ಬರ ಮೂಲ ವೇತನ ಮತ್ತು ಡಿಎ ಆಧಾರದ ಮೇಲೆ PF ನ್ನು ನಿರ್ಧರಿಸಲಾಗುತ್ತದೆ . 'ಅಂದರೆ, ಡಿಎ ಹೆಚ್ಚಳವಾದರೆ ಕೇಂದ್ರ ಸರ್ಕಾರಿ ನೌಕರರ ಪಿಎಫ್ ಸಹ ಹೆಚ್ಚಾಗಿ ಕಡಿತವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : Home Loan Rates:ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News