ನವದೆಹಲಿ: ಕರೋನಾ ವೈರಸ್ (Coronavirus) ಸೋಂಕಿನ ಹರಡುವಿಕೆಯ ವೇಗವು ರಾಷ್ಟ್ರ ರಾಜಧಾನಿಯನ್ನು ನಡುಗಿಸಿಬಿಟ್ಟಿದೆ. ಕರೋನಾ ಸೋಂಕಿನ ಹೊಸ ಅಂಕಿ ಅಂಶಗಳು ಹಳೆಯ ದಾಖಲೆಗಳನ್ನು ಮುರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ 25,462 ಹೊಸ ಕರೋನಾ (COVID-19) ಪ್ರಕರಣಗಳು ವರದಿಯಾಗಿವೆ. ಅಂದರೆ, ಪ್ರತಿ ಗಂಟೆಗೆ ಒಂದು ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಆಸ್ಪತ್ರೆಗಳಲ್ಲಿ, ಹಾಸಿಗೆಗಳು ಮತ್ತು ಆಮ್ಲಜನಕದ (Oxygen) ಕೊರತೆಯ ನಡುವೆ ಸೋಂಕಿನ ಪ್ರಮಾಣವು 30 ಪ್ರತಿಶತವನ್ನು ತಲುಪಿದೆ. ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ರಾಜ್ಯದಲ್ಲಿ  ಲಾಕ್ ಡೌನ್ (Lockdown) ಹೇರುವ ಬಗ್ಗೆ ಯೋಚನೆಯಲ್ಲಿದೆ ಸರ್ಕಾರ.  ಈ ಬಗ್ಗೆ ಉಪ ರಾಜ್ಯಪಾಲ ಅನಿಲ್ ಬೈಜಾಲ್ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ (Aravind Kejriwal) ಮಹತ್ವದ ಸಭೆ ನಡೆಸಲಿದ್ದಾರೆ.


ಇದನ್ನೂ ಓದಿ : COVID-19 : ಈ 6 ರಾಜ್ಯಗಳಿಂದ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ!


'ಲಾಕ್‌ಡೌನ್ ಬಗ್ಗೆ ಚರ್ಚೆ ಸಾಧ್ಯತೆ : 
ಸಿಎಂ ಕೇಜ್ರಿವಾಲ್, ಭಾನುವಾರದ ಸಭೆಯ ನಂತರ ದೆಹಲಿಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು. ಈ ನಡುವೆ ಎಲ್ಜಿ ಅನಿಲ್ ಬೈಜಾಲ್ ಅವರೊಂದಿಗಿನ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಸೇರಿದಂತೆ ಇನ್ನೂ ಕೆಲ ಹಿರಿಯ ಅಧಿಕಾರಿಗಳು ಹಾಜರಿರುವ ಸಾಧ್ಯತೆಗಳಿವೆ. ದೆಹಲಿಯ ಕರೋನಾ ಸೋಂಕಿನ ಸ್ಥಿತಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ ವೇಳೆ ರಾಜ್ಯದಲ್ಲಿ ಲಾಕ್ ಡೌನ್ (Lockdown)ಜಾರಿಗೊಳಿಸುವ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. 


ಸಂಪೂರ್ಣ ಬಂದ್ ಮಾಡುವಂತೆ CAIT ಒತ್ತಾಯ : 
ಹೆಚ್ಚುತ್ತಿರುವ ಕರೋನಾದ (Coronavirus) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ 15 ದಿನಗಳ ಸಂಪೂರ್ಣ ಬಂದ್ (Bundh) ಘೋಷಿಸುವಂತೆ, ವ್ಯಾಪಾರ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT ) ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಸಿಎಟಿ ಉಪ ಗವರ್ನರ್ ಮತ್ತು ದೆಹಲಿಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು,  ಟ್ವೀಟ್ (tweet) ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ.  ಕರೋನಾ ಸಾಂಕ್ರಾಮಿಕ ರೋಗವು ದೇಶಾದ್ಯಂತ ಬಹಳ ವೇಗವಾಗಿ ಹೆಚ್ಚುತ್ತಿದೆ. ದೆಹಲಿಯ ಸ್ಥಿತಿಯನ್ನು ಗಮನಿಸಿದರೆ, ತಕ್ಷಣಕ್ಕೆ ಜಾರಿಯಾಗುವಂತೆ ಸಂಪೂರ್ಣ ಬಂದ್ ಮಾಡುವ ಅಗತ್ಯವಿದೆ ಎಂದು ಸಿಎಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. 


ಇದನ್ನೂ ಓದಿ : Corona Strain: ಕಳೆದ 24 ಗಂಟೆಗಳಲ್ಲಿ 2.75 ಲಕ್ಷ ಹೊಸ ಪ್ರಕರಣ, ಕಳವಳ ಹೆಚ್ಚಿಸುವ ಸಾವಿನ ಅಂಕಿ-ಅಂಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.