RT-PCR ಟೆಸ್ಟ್ ಗೆ ಯಾರು- ಯಾವಾಗ ಒಳಗಾಗಬೇಕು? ಇಲ್ಲಿದೆ ಮಾಹಿತಿ

ಕರೋನಾ ಪರೀಕ್ಷೆಗೆ ಆರ್‌ಟಿಪಿಸಿಆರ್ ಟೆಸ್ಟ್ (ಆರ್‌ಟಿಪಿಸಿಆರ್) ಅತ್ಯಂತ ವಿಶ್ವಾಸಾರ್ಹ

Last Updated : Apr 19, 2021, 11:12 AM IST
  • ನಿರಂತರವಾಗಿ ಹೆಚ್ಚುತ್ತಿರುವ ಕರೋನಾ
  • CT ಸ್ಕೋರ್ ಮತ್ತು CT ವ್ಯಾಲ್ಯೂ ಬಗ್ಗೆ ತಿಳಿದಿರಲಿ
  • ಕರೋನಾ ಪರೀಕ್ಷೆಗೆ ಆರ್‌ಟಿಪಿಸಿಆರ್ ಟೆಸ್ಟ್ (ಆರ್‌ಟಿಪಿಸಿಆರ್) ಅತ್ಯಂತ ವಿಶ್ವಾಸಾರ್ಹ
RT-PCR ಟೆಸ್ಟ್ ಗೆ ಯಾರು- ಯಾವಾಗ ಒಳಗಾಗಬೇಕು? ಇಲ್ಲಿದೆ ಮಾಹಿತಿ title=

ನವದೆಹಲಿ: ನಿರಂತರವಾಗಿ ಹೆಚ್ಚುತ್ತಿರುವ ಕರೋನಾ ಸೋಂಕಿನಿಂದಾಗಿ ದೇಶ ಮತ್ತು ಜಗತ್ತು ನಲುಗಿ ಹೋಗಿದೆ.  ಇಂದು ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದಾರೆ, ಎಷ್ಟು ಮಂದಿ ಸುರಕ್ಷಿತರಾಗಿದ್ದಾರೆ ಮತ್ತು ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಗಳು ತಮ್ಮ ಮಟ್ಟದಲ್ಲಿ ಕರೋನಾ ವಿರುದ್ಧ ಹೋರಾಡುವ ಪ್ರಯತ್ನ ಮಾಡುತ್ತೀವಿ. ಜನರಿಗೆ ಸುರಕ್ಷಿತವಾಗಿರಲು ಸರ್ಕಾರ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಕೊರೋನಾಗೆ ಚಿಕಿತ್ಸೆ, ಪರೀಕ್ಷೆಗಳು ಮತ್ತು ಲಸಿಕೆಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಹುಟ್ಟುತ್ತಲಿವೆ. ಜನರಲ್ಲಿ ಈ ಕುರಿತು ಅನೇಕ ಅನುಮಾನಗಳು ಉದ್ಭವಿಸುತ್ತಿವೆ. ಅನೇಕ ಜನರು ಕೋವಿಡ್ ಲಸಿಕೆ ಪಡೆಯಲು ಸಹ ಹಿಂಜರಿಯುತ್ತಿದ್ದಾರೆ. ಆದ್ದರಿಂದ ಕೆಲವರು ಸ್ವಲ್ಪ ಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಗಾಗುತ್ತಾರೆ, ಆದ್ರೆ ಇದು ತಪ್ಪು. ಮೊದಲು ಕೊರೋನಾ ಲಕ್ಷಣಗಳು ಕುರಿತಂತೆ ಸರಿಯಾದ ಮಾಹಿತಿ ಪಡೆಯುವುದು ಬಹಳ ಮುಖ್ಯ. ಯಾವ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಮತ್ತು ಯಾವಾಗ ಮಾಡಿಸಬೇಕು ಎಂಬುವುದುರ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಯಾವಾಗ ಪರೀಕ್ಷೆಗೆ ಒಳಗಾಗಬೇಕು?
ಜ್ವರ, ಶರೀರದಲ್ಲಿ ನೋವು, ವಾಸನೆ ಮತ್ತು ರುಚಿ, ಮತ್ತು ಉಸಿರಾಟದ ತೊಂದರೆ. ಕಣ್ಣುಗಳ ಕೆಂಪು, ಗುಲಾಬಿ ಬಣ್ಣಕ್ಕೆ ತಿರುಗುವುದು, ಶ್ರವಣದೋಷ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದಲ್ಲಿ ನೀವು ಪರೀಕ್ಷೆ(Test)ಗೆ ಒಳಗಾಗಬೇಕು. ನೀವು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ, 6 ಅಡಿ ಅಥವಾ 15 ನಿಮಿಷಗಳಿಗಿಂತ ಹೆಚ್ಚು ದೂರದಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ ಕೂಡ ಪರೀಕ್ಷೆಗೆ ಒಳಗಾಗಬೇಕು. 

ಇದನ್ನೂ ಓದಿ: ಸೂಪ್, ಜ್ಯೂಸ್ ಬದಲಿಗೆ ಒಂದೇ ಒಂದು ಕಪ್ ತಿಳಿ ಸಾರು ಕುಡಿಯಿರಿ.! ಬದಲಾವಣೆ ನೋಡಿ

ಯಾವ ಪರೀಕ್ಷೆ ಮಾಡಿಸಬೇಕು?
ಕರೋನಾ ಪರೀಕ್ಷೆಗೆ ಆರ್‌ಟಿಪಿಸಿಆರ್ ಟೆಸ್ಟ್ (RT-PCR) ಅತ್ಯಂತ ವಿಶ್ವಾಸಾರ್ಹವೆಂದು ಸಾಬೀತಾಗಿದೆ. ಆದ್ದರಿಂದ, ಇದನ್ನು ಮಾಡಿಸುವುದು ಬಹಳ ಮುಖ್ಯ. ಇದಲ್ಲದೆ, ರಾಪಿಡ್ ಆಂಟಿಜೆನ್ ಟೆಸ್ಟ್ ಸಹ ಇದೆ, ಅದು ತಕ್ಷಣವೇ ಫಲಿತಾಂಶವನ್ನು ನೀಡುತ್ತದೆ. 
ಗಮನಿಸಿ: - ಆರ್‌ಟಿಪಿಸಿಆರ್ ಟೆಸ್ಟ್ ಪಾಸಿಟಿವ್ ಆಗಿದ್ದರೆ ನಿಮಗೆ ಕರೋನಾ ಸೋಂಕು ತಗುಲಿದೆ ಅಂತಲೇ ಅರ್ಥ, ನಿಮ್ಮ ಪರೀಕ್ಷೆಯು ನೆಗೆಟಿವ್ ಆಗಿದ್ದರೆ ಮತ್ತು ಇನ್ನೂ ರೋಗಲಕ್ಷಣಗಳನ್ನು ತೋರಿಸುತ್ತಿದ್ದರೆ, ಸರಿಯಾದ ಫಲಿತಾಂಶವನ್ನು ಪಡೆಯಲು ನೀವು ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು.

ಇದನ್ನೂ ಓದಿ: Clove Health Benefits - ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿನೀರಿನಲ್ಲಿ ಎರಡು ಲವಂಗ ಸೇವಿಸಿ, ಸಿಗಲಿವೆ ಈ ಆರೋಗ್ಯಕರ ಲಾಭಗಳು

CT ಸ್ಕೋರ್ ಮತ್ತು CT ವ್ಯಾಲ್ಯೂ ಬಗ್ಗೆ ತಿಳಿದಿರಲಿ: 
ಸಿಟಿ ವ್ಯಾಲ್ಯೂ ಮತ್ತು ಸಿಟಿ ಸ್ಕೋರ್ ಎರಡನ್ನೂ ತಿಳಿದಿರುವುದು ಸಹ ಬಹಳ ಮುಖ್ಯವಾದದ್ದು. ಈ ಎರಡು ವಿಭಿನ್ನ ಅರ್ಥ ಹೊಂದಿವೆ. ಸಿಟಿ ವ್ಯಾಲ್ಯೂ(CT Value) ಸೈಕಲ್ ಮಿತಿ ಮೌಲ್ಯವಾಗಿದ್ದು ಅದು ದೇಹದಲ್ಲಿನ ಜ್ವರದ ಬಗ್ಗೆ ಸೂಚಿಸುತ್ತದೆ. ಸಿಟಿ ವ್ಯಾಲ್ಯೂ 35 ಕ್ಕಿಂತ ಕಡಿಮೆಯಿದ್ದರೆ ಸೋಂಕು ಇದೆ ಮತ್ತು ಈ ಮೌಲ್ಯವು 22 ಕ್ಕಿಂತ ಕಡಿಮೆಯಿದ್ದರೆ, ಒಬ್ಬ ಸೋಂಕಿತರನ್ನು ಸಂಪರ್ಕಿಸಿದ್ದೀರಿ ಅಂದು ಅರ್ಥ. ಇದನ್ನು 23-39 ರವರೆಗೆ ದಂಡವೆಂದು ಪರಿಗಣಿಸಲಾಗುತ್ತದೆ. ಇಂತಹ ರೋಗಿಗಳಿಗೆ ವೈದ್ಯರು ಸಿಟಿ ಸ್ಕ್ಯಾನ್‌ ಮಾಡಿಸಲು ಶಿಫಾರಸು ಮಾಡುತ್ತಾರೆ. ಇದರಿಂದ ಸೋಂಕಿನ ಹರಡುವಿಕೆಯನ್ನು ಕಂಡುಹಿಡಿಯಬಹುದು. 

ಇದನ್ನೂ ಓದಿ: ಸೌತೆಕಾಯಿ ತಿನ್ನುವ ಮೊದಲು ಈ ವಿಷಯ ನಿಮಗೆ ತಿಳಿದಿರಲಿ

ಯಾರು ಪರೀಕ್ಷೆಗೆ ಒಳಗಾಗಬಾರದು?
ನೀವು ಲಸಿಕೆಯ(vaccine) ಎರಡೂ ಡೋಸ್ ಪಡೆದಿದ್ದರೆ ಮತ್ತು ಎರಡು ವಾರಗಳು ಕಳೆದಿದ್ದರೆ, ನಿಮಲ್ಲಿ  ಯಾವುದೇ ರೀತಿಯ ಸಮಸ್ಯೆ ಇಲ್ಲ. ಈಗ ನಿಮ್ಮಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದರೆ ನೀವು ಯಾವುದೇ ಟೆಸ್ಟ್ ಗೆ ಒಳಗಾಗುವ ಅಗತ್ಯವಿಲ್ಲ.

ಇದನ್ನೂ ಓದಿ: Mask: ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಯಾವ ಮಾಸ್ಕ್ ಉತ್ತಮ? ಅದಕ್ಕೆ ಇಲ್ಲಿದೆ ಉತ್ತರ!

ಕರೋನಾದ ನಾಲ್ಕು ಹಂತಗಳು:
ಮೊದಲ-  ಹೋಂ ಕ್ವಾರಂಟೈನ್ ಅಥವಾ ಐಸೋಲೇಸನ್ ವಾರ್ಡ್
ರೋಗಲಕ್ಷಣಗಳಿಲ್ಲದೆ ಇದ್ದಾರೆ - ಯಾವುದೇ ಸಮಸ್ಯೆ ಇಲ್ಲ, ಸಿಟಿ ಸ್ಕ್ಯಾನ್ ಸಾಮಾನ್ಯವಾಗಿದೆ, ಸ್ವಲ್ಪ ಜ್ವರ, ಆಯಾಸ, ಕೆಮ್ಮು, ಮೂಗು ತುರಿಸುವುದು, ಗಂಟಲು ನೋವು, ವಾಂತಿ, ಹೊಟ್ಟೆ ನೋವು ಅಥವಾ ಅತಿಸಾರ ಇದ್ದಾರೆ.

ಎರಡನೇ- ಐಸೋಲೇಸನ್ ವಾರ್ಡ್ / ಆಸ್ಪತ್ರೆ / ಐಸಿಯು: ಹಚ್ಚಿನ ಜ್ವರ, ಸಿಟಿ ಸ್ಕ್ಯಾನ್ ಸೋಂಕು ಅಥವಾ ಗಾಯಗಳು.

ಮೂರನೇ-ಐಸಿಯು ತೀವ್ರವಾದ ನ್ಯುಮೋನಿಯಾವು 92% ಕ್ಕಿಂತ ಕಡಿಮೆ ಎಸ್‌ಪಿಒ 2 ಅಥವಾ ಆಮ್ಲಜನಕದ ಮಟ್ಟದಲ್ಲಿದ್ದರೆ ರೋಗ ತಗುಲುವ ಲಕ್ಷಣವಿದೆ ಎಂದರ್ಥ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News