COVID-19 : ಈ 6 ರಾಜ್ಯಗಳಿಂದ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ!

ಮೊದಲು 48 ಗಂಟೆಗಳ ಮೊದಲು ತೆಗೆಸಿರುವ  ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ

Last Updated : Apr 19, 2021, 10:13 AM IST
  • ಕೇರಳ, ಗೋವಾ, ರಾಜಸ್ಥಾನ, ದೆಹಲಿ, ಗುಜರಾತ್ ಮತ್ತು ಉತ್ತರಾಖಂಡ
  • ಈ ಆರು ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರು
  • ಮೊದಲು 48 ಗಂಟೆಗಳ ಮೊದಲು ತೆಗೆಸಿರುವ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ
COVID-19 : ಈ 6 ರಾಜ್ಯಗಳಿಂದ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ! title=

ಮುಂಬೈ: ಕೇರಳ, ಗೋವಾ, ರಾಜಸ್ಥಾನ, ದೆಹಲಿ, ಗುಜರಾತ್ ಮತ್ತು ಉತ್ತರಾಖಂಡ ಈ ಆರು ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರು ಮೊದಲು 48 ಗಂಟೆಗಳ ಮೊದಲು ತೆಗೆಸಿರುವ  ಕೋವಿಡ್-19 ನೆಗೆಟಿವ್ ರಿಪೋರ್ಟ್ ಅಥವಾ ಆರ್‌ಟಿ-ಪಿಸಿಆರ್ ಟೆಸ್ಟ್  ರಿಪೋರ್ಟ್ ಕಡ್ಡಾಯವಾಗಿ ತರಬೇಕೆಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವದರಿಂದ ರಾಜ್ಯ ಸರ್ಕಾರ ಈ ಆರು ರಾಜ್ಯಗಳನ್ನು 'ಸೂಕ್ಷ್ಮ ವಲಯಗಳು'(Places of Sensitive Origin) ಎಂದು ವರ್ಗೀಕರಿಸಿದೆ. ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಈ ರಾಜ್ಯಗಳಿಂದ  ರೈಲ್ವೆ ಪ್ರಯಾಣಿ ಮಾಡುವವರಿಗೆ ಹೊಸ ಎಸ್‌ಒಪಿ ಜರಿ ಮಾಡಲಾಗಿದೆ.

ಇದನ್ನೂ ಓದಿ: SBI Alert :ತಪ್ಪಿಯೂ ಈ ತಪ್ಪು ಮಾಡಬೇಡಿ, ಅಕೌಂಟ್ Zero Balance ಆಗಿಬಿಡುತ್ತದೆ

"ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ನೆಗೆಟಿವ್ ರಿಪೋರ್ಟ್(Negative COVID-19 Report) ಅಥವಾ ಆರ್‌ಟಿ-ಪಿಸಿಆರ್ ಟೆಸ್ಟ್  ರಿಪೋರ್ಟ್ ಕಡ್ಡಾಯವಾಗಿ ತರಬೇಕು ಮತ್ತು ಯಾವುದೇ ಲಕ್ಷಣವಿಲ್ಲದ ಪ್ರಯಾಣಿಕರು ಮಾತ್ರ ಮಹಾರಾಷ್ಟ್ರಕ್ಕೆ ರೈಲುಗಳನ್ನು ಹತ್ತಲು ಅವಕಾಶವಿರುತ್ತದೆ. ಬೋರ್ಡಿಂಗ್ / ಡಿಬೋರ್ಡಿಂಗ್ ಮತ್ತು ಪ್ರಯಾಣದ ಸಮಯದಲ್ಲಿ ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಬೇಕು" ಎಂದು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಭಾನುವಾರ ಆದೇಶದಲ್ಲಿ ತಿಳಿಸಿದ್ದಾರೆ. ಈ ಆರು ರಾಜ್ಯಗಳಿಂದ ಚಲಿಸುವ ರೈಲುಗಳಲ್ಲಿ ಮಹಾರಾಷ್ಟ್ರಕ್ಕೆ ಯಾವುದೇ ಕಾಯ್ದಿರಿಸಲಾಗದ ಟಿಕೆಟ್ ನೀಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Corona Strain: ಕಳೆದ 24 ಗಂಟೆಗಳಲ್ಲಿ 2.75 ಲಕ್ಷ ಹೊಸ ಪ್ರಕರಣ, ಕಳವಳ ಹೆಚ್ಚಿಸುವ ಸಾವಿನ ಅಂಕಿ-ಅಂಶ

ನಿಲ್ದಾಣಗಳಲ್ಲಿನ ಎಲ್ಲಾ ನಿರ್ಗಮನಗಳಲ್ಲಿ ಥರ್ಮಲ್ ಸ್ಕ್ಯಾನರ್(Thermal Scanners)‌ಗಳನ್ನು ಒದಗಿಸಲು ಮತ್ತು ರೈಲುಗಳಲ್ಲಿ ಕೋವಿಡ್ -19 ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರ ರೈಲ್ವೆ ಸಚಿವಾಲಯವನ್ನು ಕೇಳಿದೆ.

ರೈಲುಗಳು ಸೇರಿದಂತೆ ರೈಲ್ವೆ(Indian Railways) ಆವರಣದಲ್ಲಿ ಫೇಸ್ ಮಾಸ್ಕ್ ಧರಿಸದಿದ್ದಕ್ಕಾಗಿ 500 ರೂ.ಗಳ ದಂಡ ವಿಧಿಸುವುದಾಗಿ ಭಾರತೀಯ ರೈಲ್ವೆ ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ: Coronavirus: ಮಹಾರಾಷ್ಟ್ರದಲ್ಲಿ ಪ್ರಯೋಜನಕ್ಕೆ ಬಾರದ 'Lockdown', ಪ್ರತಿ ಗಂಟೆಗೆ 20 ಸಾವು

ಈ ನಿಟ್ಟಿನಲ್ಲಿ ಮುಂದಿನ ಆದೇಶ ಹೊರಡಿಸುವವರೆಗೆ ರೈಲ್ವೆ ಆರು ತಿಂಗಳ ಅವಧಿಗೆ ತಕ್ಷಣ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News