ನವದೆಹಲಿ: ಪ್ರಿಯತಮೆಯೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಳ್ಳುವ ಪತಿಯನ್ನು ಪತ್ನಿ ರೆಡ್ ಹ್ಯಾಂಡ್(Caught Red-Handed)ಆಗಿ ಹಿಡಿಯುವ ದೃಶ್ಯಗಳನ್ನು ನೀವು ಬಾಲಿವುಡ್ ಸಿನಿಮಾದಲ್ಲಿ ವೀಕ್ಷಿಸಿರುತ್ತಿರಿ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹದ್ದೇ ನೈಜ ಘಟನೆಯೊಂದನ್ನು ಹಂಚಿಕೊಳ್ಳಲಾಗಿದೆ. ಗೆಳತಿಯೊಂದಿಗೆ ಕಾರಿನಲ್ಲಿ ಐಷಾರಾಮಿ ಹೋಟೆಲ್ ಗೆ ಬಂದಿದ್ದ ಗಂಡನನ್ನು ಪತ್ತೆಹಚ್ಚಿದ ಹೆಂಡತಿ ಸರಿಯಾಗಿ ಮಂಗಳಾರತಿ ಮಾಡಿದ್ದಾಳೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡಿದೆ. 


COMMERCIAL BREAK
SCROLL TO CONTINUE READING

ಹೌದು, ಪ್ರಿಯತಮೆಯೊಂದಿಗೆ ಹೋಟೆಲ್ ಗೆ ಆಗಮಿಸಿದ್ದ ಪತಿಯೊಬ್ಬ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಫಜೀತಿಗೊಳಗಾಗಿದ್ದಾನೆ. ಈ ವಿಡಿಯೋ(Viral Video)ದಲ್ಲಿ ಮಹಿಳೆಯೊಬ್ಬಳು ಹೋಟೆಲ್ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಕಡೆಗೆ ಓಡಿಬರುತ್ತಿರುವುದನ್ನು ಕಾಣಬಹುದು. ಹೀಗೆ ಬಂದ ಆಕೆ ಕಾರಿನೊಳಗೆ ಕುಳಿತಿದ್ದ ಇನೊಬ್ಬ ಮಹಿಳೆಯನ್ನು ಹೊರಗೆ ಎಳೆದು ಥಳಿಸಲು ಪ್ರಾರಂಭಿಸುತ್ತಾಳೆ. ಕಾರಿನಲ್ಲಿದ್ದ ಮಹಿಳೆ ದುಪಟ್ಟಾದಿಂದ ತನ್ನ ಮುಖವನ್ನು ಮುಚ್ಚಿಕೊಂಡಿರುತ್ತಾಳೆ. ಅದನ್ನು ತೆಗೆಯಲು ಪ್ರಯತ್ನಿಸುವ ಮಹಿಳೆ ಈಕೆ ಯಾರು? ಅಂತಾ ತನ್ನ ಪತಿಗೆ ಕೂಗಾಡುತ್ತಾಳೆ.


ಇದನ್ನೂ ಓದಿ: ಜುಲೈನಲ್ಲಿ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರ ಶೇ 11.16 ಕ್ಕೆ ಇಳಿಕೆ


ಕಾಂಗ್ರೆಸ್ ತೊರೆದ ಸುಶ್ಮಿತಾ ದೇವ್, ಟಿಎಂಸಿ ಸೇರ್ಪಡೆ ಸಾಧ್ಯತೆ


ಸೋಷಿಯಲ್ ಮೀಡಿಯಾ(Social Media)ದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನೆಟಿಜನ್ ಗಳು ಪತ್ನಿ ಇದ್ದರೂ ಮತ್ತೊಬ್ಬಳೊಂದಿಗೆ ಲವ್ವಿ ಡವ್ವಿ ನಡೆಸುತ್ತಿದ್ದ ವ್ಯಕ್ತಿಗೆ ಮಂಗಳಾರತಿ ಮಾಡಿದ್ದಾರೆ. ಅದರಂತೆ ಪತ್ನಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಕೆಲವರು ಮಹಿಳೆಯನ್ನು ಥಳಿಸುವ ಬದಲು ಪತಿಯನ್ನು ಮೊದಲು ಪತ್ನಿ ಪ್ರಶ್ನಿಸಬೇಕಿತ್ತು ಅಂತಾ ಕಾಮೆಂಟ್ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ