ನವದೆಹಲಿ: ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಸಿಲ್ಚಾರ್‌ನ ಮಾಜಿ ಸಂಸದೆ ಸುಶ್ಮಿತಾ ದೇವ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.ಅವರು ಸಾರ್ವಜನಿಕ ಸೇವೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.ಅವರ ಆಪ್ತ ಮೂಲಗಳ ಪ್ರಕಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗಿದೆ.
ಏಳು ಬಾರಿ ಸಂಸದರಾಗಿರುವ ಸಂತೋಷ್ ಮೋಹನ್ ದೇವ್ ಅವರ ಮಗಳು ಮತ್ತು ಅಸ್ಸಾಂನ ಬಂಗಾಳಿ ಮಾತನಾಡುವ ಬರಾಕ್ ಕಣಿವೆಯಲ್ಲಿ ಕಾಂಗ್ರೆಸ್ (Congress) ಪಕ್ಷದ ಪ್ರಮುಖ ನಾಯಕಿಯಾಗಿರುವ ಸುಶ್ಮೀತಾ ಅವರ ರಾಜೀನಾಮೆಯಿಂದಾಗಿ ಈಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಇದನ್ನೂ ಓದಿ: Oxygen shortage:"ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ" ಕೇಂದ್ರದ ವಿರುದ್ಧ ರಾಹುಲ್ ಕಿಡಿ
ಇತ್ತೀಚೆಗೆ ಮೇ ತಿಂಗಳಲ್ಲಿ ಮುಕ್ತಾಯಗೊಂಡ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್- ಬದ್ರುದ್ದೀನ್ ಅಜ್ಮಲ್ ಅವರ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಎಫ್) ನೊಂದಿಗೆ ಪಾಲುದಾರಿಕೆ ಹೊಂದಿತ್ತು-ಎನ್ಡಿಎ ಮೈತ್ರಿಕೂಟದಿಂದ ಸೋಲಿಸಲ್ಪಟ್ಟಿತು. ಅಂದಿನಿಂದ, ಕನಿಷ್ಠ ಇಬ್ಬರು ಪ್ರಮುಖ ಕಾಂಗ್ರೆಸ್ ಶಾಸಕರು (ರೂಪಜ್ಯೋತಿ ಕುರ್ಮಿ ಮತ್ತು ಸುಶಾಂತ ಬೊರ್ಗೊಹೈನ್) ಬಿಜೆಪಿಗೆ ಹಾರಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಸುಶ್ಮೀತಾ ದೇವ್ ರಾಜೀನಾಮೆ ಏಕೆ ನೀಡುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ ಆದರೆ ಅವರು ಪಕ್ಷದೊಂದಿಗೆ ಮೂರು ದಶಕಗಳ ಸುದೀರ್ಘ ಒಡನಾಟವನ್ನು ಸ್ಮರಿಸುವುದಾಗಿ ಹೇಳಿದರು."ನನ್ನ ಸ್ಮರಣೀಯ ಪ್ರಯಾಣದ ಭಾಗವಾಗಿರುವ ಪಕ್ಷ, ಅದರ ಎಲ್ಲಾ ನಾಯಕರು, ಸದಸ್ಯರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ದೇವ್ ಪತ್ರದಲ್ಲಿ ಬರೆದಿದ್ದಾರೆ, ಸೋನಿಯಾ ಗಾಂಧಿಯವರ ಮಾರ್ಗದರ್ಶನಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ನಿನ್ನೆ ತಡರಾತ್ರಿ ಅವರು ತಮ್ಮ ಟ್ವಿಟರ್ ಬಯೋವನ್ನು ಪಕ್ಷದ ಮಾಜಿ ಸದಸ್ಯೆ" ಮತ್ತು "ಮಹಿಳಾ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ" ಎಂದು ಅವರು ಬದಲಾಯಿಸಿದ್ದಾರೆ.
ಇದನ್ನೂ ಓದಿ: "ಉತ್ತರ ಪ್ರದೇಶದಲ್ಲಿ ನಾವು ಮೈತ್ರಿಮಾಡಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇವೆ"
ಅಸ್ಸಾಂನ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ದೇಬಬ್ರತ ಸೈಕಿಯಾ ಅವರು ಶುಕ್ರವಾರ ರಾತ್ರಿ ದೇವ್ ಅವರು ಸೋನಿಯಾ ಗಾಂಧಿಗೆ ಪತ್ರ ಕಳುಹಿಸಿದ್ದಾರೆ ಎಂದು ಧೃಡಪಡಿಸಿದರು. ಶನಿವಾರ ಮಧ್ಯಾಹ್ನ, ಕಾಂಗ್ರೆಸ್ ಹೈಕಮಾಂಡ್ - ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ - ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಯೋಗಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿತು.ಅವರು ಸಭೆಯ ಭಾಗವಾಗಿದ್ದರು, ಅವರು ಪಕ್ಷ ತೊರೆಯುತ್ತಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ" ಎಂದು ಸೈಕಿಯಾ ಹೇಳಿದರು.
ಆದಾಗ್ಯೂ, ಫೆಬ್ರವರಿಯಲ್ಲಿ ದೇವ್ ತೊರೆಯುವ ಬಿಡುವ ವದಂತಿಗಳು ಹೊರಬಂದವು, ದಕ್ಷಿಣ ಅಸ್ಸಾಂನ ಮೂರು ಬರಾಕ್ ಕಣಿವೆ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು AIUDF ನೊಂದಿಗೆ ಸೀಟು ಹಂಚಿಕೆಯಲ್ಲಿ ಅತೃಪ್ತಿ ಹೊಂದಿದ್ದ ಅವರು ಗುವಾಹಟಿಯಲ್ಲಿ ನಡೆದ ಪಕ್ಷದ ಸಭೆಯಿಂದ ಹೊರನಡೆದರು. ನಂತರ ಸಂದರ್ಶನವೊಂದರಲ್ಲಿ, ಅವರು ತಾನು ಎಂದಿಗೂ ರಾಜೀನಾಮೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರಾ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್..?
"ಚುನಾವಣೆಗೆ ಮುನ್ನ ನಾವು ಒಬ್ಬರಿಗೊಬ್ಬರು ಸಂಭಾಷಣೆ ನಡೆಸಿದಾಗ, ಅವರು AIUDF ಜೊತೆಗಿನ ಕಾಂಗ್ರೆಸ್ ಮೈತ್ರಿಗೆ ಆದ್ಯತೆ ನೀಡಲಿಲ್ಲ ಎಂದು ಅವರು ಉಲ್ಲೇಖಿಸುತ್ತಿದ್ದರು. ಆದಾಗ್ಯೂ, ಆ ನಂತರ ಅವರು ಪಕ್ಷಕ್ಕಾಗಿ ದುಡಿದರು,ಇತ್ತೀಚೆಗೆ ಏನಾಯಿತು ಎಂದು ನನಗೆ ತಿಳಿದಿಲ್ಲ ಆದರೆ ಹಳೆಯ ಕಾರಣವೆಂದರೆ ಅವರು ಎಐಯುಡಿಎಫ್ ಮೈತ್ರಿಯ ವಿರುದ್ಧವಾಗಿದ್ದರು ಎಂದು ಸೈಕಿಯಾ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.