Viral Video: ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ... ಕೂದಲೆಳೆ ಅಂತರದಿಂದ ಪ್ರಾಣ ರಕ್ಷಿಸಿಕೊಂಡ ಬಡಪಾಯಿ ಆನೆ... ವಿಡಿಯೋ ನೋಡಿ
Trending Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆಯೊಂದು ರಸ್ತೆ ದಾಟುತ್ತಿದೆ.. ಅಷ್ಟೊತ್ತಿಗೆ ಅಲ್ಲಿ ರಭಸವಾಗಿ ಸ್ಕೂಟರ್ ವೊಂದು ಬರುತ್ತದೆ.. ಮುಂದೇನಾಯ್ತು ತಿಳಿಯಲು ಸುದ್ದಿ ಓದಿ..
Today Viral Video: ಕೇವಲ ಮಾನವನ ವಸತಿಗಳನ್ನಷ್ಟೇ ಅಲ್ಲ ಮನುಷ್ಯ ಕಾಡು ಪ್ರಾಣಿಗಳ ವಸತಿಯನ್ನು ಕೂಡ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಈ ನಮ್ಮ ಕೃತ್ಯದಿಂದ ಕಾಡು ಪ್ರಾಣಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ದಿನನಿತ್ಯ ಮುನ್ನೆಲೆಗೆ ಬರುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಆನೆಯೊಂದು ಮಹಿಳೆಯ ದಾರಿಯಲ್ಲಿ ಇದ್ದಕ್ಕಿದ್ದಂತೆ ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ರಸ್ತೆ ದಾಟುತ್ತಿದ್ದ ಆನೆಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದರಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು 5 ಸೆಕೆಂಡುಗಳ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಅದನ್ನು ಇದುವರೆಗೆ 1 ಲಕ್ಷ 25 ಸಾವಿರ ಬಾರಿ ವೀಕ್ಷಿಸಲಾಗಿದೆ.
ವಿಡಿಯೋದಲ್ಲಿ ಮಹಿಳೆಯೊಬ್ಬರು ಸ್ಕೂಟರ್ ಓಡಿಸುತ್ತಿರುವುದನ್ನು ನೀವು ಕಾಣಬಹುದು. ವಿಡಿಯೋದಲ್ಲಿ ಚಿಕ್ಕ ಆನೆಯೊಂದು ರಸ್ತೆ ದಾಟುತ್ತಿರುವ ದೃಶ್ಯವೂ ಇದೆ. ಆಕಸ್ಮಿಕವಾಗಿ ಕಾಡಿನಿಂದ ಹೊರಬಂದ ಆನೆಯನ್ನು ಮಹಿಳೆ ಕಡೆಗಣಿಸಿರಬಹುದು. ಆನೆಯನ್ನು ಕಂಡು ಮಹಿಳೆಗೆ ಆಶ್ಚರ್ಯವಾದರೂ ಕೂಡ ಆಕೆ ವಾಹನ ಓಡಿಸುತ್ತಲೇ ಇದ್ದಳು. ಆದರೆ, ಈ ಸಂದರ್ಭದಲ್ಲಿ ಆನೆ ಚಾಣಾಕ್ಷತೆ ಮೆರೆದು ವೇಗವಾಗಿ ರಸ್ತೆ ದಾಟಿದ್ದು, ಆಗುವ ಅನಾಹುತದಿಂದ ತಪ್ಪಿಸಿಕೊಂಡಿದೆ.
ಇದನ್ನೂ ಓದಿ-Viral Photo: ವಿಶಿಷ್ಟ ರೀತಿಯಲ್ಲಿ ಮದುವೆಯ ವ್ಯಾಖ್ಯಾನ ಬರೆದ ವಿದ್ಯಾರ್ಥಿ, ಓದಿ ಹೌಹಾರಿದ ಜನ!
ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು "ಆನೆಯು ತುಂಬಾ ಕಷ್ಟ ಸಾಧ್ಯದಿಂದ ಮಹಿಳಾ ಚಾಲಕಿಯಿಂದ ತನ್ನ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-Weird News : ವಿಚಿತ್ರವಾದ್ರೂ ನಿಜ! ಈ ಹಳ್ಳಿಯಲ್ಲಿದೆ ಬಾವಲಿಗಳನ್ನು ಪೂಜಿಸುವ ಪದ್ಧತಿ
ಈ ಸುದ್ದಿಯನ್ನು ಬರೆಯುವ ಹೊತ್ತಿಗೆ ಈ ಪೋಸ್ಟ್ ಪೋಸ್ಟ್ 3800 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ಅನೇಕ ರಿಟ್ವೀಟ್‌ಗಳನ್ನು ಪಡೆದುಕೊಂಡಿತ್ತು, ಇನ್ನೊಂದೆಡೆ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊಗೆ ತಮ್ಮ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಯಲ್ಲಿ ಮಹಿಳಾ ಚಾಲಕಿ ತಮಗೆ ಮಾರಕವಾಗಬಹುದು ಎಂಬುದು ಆನೆಗೂ ತಿಳಿದಿದೆ ಎಂದು ಒಬ್ಬ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ. ಇನ್ನೊಂದೆಡೆ "ಒಂದು ಸಮಯದಲ್ಲಿ ನಾನು ನೋಡಿದ ಅತ್ಯುತ್ತಮ ಜೋಕ್" ಮತ್ತೊಬ್ಬ ಬಳಕೆದಾರ ಬರೆದುಕೊಂಡಿದ್ದಾರೆ. ಮೂರನೇ ಬಳಕೆದಾರರು - "ಇದು ಭಯಾನಕ ಮತ್ತು ಆಕರ್ಷಕವಾಗಿದೆ" ಎಂದಿದ್ದಾರೆ. "ನನ್ನ ಕಣ್ಣುಗಳನ್ನು ನಂಬಲಾಗುತ್ತಿಲ್ಲ.. ಕಾಡಿನಲ್ಲಿ ಪ್ರಯಾಣಿಸುವಾಗ ದಯವಿಟ್ಟು ಹೆಚ್ಚು ಜಾಗರೂಕರಾಗಿರಿ." ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.