Viral Photo: ವಿಶಿಷ್ಟ ರೀತಿಯಲ್ಲಿ ಮದುವೆಯ ವ್ಯಾಖ್ಯಾನ ಬರೆದ ವಿದ್ಯಾರ್ಥಿ, ಓದಿ ಹೌಹಾರಿದ ಜನ!

Viral Photo: ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಫೋಟೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬ ಮದುವೆಯ ವ್ಯಾಖ್ಯಾನವನ್ನು ವಿಶಿಷ್ಟ ರೀತಿಯಲ್ಲಿ ಬರೆದಿದ್ದಾನೆ. ವಿದ್ಯಾರ್ಥಿಯ ಉತ್ತರ ಕಂಡು ಎಲ್ಲರೂ ಹೌಹಾರಿದ್ದಾರೆ.  

Written by - Nitin Tabib | Last Updated : Oct 13, 2022, 05:52 PM IST
  • ಸಾಮಾಜಿಕ ಅಧ್ಯಯನದ ಪರೀಕ್ಷೆಯ ಸಮಯದಲ್ಲಿ, ಶಿಕ್ಷಕರು ವಿದ್ಯಾರ್ಥಿಗೆ ಮದುವೆಯ ವ್ಯಾಖ್ಯಾನವನ್ನು ಬರೆಯಲು ಹೇಳಿದ್ದಾರೆ.
  • ಇದು ಒಟ್ಟು 10 ಅಂಕಗಳ ಪ್ರಶ್ನೆಯಾಗಿತ್ತು.
  • ಆದರೆ, ವಿದ್ಯಾರ್ಥಿಯೊಬ್ಬ ಮದುವೆಗೆ ಇಂಥದ್ದೊಂದು ವ್ಯಾಖ್ಯಾನ ಬರೆದಿದ್ದು, ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ.
Viral Photo: ವಿಶಿಷ್ಟ ರೀತಿಯಲ್ಲಿ ಮದುವೆಯ ವ್ಯಾಖ್ಯಾನ ಬರೆದ ವಿದ್ಯಾರ್ಥಿ, ಓದಿ ಹೌಹಾರಿದ ಜನ! title=
ವೈರಲ್ ಫೋಟೋ

Funny Viral Photo: ಸಾಮಾಜಿಕ ಮಾಧ್ಯಮದಲ್ಲಿ ಯಾವಾಗ, ಯಾವ ವಿಷಯ ವೈರಲ್ ಆಗುತ್ತೆ, ಏನೂ ಹೇಳಕಾಗಲ್ಲ? ಕೆಲವೊಮ್ಮೆ ವೈರಲ್ ಆಗುವ ಇಂತಹ ವಿಷಯಗಳನ್ನು ಜನರು ಹೌಹಾರಿ ಓದುತ್ತಾರೆ ಮತ್ತು ನೋಡುತ್ತಾರೆ. ಇಂತಹುದೇ ಒಂದು ಪ್ರಕರಣ ಇದೀಗ ಪ್ರಕರಣ ಮುನ್ನೆಲೆಗೆ ಬಂದಿದ್ದು, ಇದನ್ನು ನೋಡಿ ಬೆಚ್ಚಿ ಬೀಳುವುದು ಮಾತ್ರವಲ್ಲದೆ ನೀವೂ ಹೊಟ್ಟೆಹಿಡಿದು ನಗುವಿರಿ. ಏಕೆಂದರೆ, ವಿದ್ಯಾರ್ಥಿಯೊಬ್ಬ ಮದುವೆಯ ಬಗ್ಗೆ ಅಂತಹದ್ದೊಂದು ವ್ಯಾಖ್ಯಾನ ಬರೆದಿದ್ದಾನೆ. ಅದನ್ನು ಓದಿದ ಶಿಕ್ಷಕಿಯೂ ಬೆಚ್ಚಿ ಬಿದ್ದಿದ್ದಾರೆ. ಪ್ರಸ್ತುತ  ವಿದ್ಯಾರ್ಥಿಯ ಉತ್ತರ ಪತ್ರಿಕೆ ಭಾರಿ ವೈರಲ್ ಆಗುತ್ತಿದೆ ಮತ್ತು ಬಳಕೆದಾರರು ಈ ಕುರಿತು ತೀವ್ರ ಚಾಟ್ ನಲ್ಲಿ ತೊಡಗಿದ್ದಾರೆ. 

ಇದನ್ನೂ ಓದಿ-Viral Video: ಮುತ್ತು ಕೊಡಲು ಹೋದವನ ತುಟಿಗೆ ಕಚ್ಚಿದ ನಾಗರಹಾವು! ಭಯಾನಕ ವಿಡಿಯೋ ವೈರಲ್

ಸಾಮಾಜಿಕ ಅಧ್ಯಯನದ ಪರೀಕ್ಷೆಯ ಸಮಯದಲ್ಲಿ, ಶಿಕ್ಷಕರು ವಿದ್ಯಾರ್ಥಿಗೆ ಮದುವೆಯ ವ್ಯಾಖ್ಯಾನವನ್ನು ಬರೆಯಲು ಹೇಳಿದ್ದಾರೆ. ಇದು ಒಟ್ಟು 10 ಅಂಕಗಳ ಪ್ರಶ್ನೆಯಾಗಿತ್ತು. ಆದರೆ, ವಿದ್ಯಾರ್ಥಿಯೊಬ್ಬ ಮದುವೆಗೆ ಇಂಥದ್ದೊಂದು ವ್ಯಾಖ್ಯಾನ ಬರೆದಿದ್ದು, ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ. ವಿದ್ಯಾರ್ಥಿಯ ಉತ್ತರವನ್ನು ಓದಿದ ನಂತರ, ಅವನಿಗೆ ಮದುವೆಯ ಅರ್ಥವೇ ತಿಳಿದಿಲ್ಲ ಎಂದು ಸ್ಪಷ್ಟವಾಗುತ್ತದೆ. ಏಕೆಂದರೆ  ಮದುವೆಯ ವ್ಯಾಖ್ಯಾನವನ್ನು ಆತ ತುಂಬಾ ವಿಚಿತ್ರ ರೀತಿಯಲ್ಲಿ ಬರೆದಿದ್ದಾನೆ. ಮದುವೆಯ ಬಗ್ಗೆ ಉತ್ತರ ಬರೆದ ವಿದ್ಯಾರ್ಥಿ, "ಹುಡುಗಿಯ ಪೋಷಕರು ಹುಡುಗಿಗೆ 'ಈಗ ನೀನು ದೊಡ್ಡ ಮಹಿಳೆಯಾಗಿರುವಿ. ನಮ್ಮಿಂದ ನಿನಗೆ ಪೋಷಿಸಲು ಆಗುವುದಿಲ್ಲ. ಆದ್ದರಿಂದ ನಿನ್ನನ್ನು ಪೋಷಿಸುವ ಬೇರೆ ಪುರುಷನನ್ನು ನೋಡಿಕೊ' ಎಂದು ಹೇಳಿದಾಗ, ಹುಡುಗಿ 'ದಯವಿಟ್ಟು ನೀನು ದೊಡ್ಡ ಮನುಷ್ಯನಾಗಿರುವಿ ಎಂಬುದನ್ನು ಅರ್ಥ ಮಾಡಿಕೊ ಮತ್ತು ಬೇಗ ಮದುವೆಯಾಗು' ಎಂದು ಪೋಷಕರಿಂದ ಒತ್ತಾಯಿಸಲ್ಪಟ್ಟ  ಯುವಕನಿಗೆ ಭೇಟಿಯಾಗುತ್ತಾಳೆ. ಇಬ್ಬರು ಪರಸ್ಪರ ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ಸಂತೋಷಪಡುತ್ತಾರೆ. ಬಳಿಕ ಇಬ್ಬರು ಒಟ್ಟಿಗೆ ವಾಸಿಸುವ ನಿರ್ಣಯ ಕೈಗೊಳ್ಳುತ್ತಾರೆ ಮತ್ತು ಮಕ್ಕಳನ್ನು ಪಡೆಯಲು ನಾನ್ಸೆನ್ಸ್ ಕೆಲಸದಲ್ಲಿ ತೊಡಗುತ್ತಾರೆ" ಎಂದಿದ್ದಾನೆ. ವಿದ್ಯಾರ್ಥಿಯ ಈ ಉತ್ತರ ಓದಿ ಬೆಚ್ಚಿ ಬಿದ್ದ ಶಿಕ್ಷಕಿ 'ನಾನ್ಸೆನ್ಸ್' ಎಂದು ಹೇಳಿ 10ಕ್ಕೆ ಶೂನ್ಯ ಅಂಕಗಳನ್ನು ನೀಡಿದ್ದಾರೆ 'ನನ್ನನ್ನು ಭೇಟಿಯಾಗು'  ಎಂದು ವಿದ್ಯಾರ್ಥಿಗೆ ಹೇಳಿದ್ದಾರೆ. ನೀವೂ ವಿದ್ಯಾರ್ಥಿಯ ಈ ವೈರಲ್ ಫೋಟೋವನ್ನೊಮ್ಮೆ ನೋಡಿ...ಮತ್ತು ಓದಿ...

ಇದನ್ನೂ ಓದಿ-Viral News: ಕುಡುಕನಿಗೆ ಕಚ್ಚಿದ ಕೂಡಲೇ ಸಾವನ್ನಪ್ಪಿದ ನಾಗರಹಾವು..!

ಪ್ರಸ್ತುತ ವಿದ್ಯಾರ್ಥಿಯ ಈ ಆನ್ಸರ್ ಶೀಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನರು ಈ ಉತ್ತರ ಓದಿ ಒಂದೆಡೆ ನಗುತ್ತಿದ್ದರೆ, ಇನ್ನೊಂದೆಡೆ ತಮಾಷೆ ಕೂಡ ಮಾಡುತ್ತಿದ್ದಾರೆ. @srpdaa' ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ಫೋಟೋ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ 11 ಸಾವಿರಕ್ಕೂ ಅಧಿಕ ಜನ ಲೈಕ್ ನೀಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಇದನ್ನು ರೀ ಟ್ವೀಟ್ ಮಾಡಿದ್ದಾರೆ. ಕೆಲವರು ತಮಾಷೆ ಮಾಡುತ್ತಾ ಈ ಪೋಸ್ಟ್ ಗೆ ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ನೀವೂ ಕೂಡ ಕಾಮೆಂಟ್ ಮಾಡುವ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ನೀಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News