ನವದೆಹಲಿ: ಲಾಕ್‌ಡೌನ್‌ (Lockdown) ಸಮಯದಲ್ಲಿ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು (Prdhan mantri Gareeb Kalyan Yojana) ದೇಶದಲ್ಲಿ ಸುಮಾರು 80 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಪ್ರಾರಂಭಿಸಿತ್ತು. ಈ ಯೋಜನೆಯಡಿ ಬಡ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಈ ಯೋಜನೆ ಇದೇ ನವೆಂಬರ್ 30ಕ್ಕೆ  ಕೊನೆಗೊಳ್ಳುತ್ತಿದೆ. ನೀವು ಇನ್ನೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳದಿದ್ದರೆ ಬೇಗ ಪಡೆದುಕೊಳ್ಳಬೇಕು.


COMMERCIAL BREAK
SCROLL TO CONTINUE READING

ಪಡಿತರ ಪ್ರತಿ ತಿಂಗಳು ಉಚಿತವಾಗಿ ಲಭ್ಯವಿತ್ತು:
ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ವಿತರಿಸುವ ಯೋಜನೆ ನವೆಂಬರ್ 30ಕ್ಕೆ ಕೊನೆಗೊಳ್ಳುತ್ತದೆ. ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಕೇಂದ್ರ ಸರ್ಕಾರದ (Central Government) ಮುಂದೆ ಈ ಉಚಿತ ಆಹಾರ ವಿತರಣೆಯ ಯೋಜನೆಯನ್ನು ಮುಂದುವರೆಸುವ ಕುರಿತಾದ ಆಲೋಚನೆ ಇಲ್ಲ.


ನಿಮಿಷಗಳಲ್ಲಿ ಆಧಾರ್‌ಗೆ ಒನ್ ನೇಷನ್-ಒನ್ ರೇಷನ್ ಕಾರ್ಡ್ ಲಿಂಕ್ ಮಾಡಲು ಇಲ್ಲಿದೆ ಪ್ರಕ್ರಿಯೆ


ಈ ಯೋಜನೆ ಬಡವರಿಗೆ ವರದಾನ ಎಂದು ಸಾಬೀತಾಗಿದೆ. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು  ಪಿಎಂಜಿಕೆಎವೈ (PMGKAY) ಯೋಜನೆಯನ್ನು ಘೋಷಿಸಿದರು. ಆರಂಭದಲ್ಲಿ ಪಿಎಂಜಿಕೆಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿ ಹೊಂದಿರುವವರಿಗೆ 5 ಕೆಜಿ ಧಾನ್ಯ (ಗೋಧಿ / ಅಕ್ಕಿ) ಮತ್ತು 1 ಕೆಜಿ ದ್ವಿದಳ ಧಾನ್ಯಗಳನ್ನು ಪ್ರತಿ ತಿಂಗಳು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ನೀಡುವ ಅವಕಾಶವಿತ್ತು. ನಂತರ ಇದನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿತ್ತು.


ಈ ರೀತಿಯಾಗಿ ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಸೇರಿಸಿ


ಉಚಿತ ಆಹಾರ ವಿತರಣೆಯ ಈ ಯೋಜನೆಯ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಿದೆ ಮತ್ತು ಈ ಯೋಜನೆಯು ಕರೋನಾ (COVID 19) ಅವಧಿಯಲ್ಲಿ ದೇಶದ ಬಡವರಿಗೆ ವರದಾನವಾಗಿದೆ ಎನ್ನಲಾಗಿದೆ.