ಆಂಧ್ರಪ್ರದೇಶ : ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶ ತುಂಬ ʼನಮ್ಮ ನಂಬಿಕೆ ನೀವೇ ಜಗನ್ʼ ಎಂಬ ಹೆಸರಿನ ಸ್ಟಿಕ್ಕರ್‌ಗಳನ್ನು ಮನೆ ಮನೆಗೆ ಅಂಟಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಕ್ಷೇತ್ರ ಉಸ್ತುವಾರಿಗಳು ಭಾಗವಹಿಸುತ್ತಿದ್ದು, ಮನೆಮನೆಗೆ ಸ್ಟಿಕ್ಕರ್ ಅಂಟಿಸಲು ಯತ್ನಿಸುತ್ತಿದ್ದಾರೆ. ಇದರ ನಡುವೆ ನಾಯಿಯೊಂದು ಮನೆಯೊಂದಕ್ಕೆ ಅಂಟಿಸಿದ್ದ ಜಗನ್‌ ಸ್ಟಿಕ್ಕರ್ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋವನ್ನು ತೆಲುಗು ದೇಶಂ ಪಕ್ಷದ (TDP) ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಶೇರ್ ಮಾಡಿದೆ. ಅಲ್ಲದೆ, ಯಾವ ಮಟ್ಟಿಗೆ ಈ ಪ್ರಕರಣ ತಲುಪಿದೆ ಅಂದ್ರೆ, ವೈಎಸ್‌ಆರ್‌ ಪಕ್ಷದವರು ಟಿಡಿಪಿ ಸಿಟ್ಟಿನ ಮೇಲೆ ನಾಯಿಯ ವಿರುದ್ಧ ಕೇಸ್‌ ದಾಖಲಿಸುವ ಮಟ್ಟಕ್ಕೆ ಹೋಗಿದೆ. ಹೌದು.. ಆಂಧ್ರದ ಪೊಲೀಸ್ ಠಾಣೆಯಲ್ಲಿ ನಾಯಿಯ ವಿರುದ್ಧ ವೈಎಸ್‌ಆರ್‌ ಕಾಂಗ್ರೆಸ್‌ಗೆ ಸೇರಿದ ಮಹಿಳೆಯರು ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ದೂರು ನೀಡಿದ್ದಾಗಿ ಸ್ವತಃ ಮಹಿಳೆಯರೇ ವಿಡಿಯೋ ಮೂಲಕ ತಿಳಿಸಿದ್ದಾರೆ.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆ..! ಜನರಲ್ಲಿ ಆತಂಕ


ನಾಯಿಯೊಂದು ಜಗನ್ ಮೋಹನ್ ರೆಡ್ಡಿ ಅವರಿರುವ ಸ್ಟಿಕ್ಕರ್‌ನ್ನು ತನ್ನ ಕಾಲುಗಳಿಂದ ಕಿತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಸದ್ಯ ವಿಜಯವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಯಿಯ ವಿರುದ್ಧ ದೂರು ದಾಖಲಾಗಿದೆ. 151 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದ ಜಗನ್ ಮೋಹನ್ ರೆಡ್ಡಿಯನ್ನು ನಾಯಿ ಕೂಡ ಅವಮಾನಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿರೋಧ ಪಕ್ಷ ಹಾಸ್ಯ ಮಾಡಿ ವಿಡಿಯೋ ಹಂಚಿಕೊಳ್ಳುತ್ತಿರುವುದೇ ಇದಕ್ಕೆ ಮೂಲಕ ಕಾರಣವಾಗಿದೆ.


ದೂರುದಾರರು, ಕೂಡಲೇ ನಾಯಿಯನ್ನು ವಶಕ್ಕೆ ತೆಗೆದುಕೊಂಡು ನಾಯಿಯ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ನಾಯಿಯನ್ನು ಬಿಟ್ಟು ಈ ಕೆಲಸ ಮಾಡಿಸಿದವರನ್ನೂ ಬಿಡಬಾರದು ಎಂದು ಎಚ್ಚರಿಸಿದ್ದಾರೆ. ಸದ್ಯ ಮಹಿಳೆಯರು ಮಾತನಾಡಿರುವ ವಿಡಿಯೋ ಹಾಗೂ ನಾಯಿ ಸ್ಟಿಕರ್‌ ಕಿತ್ತುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.