White Crow Video: ನೀವು ಎಂದಾದ್ರೂ ಬಿಳಿ ಕಾಗೆ ನೋಡಿದ್ದೀರಾ? ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ

White Crow Video Viral: ಈ ವಿಡಿಯೋ ನೋಡಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರ ಪ್ರಕಾರ ಇದು ಈ ಹಿಂದೆ ನೋಡಿದ ಸಾಮಾನ್ಯ ವಿದ್ಯಮಾನವಾಗಿರಬಹುದು, ಆದರೆ ಈ ದೃಶ್ಯವನ್ನು ಮೊದಲ ಬಾರಿಗೆ ನೋಡಿದವರು ಆಶ್ಚರ್ಚಕಿತರಾಗಿದ್ದಾರೆ.   

Written by - Chetana Devarmani | Last Updated : Apr 12, 2023, 12:13 PM IST
  • ನೀವು ಎಂದಾದರೂ ಬಿಳಿ ಕಾಗೆ ನೋಡಿದ್ದೀರಾ?
  • ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
White Crow Video: ನೀವು ಎಂದಾದ್ರೂ ಬಿಳಿ ಕಾಗೆ ನೋಡಿದ್ದೀರಾ? ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ  title=
White Crow

White Crow Video: ಪುಣೆಯ ಒಂದು ಪ್ರದೇಶದಲ್ಲಿ ಜನರು ಅಸಾಮಾನ್ಯ ದೃಶ್ಯವನ್ನು  ಕಂಡರು. ಅಲ್ಲಿ ಬಿಳಿ ಕಾಗೆ ಕಾಣಿಸಿಕೊಂಡಿತು. ಸಾಮಾನ್ಯವಾಗಿ ಜನರು ಬಿಳಿ ಕಾಗೆಯನ್ನು ನೋಡಿಲ್ಲ. ಬಿಳಿ ಕಾಗೆಯನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಕಪ್ಪು ಕಾಗೆಗಳ ನಡುವೆ ಈ ಬಿಳಿ ಕಾಗೆಯನ್ನು ನೋಡಿ ಜನರು ಆಶ್ಚರ್ಯ ಪಡುತ್ತಾರೆ. ಈ ವಿಡಿಯೋ ಪುಣೆಯ ಲುಲ್ಲಾ ನಗರದ್ದು ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಂದ ತಕ್ಷಣ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಘಟನೆಯ ಮಾಹಿತಿಯನ್ನು ಸ್ಥಳೀಯ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವ ಬಿಳಿ ಕಾಗೆ ರಸ್ತೆಬದಿಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.  

ಇದನ್ನೂ ಓದಿ : Women Viral Video: ಚಪಾತಿಯಲ್ಲಿ 500 ರೂ.ಹಾಕಿ ಬೇಯಿಸಿದ್ರೆ ಹೊರಬರುತ್ತೆ 2000 ರೂ! ಮ್ಯಾಜಿಕ್ ವಿಡಿಯೋ ನೋಡಿ

ಈ ವಿಡಿಯೋ ನೋಡಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರ ಪ್ರಕಾರ ಇದು ಈ ಹಿಂದೆ ನೋಡಿದ ಸಾಮಾನ್ಯ  ದೃಶ್ಯ. ಆದರೆ ಈ ವಿಡಿಯೋ ಮೊದಲ ಬಾರಿಗೆ ನೋಡಿದವರು ಅಚ್ಚರಿಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಪುಣೆಯ ಶಿರೂರು ಪ್ರದೇಶದಲ್ಲಿ ಇಂತಹ ಬಿಳಿ ಬಣ್ಣದ ಕಾಗೆ ಕಾಣಿಸಿಕೊಂಡಿತ್ತು. ಬಿಳಿ ಬಣ್ಣದ ಈ ಕಾಗೆ ಬಹಳ ಅಪರೂಪ. ಪಕ್ಷಿ ತಜ್ಞರ ಪ್ರಕಾರ ಬಿಳಿ ಕಾಗೆಗಳು ಬಹಳ ಅಪರೂಪ. ಸಾಮಾನ್ಯವಾಗಿ ಕಾಗೆಯ ಬಣ್ಣ ಕಪ್ಪು, ಆದರೆ ಬಹುಶಃ ಆನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಕಾರಣ ಈ ಹಕ್ಕಿಯ ಬಣ್ಣವು ಬಿಳಿಯಾಯಿತು. ಈ ಅಸ್ವಸ್ಥತೆಯಿಂದಾಗಿ, ಕಾಗೆಯ ಸಂಪೂರ್ಣ ದೇಹವು ಬಿಳಿಯಾಯಿತು.

 

 

ಬಿಳಿ ಕಾಗೆಯನ್ನು ನೋಡಿ ಜನರು ತುಂಬಾ ಆಶ್ಚರ್ಯ ಪಡುತ್ತಾರೆ. ಈ ಅಪರೂಪದ ಪಕ್ಷಿಯನ್ನು ಅದರ ವಿಶಿಷ್ಟ ಬಣ್ಣದಿಂದಾಗಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪಕ್ಷಿ ತಜ್ಞರ ಪ್ರಕಾರ 10,000 ಕಾಗೆಗಳಲ್ಲಿ ಒಂದು ಕಾಗೆ ಮಾತ್ರ ಬಿಳಿಯಾಗಿರಬಹುದು. ಅವುಗಳ ರೆಕ್ಕೆಗಳು ಮತ್ತು ದೇಹದ ಬಣ್ಣವು ಬಿಳಿಯಾಗಿರುತ್ತದೆ. 

ಇದನ್ನೂ ಓದಿ : 2006 ರಲ್ಲಿ 1,411 ಇದ್ದ ಹುಲಿಗಳ ಸಂಖ್ಯೆ ಈಗ ಎಷ್ಟಿದೆ ಗೊತ್ತಾ?

Trending News