`ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿರುವ ಮುಸ್ಲಿಮರು ಸಂತಸದಿಂದಿದ್ದಾರೆ`; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಹಿಂದೂ ಸಂಸ್ಕೃತಿಯು ವೈವಿಧ್ಯತೆಯನ್ನು ಸ್ವೀಕರಿಸುವ ಮತ್ತು ಗೌರವಿಸುವ ಸಂಸ್ಕೃತಿಯಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ನವದೆಹಲಿ: ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿರುವ ಮುಸ್ಲಿಮರು ಹೆಚ್ಚು ಸಂತಸದ ಜೀವನ ನಡೆಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತವು ಎಲ್ಲಾ ಧರ್ಮಗಳಿಗೆ ಆಶ್ರಯ ನೀಡಿರುವ ದೇಶವಾಗಿದೆ. ನಾವು ಹಿಂದೂಗಳಾಗಿದ್ದೇವೆ. ನಮ್ಮ ಧರ್ಮವು ವೈವಿಧ್ಯತೆಯನ್ನು ಸ್ವೀಕರಿಸುವ ಮತ್ತು ಗೌರವಿಸುವ ವಿಶ್ವದ ಏಕೈಕ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, ಬ್ರಿಟಿಷರ ಆಗಮನದಿಂದಾಗಿ ನಾವು ಪ್ರಗತಿ ಹೊಂದಿದ್ದೇವೆ ಎಂದು ಕೆಲವರು ನಂಬುತ್ತಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪು, ಬಿಳಿ ಜನರು ನಮ್ಮ ದೇಶಕ್ಕೆ ಬರದಿದ್ದರೂ ನಾವು ವೇದಗಳ ಆಧಾರದ ಮೇಲೆ ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಸಮರ್ಥರಿದ್ದೆವು ಎಂದಿದ್ದಾರೆ.
'ನಮ್ಮ ಸಂಪ್ರದಾಯ ಏನು? ನಮ್ಮ ರಾಷ್ಟ್ರೀಯ ಏಕತೆಯ ಆಧಾರವೇನು? ಅದರ ಬಗ್ಗೆ ಸಾಮಾನ್ಯ ಸ್ಟ್ರೀಮ್ ನಮ್ಮ ದೇಶದ ಎಲ್ಲೆಡೆ ಇತ್ತು. ಬ್ರಿಟಿಷರ ಆಗಮನದಿಂದಾಗಿ ಅವರ ರಾಜಕೀಯ ಹಾಗೂ ಎರಡನೆಯ ಮಹಾಯುದ್ಧದ ನಂತರ ನಮ್ಮ ರಾಜಕೀಯ ಸಮೀಕರಣಗಳು ಬದಲಾದವು. ಅವರ ಹಿತಾಸಕ್ತಿಗಳಲ್ಲಿ ಅವರ ಭಾಷೆ ಹೊರಹೊಮ್ಮಿತು ಎಂದು ಮೋಹನ್ ಭಾಗವತ್ ತಿಳಿಸಿದರು.
'ನಮ್ಮದು ಹಿಂದೂ ರಾಷ್ಟ್ರ ಮತ್ತು ಹಿಂದೂ ಯಾವುದೇ ಆರಾಧನೆಯ ಹೆಸರಲ್ಲ, ಯಾವುದೇ ಭಾಷೆಯ ಹೆಸರಲ್ಲ, ಯಾವುದೇ ಪ್ರಾಂತ್ಯ ಅಥವಾ ಪ್ರದೇಶದ ಹೆಸರಲ್ಲ, ಹಿಂದೂ ಎಂಬುದು ಸಂಸ್ಕೃತಿಯ ಹೆಸರು, ಇದು ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರ ಸಾಂಸ್ಕೃತಿಕ ಪರಂಪರೆಯಾಗಿದೆ. ಈ ಸಂಸ್ಕೃತಿಯು ವೈವಿಧ್ಯತೆಯನ್ನು ಸ್ವೀಕರಿಸುವ ಮತ್ತು ಗೌರವಿಸುವ ಸಂಸ್ಕೃತಿಯಾಗಿದೆ, ಇದು ವಿಶ್ವದ ಏಕೈಕ ಸಂಸ್ಕೃತಿಯಾಗಿದೆ. ಆದ್ದರಿಂದ, ಒಂದು ದೇಶವು ಜಗತ್ತಿನಲ್ಲಿ ಎಡವಿ ಬಂದಾಗಲೆಲ್ಲಾ ಅದು ಈ ಮನೆಯ ಹತ್ತಿರ ಬಂದಿತು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಬಣ್ಣಿಸಿದರು.