ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ಹೋಗುವ ದಾರಿಯ ಉದ್ದಕ್ಕೂ ಗಿಡ-ಮರಗಳ ಕೊಂಬೆಗಳನ್ನು ಕಡಿಯಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ‌ ಬಿಬಿಎಂಪಿ ಕಡೆಯಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮೋದಿ ರೋಡ್ ಶೋಗಾಗಿ ಮರಗಳನ್ನು ಕಡಿದಿರುವ ವಿಚಾರವಾಗಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪ್ರಧಾನಿ ಮೋದಿ ರೋಡ್ ಶೋ"ಕಿಗಾಗಿ ಮರಗಳ ಕಡಿದಿದ್ದು ಯಾವ ಸಾಧನೆಗೆ?’ ಎಂದು ಪ್ರಶ್ನಿಸಿದೆ. ‘ಪ್ರಧಾನಿ ಮೋದಿ ರೋಡ್ ಶೋಕಿಯಿಂದ ಮರಗಳಿಗೆ ಕೊಡಲಿ, ನೀಟ್ ವಿದ್ಯಾರ್ಥಿಗಳ ಭವಿಷ್ಯ ಬಲಿ, ವ್ಯಾಪಾರಿಗಳ ಬದುಕು ಬಲಿ ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ಕುತ್ತು. ಜನರನ್ನು, ಜನರ ಬದುಕನ್ನು, ನಿಸರ್ಗವನ್ನು ಬಲಿ ಕೊಟ್ಟು ಪ್ರಧಾನಿ ಮೋದಿ ಮಾಡುವ ಸಾಧನೆ ಏನು?’ ಎಂದು ಕಾಂಗ್ರೆಸ್ ಕಿಡಿಕಾರಿದೆ.


"ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ"


ರಸ್ತೆ ಸಂಚಾರ ನಿಷೇಧ!


ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿನ್ನೆಲೆ ಕೆಲ ರಸ್ತೆಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರಧಾನಿ ಮೊದಿ ರೋಶ್ ಶೋ ಹಿನ್ನೆಲೆ ಬದಲೀ ರಸ್ತೆಗಳನ್ನು ಬಳಸುವಂತೆ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.


ಮೇ7ರಂದು ಪ್ರಧಾನಿ ಮೋದಿ ರೋಡ್​ ಶೋ ನಡೆಸಲಿದ್ದಾರೆ. ಹೀಗಾಗಿ ಇಂದು ಸಾಯಂಕಾಲ 5.30ರಿಂದ ರಾತ್ರಿ 7 ಗಂಟೆವರೆಗೆ ಕೆಲ ರಸ್ತೆಗಳು ಬಂದ್ ಮಾಡಲಾಗಿದೆ. ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಮನವಿ ಮಾಡಲಾಗಿದೆ. ಸಂಚಾರಕ್ಕೆ ಅಡ್ಡಿ ಆಗಬಹುದು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.


ಯಾವೆಲ್ಲ ರಸ್ತೆಗಳು ನಿರ್ಬಂಧ..!?


*ಓಲ್ಡ್ ಏರ್ಪೋರ್ಟ್ ರಸ್ತೆ


*ಕೇಂಬ್ರಡ್ಜ್ ಲೇಔಟ್ ರಸ್ತೆ


*ಇಂದಿರಾ ನಗರ 100 ಫಿಟ್ ರಸ್ತೆ


*ಅರಳಿ ಕಟ್ಟೆ


*ಎಎಸ್‍ಸಿ ಸೆಂಟರ್


*ಟ್ರಿನಿಟಿ ವೃತ್ತ


*ರಾಜಭವನ ರಸ್ತೆ​


*MG ರೋಡ್ ರಸ್ತೆ


*ಡಿಕನ್​ಸನ್​ ರಸ್ತೆ


*ಮಣಿಪಾಲ್ ಸೆಂಟರ್


*ಕಬ್ಬನ್ ರೋಡ್


*ಬಿಆರ್​ವಿ ಜಂಕ್ಷನ್


*ಸಿಟಿಓ ಜಂಕ್ಷನ್


*ಇನ್​ಫೆಂಟ್ರಿ ರಸ್ತೆ


ಮೇಲಿನ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.


ಇದನ್ನೂ ಓದಿ: Karnataka Election 2023: ಮತದಾನಕ್ಕೆ ಸಜ್ಜಾದ ಯುವಕರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.