"ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ"

 ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Written by - Zee Kannada News Desk | Last Updated : May 5, 2023, 08:01 PM IST
  • ಬಿಜೆಪಿಯ ಗುಜರಾತ್ತಿನ ಅಮ್ರೇಲಿ ಸಂಸದ ನಾರಣಭಾಯ್ ಭಿಖಾಭಾಯಿ ಕಚಾಡಿಯಾ ಅವರನ್ನು ಉಲ್ಲೇಖಿಸಿದರು
  • ನ್ಯಾಯಾಲಯವು ಕಚಾಡಿಯಾಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು
  • ನಂತರ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು
"ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ" title=

ಅಫಜಲಪುರ: ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತಾಗಿ ಅಫಜಲಪುರದಲ್ಲಿ ಮಾತನಾಡಿದ ಅವರು "ಯಾವಾಗ ನನಗೆ 2014 ರಲ್ಲಿ ಪ್ರತಿಪಕ್ಷ ನಾಯಕನಾಗಲು ಅಂದು ಸೋನಿಯ ಗಾಂಧಿ ಅವರು ಕೇಳಿಕೊಂಡರು, ಉತ್ತರಭಾರತದವರು ನಮ್ಮನ್ನು ಮದ್ರಾಸಿಗಳು ಅಂತ ಹೇಳ್ತಾರೆ.  ವಿರೋಧಪಕ್ಷ ನಾಯಕನಾಗಿ ಲೋಕಸಭೆಯಲ್ಲಿ ಕೆಲಸ ಮಾಡಿದಾಗ , ಆ ಬಿಜೆಪಿ ಸರ್ಕಾರದ ವಿರುಧ್ಧ ಹೋರಾಟ ಮಾಡಿದ್ದೇನೆ. ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ. ನನ್ನ ಮಾತಿಗೆ ಉತ್ತರ ನೀಡುವ ತಾಕತ್ತು ಮೋದಿ ಸರ್ಕಾರಕ್ಕೆ ಇರಲಿಲ್ಲ. ಕಾರಣ ಅಷ್ಟೊಂದು ನಾವು ಹೋರಾಟ ಮತ್ತು ಅನುಭವಿತ್ತು ನಮಗೆ. ಯಾಕೆಂದರೆ, ದಲಿತರು, ಹಿಂದುಳಿದ ವರ್ಗದವರ ಪರಿಸ್ಥಿತಿ, ಜನಸಾಮಾನ್ಯನ ಪರಿಸ್ಥಿತಿ,  ಮಹಿಳಾ, ರೈತರ ಮತ್ತು ಕೂಲಿಕಾರ್ಮಿಕರ ಕಷ್ಟವನ್ನು ಅರಿತುಕೊಂಡವರು ಮತ್ತು ಅವರ ಪರವಾಗಿ ಹೋರಾಟ ಮಾಡಿದವರು. ಈ ಮೋದಿ ನೇತೃತ್ವದ ಬಿಜೆಪಿ ಏನು ಗೊತ್ತಿದೆ? ಅಲ್ಲಿರುವವರೆಲ್ಲ ಆರೆಸ್ಸೆಸ್‌ ನವರು, ಅವರು ಕರಿಟೋಪಿ ಹಾಕುವವರು, ನಾವು ಗಾಂಧಿ ಟೋಪಿ ಹಾಕುವವರು, ಆರೆಸ್ಸೆಸ್, ಬಿಜೆಪಿ ಅವರು ಕೇಳಿದ್ರು, ನೀವು ದೇಶಕ್ಕಾಗಿ ಏನು ಮಾಡಿದ್ದೀರೆಂದು? ನಾವು ಅವರ ಸವಾಲನ್ನು ಸ್ವೀಕರಿಸಿ ಮಾತಿನ ಪೆಟ್ಟನ್ನು ಕೊಟ್ಟ ಮೇಲೆ ಅವರು ತಣ್ಣಗಾದರು. ಅವಗೆಲ್ಲ ಶುರು ಮಾಡಿದ್ರು, ಖರ್ಗೆ ಅವರು ಓಳ್ಳೆಯವರು ಅಂತ ಹೇಳಕ್ಕೆ ಶುರು ಮಾಡಿದ್ರು, ಅದಕ್ಕೆ ಕಾರಣ ಕಲಬುರಗಿಯ ಜನತೆಯ ಆಶೀರ್ವಾದ ಎಂದರು.

ಈ ಭ್ರಷ್ಟ, 40% ಕಮಿಷನ್‌ ಸರ್ಕಾರವನ್ನು ಕಿತ್ತೊಗೆದು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಹೀಗಾಗಿ ಈ ಕ್ಷೇತ್ರದಲ್ಲಿ ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಎಮ್.ವೈ ಪಾಟೀಲ್‌ ರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಇದೊಂದು ಹೋರಾಟ, ನಾವು ಯುದ್ದ ಗೆಲ್ಲಬೇಕಾದರೆ ಯುದ್ದದಲ್ಲಿ ಹೋರಾಟ ಮಾಡಿ ಗೆಲ್ಲಬೇಕು ಅಥವಾ ಸೋಲಬೇಕು. ಮಹಾತ್ಮ ಗಾಂಧೀ ಅವರ ಮಾಡು ಇಲ್ಲವೇ ಮಡಿ ಎಂಬ ಘೋಷ ವಾಕ್ಯದಂತೆ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಅದಕ್ಕಾಗಿ ಇಂದು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ಕೆಟ್ಟ ಸರ್ಕಾರವನ್ನು ತೆಗೆದು ಹಾಕಬೇಕು ಮತ್ತು ಸುಖ, ಸಮೃದ್ಧಿ ಮತ್ತು ನೆಮ್ಮದಿ ನಮ್ಮ ರಾಜ್ಯದಲ್ಲಿ ಬರಬೇಕಾದರೆ ನೀವು ಸತತ ಹೋರಾಟವನ್ನು ಮಾಡುತ್ತಿರಬೇಕು. 

ಈ ಬಿಜೆಪಿ ಸರ್ಕಾರ ಜನ ಕಷ್ಟದಲ್ಲಿದ್ದಾಗ ಬಂದಿಲ್ಲ, ಕೋವಿಡ್‌ ಮಹಾಮಾರಿ ಬಂದಾಗ ಇವರು ನೆರವಿಗೆ ಬಂದಿಲ್ಲ ಅದೇರೀತಿ ಪ್ರವಾಹ ಬಂದಗಲೂ ಈ ಸರ್ಕಾರ ನೆರವಿಗೆ ಬರಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತವೆಂದು ಹೇಳಿದ್ರು, ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತವೆಂದು ಹೇಳಿದ್ರು, 15 ಲಕ್ಷ ನಿಮ್ಮ ಖಾತೆಗೆ ಹಣ ಹಾಕುತ್ತವೆಂದು ಹೇಳಿ ಜನತೆಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. 

ಈ ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯನಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ, 45 ಕೋಟಿ ಜನರ ಹತ್ತಿರ ಯಾವುದೇ ಕೆಲಸವಿಲ್ಲ. ನೌಕರಿಯಿಂದ ವಂಚಿತರಾಗಿದ್ದಾರೆ. ಬಡವರು ಸಾಲವನ್ನು ಮರುಪಾವತಿ ಮಾಡದ್ದಿದಲ್ಲಿ ಈ ಸರ್ಕಾರ ಜಪ್ತಿ ಮಾಡುತ್ತೆ. ಆದರೆ ಶ್ರೀಮಂತರು 565000 ಲಕ್ಷ ಕೋಟಿ ಈ ಶ್ರೀಮಂತರು ಬ್ಯಾಂಕಿನಿಂದ ದುಡ್ಡು ಹೊಡೆದಿದ್ದಾರೆ. ನಾವು ಗಾಳಿಯಲ್ಲಿ ಗುಂಡು ಹೊಡೆಯಲ್ಲ, ಇದು ಸತ್ಯ. ನಾವು ಸತ್ಯವನ್ನೇ ಹೇಳ್ತೇವೆ ಎಂದರು.

375 ಕೋಟಿ ರೂ ದಿನ ಶ್ರಿಮಂತರ ಹಣವನ್ನು ಬ್ಯಾಂಕಿನಿಂದ ಸಾಲಮನ್ನಾ ಮಾಡುತ್ತಿದ್ದಾರೆ. 11 ಲಕ್ಷ ಕೋಟಿ ಕೂಡ ಮಾಫಿ ಮಾಡಿದ್ದಾರೆ. ಜನ ಸಾಮಾನ್ಯರ ದುಡ್ಡು ಬ್ಯಾಂಕಿನಿಂದ ತೆಗೆದು ಇಂದು ಶ್ರೀಮಂತರಿಗೆ ಕೊಡುತ್ತ ಇದ್ದಾರೆ,  ಈ ಸರ್ಕಾರ ಜನಸಾಮಾನ್ಯನ ಅಭಿವೃದ್ಧಿಗಾಗಿ ಏನೂ ಕೆಲಸ ಮಾಡಿಲ್ಲ ಕೇವಲ ಶ್ರೀಮಂತರ ಪರ ಇದೆ ಈ ಸರ್ಕಾರ. ನಾನು ಇದನ್ನು ಸಂಸತ್ತಿನಲ್ಲೂ ಹೇಳಿದ್ದೇನೆ, ನನ್ನ ಮತ್ತು ರಾಹುಲ್‌ ಗಾಂಧೀ ಅವರ ಭಾಷಣವನ್ನು ತೆಗದು ಹಾಕಿದ್ದಾರೆ. ರಾಹುಲ್‌ ಗಾಂಧೀ ಅವರ ಸಂಸದ ಸ್ಥಾನದ ಸದಸ್ಯತ್ವವನ್ನು ತೆಗೆದು ಹಾಕಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಜೀ ಕನ್ನಡ ನ್ಯೂಸ್‌ ಜೊತೆ ಜಗದೀಶ್ ಶೆಟ್ಟರ್ ಮಾತು

ಬಿಜೆಪಿಯ ಗುಜರಾತ್ತಿನ ಅಮ್ರೇಲಿ ಸಂಸದ ನಾರಣಭಾಯ್ ಭಿಖಾಭಾಯಿ ಕಚಾಡಿಯಾ ಅವರನ್ನು ಉಲ್ಲೇಖಿಸಿದರು. ನ್ಯಾಯಾಲಯವು ಕಚಾಡಿಯಾಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ನಂತರ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.ಗುಜರಾತ್ ಸಂಸದರಿಗೆ ಸಂಸತ್ತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಆದರೆ ಸತ್ಯವನ್ನು ಮಾತನಾಡುವ ವ್ಯಕ್ತಿಯನ್ನು ಸಂಸತ್ತಿನಿಂದ ಹೊರಗಿಡಲಾಗಿದೆ.  ಮೋದಿ ಸರ್ಕಾರದ ಬೂಟಾಟಿಕೆ ಮತ್ತು ದ್ವಂದ್ವ ನೀತಿಯ ಪರಮಾವಧಿ.  ಗುಜರಾತ್‌ನ ಬಿಜೆಪಿ ಸಂಸದರಿಗೆ ಸ್ಥಳೀಯ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಆದರೆ 16 ದಿನಗಳವರೆಗೆ ಯಾವುದೇ ಅನರ್ಹತೆ ಇರಲಿಲ್ಲ. ಆದರೆ ಮಿಂಚಿನ ವೇಗದಲ್ಲಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು ಎಂದು ಟೀಕಿಸಿದರು.

ಬಸವಣ್ಣ ತತ್ವದ ಮೇಲೆ ನೀವು ನಡೆದುಕೊಳ್ಳಿ, ಕಳ್ಳತನ ಮಾಡಬೇಡಿ, ಹೇಳಿದ್ರು ನಿಮ್ಮ 40% ಕಮಿಷನ್‌, ಬಸವಣ್ಣ ಹೇಳಿದ್ರು ಹೊಟ್ಟಿಕಿಚ್ಚು ಪಡಬೇಡಿ ಎಂದು ಆದರೆ ಈ ಸರ್ಕಾರ ದಿನಲೂ ನಮ್ಮ ಮೇಲೆ ಆಸೂಯೆ ಪಡುತ್ತಾ ಇದ್ದಾರೆ. ಡಬಲ್‌ ಎಂಜಿನ್‌ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ 9 ವರ್ಷಗಳಲ್ಲಿ ಈ ಸರ್ಕಾರ ಜನತೆಗೆ ಏನು ಮಾಡಿಲ್ಲ ಜನ ಸಂಕಷ್ಟದಿಂದ ಬದುಕುವಂತಾಗಿದೆ. ಬೆಲೆಯೇರಿಕೆ, ಹಣದುಬ್ಬರ, ಅಗತ್ಯ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. 
ಮೋದಿ ಸರ್ಕಾರ ಹೇಳೊದು ಒಂದು, ಮಾಡೋದು ಇನ್ನೋಂದು ಆದರೆ ನಾವು ಈ ಬಾರಿ ಗ್ಯಾರಂಟಿ ಭರವಸೆಗಳನ್ನು ಕೊಡುತ್ತಾ ಇದ್ದೇವೆ ಎಂದು ಹೇಳಿದರು. 

ಕಾಂಗ್ರೆಸ್‌ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷನೆ ಮಾಡಿದ್ದೇವೆ ಇದರೊಂದಿಗೆ ಎಲ್ಲ ಐದು ಘೋಷಣೆಗಳನ್ನು ಜಾರಿಗೆ ತರುವುದು ನನ್ನ ಗ್ಯಾರಂಟಿ ಎಂದು ಭರವಸೆ. 10 ಕೆ.ಜಿ. ಅಕ್ಕಿ, 200 ಯೂನಿಟ್‌ ವಿದ್ಯುತ್‌, ಯುವನಿಧಿ ಮೂರು ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಗೆ ಎರಡು ಸಾವಿರ ರೂಪಾಯಿ ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಪಾಸ್‌ ನೀಡುವುದು  ನಮ್ಮ ಕಾಂಗ್ರೆಸ್ಸು ಪಕ್ಷದ ಪ್ರಮುಖ ಐದು ಭರವಸೆ ಮತ್ತು ಗ್ಯಾರಂಟಿ. ನಾವು ನುಡಿದಂತೆ ನಡೆಯುತ್ತೇವೆ. ಈ ಹಿಂದೆಯು ನುಡಿದಂತೆ ನಾವು ನಡೆದಿದ್ದೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ಮೋದಿ ರೋಡ್‌ ಶೋ ರೂಟ್‌ ಚೇಂಜ್‌

“ಕಲಬುರಗಿಯ ಜನತೆ ಕೈ ಬಿಟ್ರು ಕೂಡ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನನ್ನನ್ನು ಕೈ ಬಿಟ್ಟಿಲ್ಲ.” ಕೇಂದ್ರದಲ್ಲಿ ನನಗೆ ಯುಪಿಎ ಸರ್ಕಾರವಿದ್ದಾಗ  ಕಾರ್ಮಿಕ, ರೈಲ್ವೇ ಸೇರಿದಂತೆ ಪ್ರಮುಖ ಖಾತೆಗಳನ್ನು ಕೊಟ್ಟಿದ್ದರು, ಅದೇರೀತಿ ನನ್ನನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ರು ತದನಂತರ ರಾಜ್ಯಸಭೆಗೆ ಕಳುಹಿಸಿ ಅಲ್ಲಿಯೂ ಕೂಡ ವಿರೋಧ ಪಕ್ಷದ ನಾಯಕರಾಗಿ ಮಾಡಿದ್ದಾರೆ, ಇದೀಗ  ಇಂದು ನಿಮ್ಮೆಲ್ಲರ ಆಶೀವಾರ್ದದಿಂದ ಇಂದು ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಈ ಸ್ಥಾನದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. ಈ ಎಐಸಿಸಿ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಕ್ಕಿಲ್ಲ.  ಈ ಸ್ಥಾನದಲ್ಲಿ ಗಾಂಧೀ, ನೆಹರೂ, ಪಟೇಲ್‌ ಹಾಗೂ ಮೌಲಾನ ಆಝಾಧ್‌ ಈ ಸ್ಥಾನವನ್ನು ಅಲಂಕರಿಸಿದ್ದರು.  ಆ ಸ್ಥಾನ ಇಂದು ಕಲಬುರಗಿ ಜನತೆಯ ಆಶೀವಾರ್ದದಿಂದ ಇಂದು ಈ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿದರು,

ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಕೆಲ ಜನ ಅಪ್ರಪಚಾರ ಮಾಡುತ್ತಾ ಇದ್ದಾರೆ. ನನ್ನನ್ನು ಸೋಲಿಸಿದರೂ ಪರವಾಗಿಲ್ಲ, ಎಂ.ವೈ ಪಾಟೀಲರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಎಂದರು. ಒಂದು ವೇಳೆ ಅವರನ್ನು ಸೋಲಿಸಿದ್ದಲ್ಲಿ ನನಗೂ ಮತ್ತು ನನ್ನ ಪಕ್ಷಕ್ಕೂ ಅವಮಾನ. ಇದು ನನ್ನ ಪಕ್ಷದ ಪ್ರಶ್ನೆ. ನನ್ನ ಹೆಸರಿನ ಮೇಲೆ ರಾಜಕೀಯ ಮಾಡಕ್ಕೆ ಹೋಗಬೇಡಿ. ನೂರಕ್ಕೂ ನೂರು ಎಂ.ವೈ ಪಾಟೀಲರನ್ನು ಗೆಲ್ಲಸಿ ಎಂದು ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News