ಬೆಂಗಳೂರು: ಸಿದ್ದರಾಮಯ್ಯನ ಹುಂಡಿಯಲ್ಲಿ ಜನ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಸಿದ್ದರಾಮಯ್ಯರ ತುಷ್ಟೀಕರಣ ಹಾಗೂ ಇಬ್ಬಗೆ ನೀತಿ ವಿರೋಧಿಸಿ ಕಾರ್ಯಕರ್ತರು ಅವರನ್ನು ಕೈಬಿಟ್ಟು ಬಿಜೆಪಿ ಬೆಂಬಲಿಸುತ್ತಿದ್ದು, ಅಂದು ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾದಂತೆ, ಈ ಬಾರಿ ವರುಣಾದಲ್ಲಿಯೂ ಸಿದ್ದರಾಮಯ್ಯ ಸೋಲಲಿದ್ದಾರೆಂದು ಬಿಜೆಪಿ ಫೋಟೋ ಸಮೇತ ಟ್ವೀಟ್ ಮಾಡಿತ್ತು.


COMMERCIAL BREAK
SCROLL TO CONTINUE READING

ಬಿಜೆಪಿಯ ಈ ಟ್ವೀಟ್‍ಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ ಬಿಜೆಪಿಯ ಐಟಿ ಸೆಲ್ ಜಗತ್ತಿನ ಏಕೈಕ "ಫೇಕ್ ಫ್ಯಾಕ್ಟರಿ"! ಇನ್ನೆಲ್ಲಿಯದ್ದೋ ಫೋಟೋ ತಂದು ಸಿದ್ದರಾಮನಹುಂಡಿಯ ಹೆಸರಿಗೆ ಜೋಡಿಸುವ ಕಲೆ ಬಿಜೆಪಿಗೆ ಮಾತ್ರ ಸಾಧ್ಯವಾಗುವಂತದ್ದು! ನಳೀನ್ ಕುಮಾರ್ ಕಟೀಲ್ ಅವರೇ, ನಿಮ್ಮ ಐಟಿ ಸೆಲ್‌ನವರಿಗೆ ಕನಿಷ್ಠ 40% ಸಂಬಳವನ್ನಾದರೂ ಸಮರ್ಪಕವಾಗಿ ಕೊಡಿ, ಇಲ್ಲದಲ್ಲಿ ಇಂತಹ ಅವಾಂತರ ಸೃಷ್ಟಿಸುತ್ತಾರೆ!’ ಎಂದು ಕುಟುಕಿದೆ.


ಲಿಂಗಾಯತ & ಹಿಂದುಳಿದ ನಾಯಕತ್ವ ಮುಗಿಸಿದ BL ಸಂತೋಷ್‍ಗೆ ಚುನಾವಣೆ ಎದುರಿಸಲು ಭಯವೇಕೆ?: ಕಾಂಗ್ರೆಸ್


‘ಬಿಜೆಪಿ ಹಣ ಚೆಲ್ಲಿದರೂ ಖಾಲಿ ಕುರ್ಚಿಗಳ ದರ್ಶನ ನಿಲ್ಲಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿ ಕ್ಷೇತ್ರದಲ್ಲೂ, ಪ್ರತಿ ಅಭ್ಯರ್ಥಿಗೂ ಜನಬೆಂಬಲದ ಮಹಾಪೂರವೇ ದೊರಕಿದೆ. ಕನ್ನಡಿಗರು ಕಾಂಗ್ರೆಸ್ ಬಗ್ಗೆ ಇಟ್ಟಿರುವ ನಿರೀಕ್ಷೆ ಈಡೇರಲು ಹಾಗೂ ರಾಜ್ಯಕ್ಕೆ ಸುಭೀಕ್ಷೆಯ ಕಾಲ ಬರಲು ಇನ್ನು ಕೆಲವೇ ದಿನ ಬಾಕಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಬಿ.ಎಸ್.ಯಡಿಯೂರಪ್ಪರನ್ನು ಪದಚ್ಯುತಿ ಮಾಡಿದಾಗಲೇ ಬಿಜೆಪಿಯ ಲಿಂಗಾಯತರ ಹತಾಶೆಯ ಅಣೆಕಟ್ಟು ಒಡೆದಿದೆ. ಆ ಅಣೆಕಟ್ಟೆಯ ನೀರೇ BSY ಕಣ್ಣಲ್ಲಿ ಜಿನುಗಿದ್ದಲ್ಲವೇ? ಸಿಸಿ ಪಾಟೀಲ್ ಅವರೇ ಬಿ.ಎಲ್.ಸಂತೋಷ್ ಅವರ ಕೃಪೆಗಾಗಿ ನೀವೆಷ್ಟೇ ಕಸರತ್ತು ಮಾಡಿದರೂ ನಿಮಗೆ ಬಿಜೆಪಿಯ ಗರ್ಭಗುಡಿಯೊಳಗೆ ಪ್ರವೇಶ ಸಿಗುವುದಿಲ್ಲ. ಮುಂದೆ ನಿಮಗೂ ಶೆಟ್ಟರ್‌ ಪರಿಸ್ಥಿತಿ ತರಲಿದೆ ಬಿಜೆಪಿ’ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.


ಇದನ್ನೂ ಓದಿ: ʼಮೋದಿ ನನ್ನ ದೇವರು..ʼ.! ಮಳೆಯಲ್ಲಿ ನೆನೆದಿದ್ದ ಪ್ರಧಾನಿ ಕಟೌಟ್‌ ಒರೆಸಿದ ʼನಮೋ ಅಭಿಮಾನಿʼ..


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...