ಲಿಂಗಾಯತ & ಹಿಂದುಳಿದ ನಾಯಕತ್ವ ಮುಗಿಸಿದ BL ಸಂತೋಷ್‍ಗೆ ಚುನಾವಣೆ ಎದುರಿಸಲು ಭಯವೇಕೆ?: ಕಾಂಗ್ರೆಸ್

Karnataka Assembly Election 2023: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಜನಬೆಂಬಲ ಪಡೆದು ಬರಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

Written by - Puttaraj K Alur | Last Updated : Apr 22, 2023, 05:52 PM IST
  • ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ & ಹಿಂದುಳಿದ ನಾಯಕತ್ವ ಮುಗಿಸಿದ
  • ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ಧಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ
  • ಬಿ.ಎಲ್.ಸಂತೋಷ್ ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ? ಎಂದು ಪ್ರಶ್ನಿಸಿದ ಕಾಂಗ್ರೆಸ್
ಲಿಂಗಾಯತ & ಹಿಂದುಳಿದ ನಾಯಕತ್ವ ಮುಗಿಸಿದ BL ಸಂತೋಷ್‍ಗೆ ಚುನಾವಣೆ ಎದುರಿಸಲು ಭಯವೇಕೆ?: ಕಾಂಗ್ರೆಸ್ title=
ಬಿ.ಎಲ್.ಸಂತೋಷ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ & ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿ.ಎಲ್.ಸಂತೋಷ್ ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಜನಬೆಂಬಲ ಪಡೆದು ಬರಲಿ’ ಎಂದು ಸವಾಲು ಹಾಕಿದೆ.

‘ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿಂದುತ್ವದ ಮುಖಂಡರಾದ ಪ್ರಮೋದ್ ಮುತಾಲಿಕ್, ಸತ್ಯಜಿತ್ ಸೂರತ್ಕಲ್ ಅವರುಗಳ ಭದ್ರತೆಯನ್ನು ಬಿಜೆಪಿ ಸರ್ಕಾರ ವಾಪಾಸ್ ಪಡೆದಿದೆ. ಹೆಣ ರಾಜಕೀಯಕ್ಕೆ ಹೆಸರುವಾಸಿಯಾದ ಬಿಜೆಪಿ ಇನ್ಯಾರ ಶವಕ್ಕಾಗಿ ಕಾದು ಕುಳಿತಿದೆ? ಭದ್ರತೆ ವಾಪಸ್ ಪಡೆದಿರುವುದರ ಹಿಂದೆ ಯಾವ ಷಡ್ಯಂತ್ರ ಅಡಗಿದೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: Karnataka election 2023: 10 ಡಿಕೆಶಿ ಬಂದ್ರೂ ಲಿಂಗಾಯತರ ಡ್ಯಾಂ ಒಡೆಯಲ್ಲ- ಸಿಸಿ ಪಾಟೀಲ್

‘40% ಭ್ರಷ್ಟ ಗಂಟು’ ಬಿಜೆಪಿಗರ ಕೈಸೇರಿದೆ, ಆದರೆ ಚರ್ಮಗಂಟು ರೋಗದ ಪರಿಹಾರ ರೈತರ ಕೈಸೇರಿಲ್ಲ! ಚರ್ಮಗಂಟು ರೋಗಕ್ಕೆ ಸಮರ್ಪಕ ಲಸಿಕೆ ನೀಡದೆ ಗೋಮಾತೆಯ ಸಾವಿಗೆ ಕಾರಣವಾದ ಬಿಜೆಪಿ ರೈತರಿಗೆ ಪರಿಹಾರವನ್ನೂ ನೀಡದೆ ವಂಚಿಸಿದೆ. ರೈತರಿಗೆ & ಗೋಮಾತೆಗೆ ಹಲವು ದ್ರೋಹವೆಸಗಿದ ಬಿಜೆಪಿ ಯಾವ ನೈತಿಕತೆಯಲ್ಲಿ ಮತ ಕೇಳಲು ಜನರ ಮುಂದೆ ಹೋಗುತ್ತದೆ?’ ಎಂದು ಕಾಂಗ್ರೆಸ್ ಕುಟುಕಿದೆ.

‘ಬಿಜೆಪಿ ಆಡಳಿತದಲ್ಲಿ CBI ಅಂದರೆ ಸತ್ಯ ಹೇಳುವವರ ಬಾಯಿ ಮುಚ್ಚಿಸುವ ಸಂಸ್ಥೆ ಎಂದಾಗಿದೆ. ಪುಲ್ವಾಮದಲ್ಲಿ 40 ಯೋಧರ ಸರ್ಕಾರಿ ಕೊಲೆಯ ನಗ್ನಸತ್ಯವನ್ನು ಹೇಳಿದ ಸತ್ಯಪಾಲ್ ಮಲಿಕ್ ಅವರ ವಿರುದ್ಧ ಸತ್ಯ ನುಡಿದ ಎರಡೇ ದಿನದಲ್ಲಿ ಕಾರ್ಯಾಚರಣೆಗೆ ಇಳಿದಿದೆ CBI. ಪುಲ್ವಾಮ ದಾಳಿಯ ತನಿಖೆ ಮಾತ್ರ ಇನ್ನೂ ಮುಗಿದಿಲ್ಲ, ಸತ್ಯ ಹೊರಬರಲೇ ಇಲ್ಲ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ʼಮೋದಿ ನನ್ನ ದೇವರು..ʼ.! ಮಳೆಯಲ್ಲಿ ನೆನೆದಿದ್ದ ಪ್ರಧಾನಿ ಕಟೌಟ್‌ ಒರೆಸಿದ ʼನಮೋ ಅಭಿಮಾನಿʼ..

ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯ!

ಪ್ರಧಾನಿ ಮೋದಿ ಉದ್ಘಾಟಿಸಿದ ಹೈವೇ ಮಳೆಯಲ್ಲಿ ಮುಳುಗಿತು, ಟೇಪ್ ಕಟ್ ಮಾಡಿದ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿತು, ರೋಡ್ ಶೋ ಮಾಡಿದ ರಸ್ತೆ ಕಿತ್ತುಬಂತು, ಶಿವಮೊಗ್ಗ ಏರ್ಪೋರ್ಟ್ ಬಾಗಿಲು ಮುಚ್ಚಿತು, ಬೆನ್ನಿಗೆ ಗುದ್ದಿದ ರಾಮದಾಸ್ ಮನೆಯಲ್ಲಿ ಕೂರುವಂತಾಯ್ತು, ಕರೆ ಮಾಡಿದ ಕೆ.ಎಸ್.ಈಶ್ವರಪ್ಪರ ರಾಜಕೀಯ ಜೀವನ ಮುಗಿಯಿತು. ಇದೇನು ಕಾಕತಾಳೀಯ?’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News