ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಪಟ್ಟ ಯಾರಿಗೆ..? : ಬಿವೈವಿ ಹೇಳಿದ್ದಿಷ್ಟು
ಬಿಜೆಪಿ ಅಧಿಕಾರಕ್ಕೆ ಬರೋದು ಮುಖ್ಯ. ಮುಂದಿನ ಸಿಎಂ ಯಾರು ಅನ್ನೋದನ್ನ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. 19 ರಂದು ನಾನು ನಾಮಪತ್ರ ಸಲ್ಲಿಕೆ ಮಾಡ್ತೀನಿ. ನಾವು ಮೆಜಾರಿಟಿ ಬಂದೇ ಬರ್ತೀವಿ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದರು.
ಬೆಂಗಳೂರು : ಯಾರು ಸಿಎಂ ಆಗ್ತಾರೆ ಅನ್ನೋದು ಮುಖ್ಯ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬರೋದು ಮುಖ್ಯ. ನಂತರ ಪಕ್ಷ ತೀರ್ಮಾನ ಮಾಡಲಿದೆ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ ಯಾರು ಅನ್ನೊ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈವಿ, 19 ರಂದು ನಾನು ನಾಮಪತ್ರ ಸಲ್ಲಿಕೆ ಮಾಡ್ತೀನಿ. ನಾವು ಮೆಜಾರಿಟಿ ಬಂದೇ ಬರ್ತೀವಿ, ವರಿಷ್ಠರು ಹಾಗೂ ರಾಜ್ಯದ ನಾಯಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಇದ್ದಾರೆ. ಸಂಘಟನೆಯ ಶಕ್ತಿಯ ಆಧಾರದ ಮೇಲೆ ನಾವು ಮತ್ತೆ ಅಧಿಕಾರಕ್ಕೆ ಬರ್ತೀವಿ. ಶಿರ ಹಾಗೂ ಕೆ.ಆರ್.ಪೇಟೆಯಲ್ಲಿ ಗೆದ್ದದ್ದು ವಿಜಯೇಂದ್ರನಿಂದ ಅಲ್ಲ. ಕಾರ್ಯಕರ್ತರ ಸಂಘಟನೆಯಿಂದ ನಾವು ಅಲ್ಲಿ ಆಗ ಗೆದ್ವಿ, ವಿಜಯೇಂದ್ರ ಅನ್ನೋದು ನೆಪ ಮಾತ್ರ ಎಂದರು.
ಇದನ್ನೂ ಓದಿ: MP Kumaraswamy: ಕೈ ತಪ್ಪಿದ್ದ ಟಿಕೆಟ್ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !
ಬಿಎಸ್‌ವೈ ಪುತ್ರ ಅನ್ನೊ ಕಾರಣಕ್ಕೆ ಟಿಕೆಟ್ : ನಾನು ಹಲವಾರು ವರ್ಷಗಳಿಂದ ಸಂಘಟನೆ ಕೆಲಸ ಮಾಡಿದ್ದೇನೆ, ಬಿಎಸ್ ವೈ ಮಗ ಅಂತ ಟಿಕೆಟ್ ಕೊಡೋದೇ ಆಗಿದ್ರೆ. ಕಳೆದ ಬಾರಿಯೇ ವರುಣದಿಂದ ಟಿಕೆಟ್ ಸಿಕ್ತಾ ಇತ್ತು. ಇಂಥಹ ಪರಿಪಾಠ ಈ ಪಕ್ಷದಲ್ಲಿ ಇಲ್ಲ,ಪಕ್ಷ ಅವಲೋಕನ ಮಾಡಿಯೇ ಟಿಕೆಟ್ ಕೊಡೋದು.ಬಿಎಸ್ ವೈ ಮಗ ಅಂತ ಟಿಕೆಟ್ ಕೊಟ್ಟಿದಾರೆ ಅಂತ ನನಗೆ ಅನ್ನಿಸಿಲ್ಲ ಎಂದರು.
ಟಿಕೆಟ್ ಮಿಸ್ ನಿಂದ ಅಸಮಾಧಾನ ವಿಚಾರ : ಬಂಡಾಯ ಅನ್ನೋದು ಸಹಜ, ಪೈಪೋಟಿ ಸಹಜವಾಗಿ ಇದ್ದೇ ಇದೆ. ಇದೆಲ್ಲವನ್ನೂ ಕೂಡ ಸಿಎಂ, ಬಿಎಸ್ವೈ, ಪಕ್ಷದ ಅಧ್ಯಕ್ಷರು ಕೂತು ಮಾತಾಡಿ ಸರಿ ಪಡಿಸುತ್ತಾರೆ. ಲಕ್ಷ್ಮಣ್ ಸವದಿ ಅವರಿಗೆ ಪಕ್ಷ ಏನೇನು ಕೊಟ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ. ಇದೆಲ್ಲಾವನ್ನು ಪಕ್ಷದ ಹಿರಿಯರು ಸರಿ ಮಾಡುವ ಕೆಲಸ ಮಾಡ್ತಾರೆ.
ಇದನ್ನೂ ಓದಿ: ಬಿಜೆಪಿ ಬಂಡಾಯವೇ ಕೈ ಬಂಡವಾಳ..! ಚಾಮರಾಜನಗರದಲ್ಲೇ ಸೋಮಣ್ಣಗೆ ಚಕ್ರವ್ಯೂಹ
ವರುಣ ಪ್ರಚಾರ : ವರುಣ ಸೇರಿದಂತೆ ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಪ್ರಚಾರ ಮಾಡ್ತೀನಿ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಿದೆ, ಬಹಳ ವಿಸ್ತೃತವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು, ಸರ್ವೇ ಮಾಡಿ ಟಿಕೆಟ್ ನೀಡಲಾಗಿದೆ. ಮಹಿಳೆಯರಿಗೆ, ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ಕೊಡಲಾಗಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್ ಕೊಟ್ಟಿರೋದು ಇದೊಂದೆ ಪಕ್ಷ. ಹೀಗಾಗಿ ಪಕ್ಷದ ವರಿಷ್ಠರಿಗೆ ಧನ್ಯವಾದ ಹೇಳ್ತೀನಿ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.