ಗಾಂಧಿನಗರ ವಿಧಾನಸಭಾ ಕ್ಷೇತ್ರ: ಗುಂಡೂರಾವ್ ಗೆಲುವಿನ ಓಟ ಮುಂದುವರೆಯುತ್ತಾ?

Karnataka Assembly election 2023: ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದು, ಮಾಜಿ ಸಚಿವ ರಾಮಚಂದ್ರೇಗೌಡರ ಪುತ್ರ ಸಪ್ತಗಿರಿಗೌಡರಿಗೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಜೆಡಿಎಸ್‌ ಪಕ್ಷ ವಿ.ನಾರಾಯಣಸ್ವಾಮಿಗೆ ಟಿಕೆಟ್‌ ಘೋಷಿಸಿದೆ.

Written by - Prashobh Devanahalli | Edited by - Puttaraj K Alur | Last Updated : Apr 12, 2023, 10:26 PM IST
  • ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ 3 ಪಕ್ಷಗಳ ರಣತಂತ್ರ!
  • 5 ಬಾರಿ ಗೆದ್ದಿರುವ ದಿನೇಶ್ ಗುಂಡೂರಾವ್‍ಗೆ ಈ ಬಾರಿಯೂ ಸಿಗುತ್ತಾ ಗೆಲುವು?
  • ದಿನೇಶ್ ಗುಂಡೂರಾವ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ತೊಡೆತಟ್ಟಿ ಅಖಾಡಕ್ಕೆ ಇಳಿದ ವಿಪಕ್ಷಗಳು
ಗಾಂಧಿನಗರ ವಿಧಾನಸಭಾ ಕ್ಷೇತ್ರ: ಗುಂಡೂರಾವ್ ಗೆಲುವಿನ ಓಟ ಮುಂದುವರೆಯುತ್ತಾ? title=
ಯಾರಿಗೆ ವಿಜಯಮಾಲೆ?

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ ಅಂದರೆ ಅದು ಗಾಂಧಿನಗರ ವಿಧಾನಸಭಾ ಕ್ಷೇತ್ರ. ಸತತವಾಗಿ 5 ಬಾರಿ ಗೆದ್ದಿರುವ ದಿನೇಶ್ ಗುಂಡೂರಾವ್‍ ಈ ಬಾರಿಯೂ ಬಾರಿ ವಿಜಯ ಸಾಧಿಸುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ.  

ಬೆಂಗಳೂರಿನ ಮೆಜಸ್ಟಿಕ್, ಗಾಂಧಿನಗರ ಬಡಾವಣೆ ವಾಣಿಜ್ಯ ಚಟುವಟಿಗೆ ಹೆಸರು ಮಾಡಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ದಿನೇಶ್ ಗುಂಡೂರಾವ್‍ 5 ಬಾರಿ ಗೆದ್ದು ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಈ ಬಾರಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ವಿಪಕ್ಷಗಳು ತೊಡೆತಟ್ಟಿ ಅಖಾಡಕ್ಕೆ ಇಳಿದಿವೆ.

ಗಾಂಧಿನಗರದ ಕ್ಷೇತ್ರ ಪ್ರರಿಚಯ

ಗಾಂಧಿನಗರ ಎಂದ ತಕ್ಷಣವೇ ನೆನಪಾಗುವುದು ಚಿತ್ರರಂಗ. ಕನ್ನಡದ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಗಳು, ಅಪೂರ್ವ ಇತಿಹಾಸವಿರುವ ಚಿತ್ರ ಮಂದಿರಗಳು ಇರುವ ಪ್ರದೇಶ ಇದು. ಇಲ್ಲಿಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು ಸೇರಿದಂತೆ ಹಲವು ಭಾಷೆ ಮಾತನಾಡುವ ಜನರಿದ್ದಾರೆ. ಪ್ರತಿ ದಿನ ಲಕ್ಷಾಂತರ ವಲಸಿಗರು ಬಂದು ಹೋಗುವ ಸ್ಥಳ ಇದಾಗಿದೆ.

ಇದನ್ನೂ ಓದಿ: ವರುಣದಲ್ಲಿ ಮಾತ್ರ ಸ್ಪರ್ಧಿಸಿ ತಾಕತ್ ತೋರಲಿ- ಈಗ ನನ್ನ ತಲೆ ಮೇಲೆ ಕಾಲಿಟ್ಟಿದ್ದಾರೆ: ಸೋಮಣ್ಣ ವಿರುದ್ಧ ರುದ್ರೇಶ್ ಕೆಂಡ

ಮೆಜೆಸ್ಟಿಕ್‌ ವ್ಯಾಪ್ತಿಯ ಕ್ಷೇತ್ರ

ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್‌ ನಗರ, ಓಕಳೀಪುರಂ, ಚಿಕ್ಕಪೇಟೆ, ಕಾಟನ್‌ ಪೇಟೆ, ಬಿನ್ನಿಪೇಟೆ ವಾರ್ಡ್‌ಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಹಳೆಯ ಬೆಂಗಳೂರಿನ ಭಾಗವಾಗಿರುವ ಈ ಕ್ಷೇತ್ರದಲ್ಲಿ ಬಡಾವಣೆಗಳು ಒತ್ತೊತ್ತಾಗಿವೆ. ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿನಗರದಲ್ಲಿ ಮೂಲಸೌಲಭ್ಯಗಳದ್ದೇ ಕೊರತೆ. ಶಾಲೆ, ಆಸ್ಪತ್ರೆ, ರಸ್ತೆಗಳಂತಹ ಮೂಲಸೌಕರ್ಯಗಳನ್ನು ಸೂಕ್ತ ರೀತಿಯಲ್ಲಿಒದಗಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಲ್ಲದೆ ಹಿಂದುಳಿದ ಕ್ಷೇತ್ರವಾಗಿದೆ ಎಂಬುದು ನಿವಾಸಿಗಳ ದೂರು. ಕೆಂಪೇಗೌಡ ಬಸ್‌​ ನಿಲ್ದಾಣ, ನಗರ ಕೇಂದ್ರ ರೈಲು ನಿಲ್ದಾಣ ಪ್ರದೇಶವನ್ನೂ ಈ ಕ್ಷೇತ್ರ ಒಳಗೊಂಡಿದೆ.

ಮತದಾರರ ಸಂಖ್ಯೆ

ಒಟ್ಟು ಮತದಾರರ ಸಂಖ್ಯೆ : 2,26,350

ಪುರುಷ : 1,16,719

ಮಹಿಳೆ: 1,09,607

ತೃತೀಯ ಲಿಂಗಿಗಳು : 24

ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದು, ಮಾಜಿ ಸಚಿವ ರಾಮಚಂದ್ರೇಗೌಡರ ಪುತ್ರ ಸಪ್ತಗಿರಿಗೌಡರಿಗೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇನ್ನು ಬಿಜೆಪಿಯಲ್ಲಿ ಮಾಜಿ ಕಾರ್ಪೊರೇಟರ್‌ ಶಿವಕುಮಾರ್‌, ಮಾಜಿ ಸಚಿವ ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅವರು ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಜೆಡಿಎಸ್‌ ಪಕ್ಷ ವಿ.ನಾರಾಯಣಸ್ವಾಮಿಗೆ ಟಿಕೆಟ್‌ ಘೋಷಿಸಿದೆ.

ಇದನ್ನೂ ಓದಿ: ಸ್ವಂತ ಶಕ್ತಿ ಮೇಲೆ ನಿಶ್ಚಿತವಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ: ಬಿಎಸ್‍ವೈ

ಈ ಹಿಂದೆ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಎಂದೇ ಪರಿಗಣಿಸಲಾದ ಪಿ.ಸಿ.ಮೋಹನ್‌ ಅವರು 2 ಬಾರಿ ಇವರ ಎದುರು ಸ್ಪರ್ಧಿಸಿ ಸೋತಿದ್ದಾರೆ. ಸದ್ಯ ಪಿ.ಸಿ.ಮೋಹನ್‌ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಆಗಿದ್ದಾರೆ. ಕಾಂಗ್ರೆಸ್‌ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಕೊಳೆಗೇರಿ ಮತಗಳು ಹೆಚ್ಚಿನ ಪ್ರಮಾಣದಲ್ಲಿದೆ. ಈ ಮತಗಳನ್ನೇ ಕಾಂಗ್ರೆಸ್‌ ನೆಚ್ಚಿಕೊಂಡಿದೆ. ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆದ್ದಿಲ್ಲ. ಹಿಂದೆ ಜನತಾಪಕ್ಷ 2 ಬಾರಿ, ಎಐಎಡಿಎಂಕೆ ಒಮ್ಮೆ ಈ ಕ್ಷೇತ್ರದಲ್ಲಿ ಗೆದ್ದಿತ್ತು. ಚುನಾವಣೆಯಲ್ಲಿ ಮತದಾರ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ ಅನ್ನೋ ಪ್ರಶ್ನೆಗೆ ಮೇ 13ಕ್ಕೆ ಉತ್ತರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News