ಓಟ್ ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ` ! ಕಾಂಗ್ರೆಸ್ ಗೆ ಬಜರಂಗ ದಳ ಕಾರ್ಯಕರ್ತರ ಎಚ್ಚರಿಕೆ
Karnataka Assembly Election : ಕಾಂಗ್ರೆಸ್ ಗೆ ಬಜರಂಗದಳ ದಳ ಕೂಡಾ ಟಕ್ಕರ್ ನೀಡಿದೆ. ಚಿಕ್ಕಮಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಜರೆದಿದ್ದಾರೆ. ತಮ್ಮ ಮನೆಯ ಗೇಟ್ ನಲ್ಲಿ ಬೋರ್ಡ್ ಹಾಕಿದ್ದಾರೆ.
ಚಿಕ್ಕಮಗಳೂರು : ಇಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮತದಾರರನ್ನು ಸೆಳೆಯುವ ಎಲ್ಲಾ ಪ್ರಯತ್ನವೂ ಈ ಪ್ರಣಾಳಿಕೆಯಲ್ಲಿ ಕಾಣುತ್ತಿದೆ. ಎಲ್ಲಾ ಭರವಸೆಗಳ ಜೊತೆಗೆ ರಾಜ್ಯದಲ್ಲಿ ಬಜರಂಗ ದಳ ನಿಷೇಧಿಸುವ ಬಗ್ಗೆಯೂ ಕಾಂಗ್ರೆಸ್ ಹೇಳಿಕೊಂಡಿದೆ. ಇದು ರಾಜ್ಯದಲ್ಲಿ ಪ್ರಸ್ತುತ ಚರ್ಚೆಯ ವಿಷಯವಾಗಿದೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆಯೇ ಬಜರಂಗ ದಳದ ನಿಷೇದದ ಭರವಸೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಈ ನಿರ್ಧಾರದ ವಿರುದ್ದ ಆಕ್ರೋಶ ವ್ಯಕತಪಡಿಸಿದ್ದಾರೆ. ಇದು ಮುಸ್ಲಿಂ ಓಲೈಕೆಗಾಗಿ ಬಿಡುಗಡೆಯಾಗಿರುವ ಪ್ರಣಾಳಿಕೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ : DK Shivakumar: ಡಿ.ಕೆ ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ.. ಪ್ರಾಣಾಪಾಯದಿಂದ ಅಪಾಯದಿಂದ ಪಾರು!
ಈ ಮಧ್ಯೆ ಕಾಂಗ್ರೆಸ್ ಗೆ ಬಜರಂಗದಳ ದಳ ಕೂಡಾ ಟಕ್ಕರ್ ನೀಡಿದೆ. ಚಿಕ್ಕಮಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಜರೆದಿದ್ದಾರೆ. ತಮ್ಮ ಮನೆಯ ಗೇಟ್ ನಲ್ಲಿ ಬೋರ್ಡ್ ಹಾಕಿದ್ದಾರೆ. ಮತ ಯಾಚಿಸಲು ಕಾಂಗ್ರೆಸ್ ನವರು ಬರುವಂತಿಲ್ಲ ಎಂದು ಬೋರ್ಡ್ ನಲ್ಲಿ ಹೇಳಲಾಗಿದೆ.
ಇದು ಬಜರಂಗದಳವರ ಮನೆ. ಕಾಂಗ್ರೆಸ್ ನವರು ಮತಯಾಚಿಸಲು ಇಲ್ಲಿ ಅವಕಾಶ ಇಲ್ಲ. ಒಂದು ವೇಳೆ ಕಾಂಗ್ರೆಸ್ ನವರು ಮತ ಕೇಳಿಕೊಂಡು ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಘೋಷಣೆ : ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಗುಡ್ಡಟ್ಟಿ ಗ್ರಾಮದ ಮನೆ ಮುಂದೆ ಈ ರೀತಿಯ ಬೋರ್ಡ್ ಹಾಕಲಾಗಿದೆ. ಈ ಮೂಲಕ ಬಜರಂಗದಳ ಕಾರ್ಯಕರ್ತ ಅರುಣ್ ಎಂಬವರ ಮನೆಯ ಮುಂದೆ ಈ ಬೋರ್ಡ್ ಕಾಣಿಸಿಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.