ಹೊಸ ಕಟ್ಟಡ ಕಾಮಗಾರಿ ಕೆಲಸಗಳಿಗೂ ತಟ್ಟಿದ ಎಲೆಕ್ಷನ್​ ಬಿಸಿ

Karnataka Assemly Election: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ.. ಅಭ್ಯರ್ಥಿಗಳು ತಮ್ಮ ತಮ್ಮ ಪರ ರ್‍ಯಾಲಿಗೆ ಸಭೆ ಸಮಾರಂಭದ ಶಕ್ತಿ ಪ್ರದರ್ಶನಕ್ಕೆ ಕೂಲಿ ಕೆಲಸಗಾರರ ಮೊರೆ ಹೋಗಿದ್ದು ಕೂಲಿ ಕಾರ್ಮಿಕರಿಗೆ ಬಂಪರ್ ಆಫರ್ ಸಿಕ್ಕಿದೆ. ಚುನಾವಣೆಯ ಅಭ್ಯರ್ಥಿಗಳ ಪರ ಬೆಳಿಗ್ಗೆ ಪ್ರಚಾರಕ್ಕೆ ಬಂದು ಜೈ ಅಂದ್ರೆ 500 ರೂ.,,, ರ್‍ಯಾಲಿಗೆ  ಬಂದ್ರೆ 1000 ರೂ., ಒಂದು ದಿನ ಪ್ರಚಾರದಲ್ಲಿ ಭಾಗಿಯಾದ್ರೆ 2000 ರೂ,  ಅದರಲ್ಲೂ ಸ್ವಲ್ಪ ಅಂದಚಂದ ಇರೋ ಹೆಣ್ಣು ಮಕ್ಕಳು ಬಂದು ಪೋಸ್ ಕೊಟ್ರೆ ದಿನಕ್ಕೆ 2 ರಿಂದ ಎರಡೂವರೆ ಸಾವಿರ ರೂಪಾಯಿಗಳ ಜೊತೆಗೆ ಊಟ, ಎಣ್ಣೆ... ಹೀಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. 

Written by - Yashaswini V | Last Updated : May 2, 2023, 07:52 AM IST
  • ಹೊಸ ಕಟ್ಟಡ ಕಾಮಗಾರಿ ಕೆಲಸಗಳಿಗೂ ತಟ್ಟಿದ ಎಲೆಕ್ಷನ್​ ಬಿಸಿ
  • ಕಾರ್ಮಿಕರು ಕೆಲಸಕ್ಕೆ ಚಕ್ಕರ್​, ಕ್ಯಾಂಪೇನ್​ಗೆ ಹಾಜರ್
  • ಪ್ರಚಾರಕ್ಕೆ ಬಂದ್ರೆ 500,,,ರ್ಯಾಲಿಗೆ ಬಂದ್ರೆ 1 ಸಾವಿರ
ಹೊಸ ಕಟ್ಟಡ ಕಾಮಗಾರಿ ಕೆಲಸಗಳಿಗೂ ತಟ್ಟಿದ ಎಲೆಕ್ಷನ್​ ಬಿಸಿ title=

Karnataka Assemly Election 2023: ರಾಜ್ಯದಲ್ಲಿ ಎಲೆಕ್ಷನ್ ಪ್ರಚಾರ ರಂಗೇರಿದ್ದು ಬಡ ಕಾರ್ಮಿಕರಿಗೆ ಬಂಪರ್ ಆಫರ್ ಶುರುವಾಗಿದೆ. ಕಟ್ಟಡ ಕೆಲಸ, ಕೂಲಿ ಕೆಲಸಕ್ಕೆ ಕೆಲಸಗಾರರೇ ಸಿಗ್ದೆ ಮೆಸ್ಟ್ರಿಗಳು ಪರದಾಡೋ ಸ್ಥಿತಿ ನಿರ್ಮಾಣ ಗೊಂಡಿದೆ. ಇದರಿಂದಾಗಿ ಹೊಸ ಮನೆ , ಕಟ್ಟಡಗಳನ್ನ ಕಟ್ಟಿಸುತ್ತಿರೋರಿಗೆ ಸಂಕಷ್ಟ ಎದುರಾಗಿದೆ. 

ಹೌದು,  ಕೂಲಿ ಮಾಡಿ ತಮ್ಮ ಜೀವನದ ಬಂಡಿ ನೂಕುತ್ತಿದ್ದ ಕಾರ್ಮಿಕರಿಗೆ, ಚುನಾವಣೆ ಹಣ ಗಳಿಕೆಗೆ ಹೊಸ ಮಾರ್ಗ ತೋರಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ರಾಜಕೀಯ ಪಕ್ಷಗಳ ಪರ ಕ್ಯಾಂಪೇನ್​ಗಳು ಜೋರಾಗಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ತಮ್ಮ ಪ್ರತಿ ನಿತ್ಯದ ಕಾಯಕ ಮರೆತು ಕ್ಯಾಂಪೇನ್​ಗೆ ಹಾಜರಾಗ್ತಿದ್ದಾರೆ. ಅದರಲ್ಲೂ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು ಕೆಲಸಕ್ಕೆ ಬಾರದೇ ಕ್ಯಾಂಪೇನ್​ಗಳತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ.. ಅಭ್ಯರ್ಥಿಗಳು ತಮ್ಮ ತಮ್ಮ ಪರ ರ್‍ಯಾಲಿಗೆ ಸಭೆ ಸಮಾರಂಭದ ಶಕ್ತಿ ಪ್ರದರ್ಶನಕ್ಕೆ ಕೂಲಿ ಕೆಲಸಗಾರರ ಮೊರೆ ಹೋಗಿದ್ದು ಕೂಲಿ ಕಾರ್ಮಿಕರಿಗೆ ಬಂಪರ್ ಆಫರ್ ಸಿಕ್ಕಿದೆ. ಚುನಾವಣೆಯ ಅಭ್ಯರ್ಥಿಗಳ ಪರ ಬೆಳಿಗ್ಗೆ ಪ್ರಚಾರಕ್ಕೆ ಬಂದು ಜೈ ಅಂದ್ರೆ 500 ರೂ.,,, ರ್‍ಯಾಲಿಗೆ  ಬಂದ್ರೆ 1000 ರೂ., ಒಂದು ದಿನ ಪ್ರಚಾರದಲ್ಲಿ ಭಾಗಿಯಾದ್ರೆ 2000 ರೂ,  ಅದರಲ್ಲೂ ಸ್ವಲ್ಪ ಅಂದಚಂದ ಇರೋ ಹೆಣ್ಣು ಮಕ್ಕಳು ಬಂದು ಪೋಸ್ ಕೊಟ್ರೆ ದಿನಕ್ಕೆ 2 ರಿಂದ ಎರಡೂವರೆ ಸಾವಿರ ರೂಪಾಯಿಗಳ ಜೊತೆಗೆ ಊಟ, ಎಣ್ಣೆ... ಹೀಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. 

ಇದನ್ನೂ ಓದಿ- Zee Kannada News Opinion Poll Live: ಡಬಲ್ ಇಂಜಿನ್ ಸರ್ಕಾರ, ಭಾರತ ಜೋಡೋ ಯಾತ್ರೆ , ಮೋದಿ ಅಲೆ; ಮತದಾರ ಪ್ರಭು ಹೇಳುವುದೇನು ?

ಇದರಿಂದಾಗಿ ಬಡ ಕಾರ್ಮಿಕರಿಗೆ ಪ್ರಚಾರ ಹಾಗೂ ಸಮವೇಶಗಳಿಗೆ ಭಾರಿ ಬೇಡಿಕೆ ಎದುರಾಗಿದೆ. ಮೈ ಮುರಿದು ದುಡಿಯಬೇಕಿಲ್ಲ ದಣಿದು ಬೆವರಿಳಿಸಬೇಕಿಲ್ಲ ಆರಾಮವಾಗಿ ವಾಹನಗಳಲ್ಲಿ ಸಂಚಾರ ಮಾಡಿ ಅಭ್ಯರ್ಥಿ ಪರ ಕೈ ಬಿಸಿ ಜೈ ಅಂದ್ರೆ ದುಡ್ಡು, ಊಟಾ ಎಲ್ಲ ಸಿಗುತ್ತೆ. ಹೀಗಾಗಿ ಪ್ರಚಾರ ರ್‍ಯಾಲಿಗಳ ಹಿಂದೆ ಕಾರ್ಮಿಕರು ಬೀದಿದ್ದಾರೆ. ಚುನಾವಣೆ ಮುಗಿಯೋವರೆಗೂ ಕೂಲಿ ಕಾರ್ಮಿಕರು ಸಿಗಲ್ಲ. 

ಇನ್ನು ಕಾರ್ಮಿಕರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರೋದರಿಂದ ಕೂಲಿ ಕೆಲಸ, ಮನೆ ಕೆಲಸ ಗಾರೆ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲವಂತೆ. ಯಾತ್ರೆ ಸಮಾವೇಶ ರ್‍ಯಾಲಿ ಸಭೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಪಕ್ಷದ ಪರ ಜೈಕಾರ ಹಾಕೋದಕ್ಕೆ  ಈ ಕಾರ್ಮಿಕರ ಬಳಕೆಗೆ ಮುಂದಾಗಿದ್ದು ಕೇಳಿದಷ್ಟು ದುಡ್ಡು ಕೊಡ್ತೀದ್ದಾರೆ. ಇದಲ್ಲದೆ, ಇವರಿಗೆಲ್ಲ ಪಿಕ್-ಅಪ್, ಡ್ರಾಪ್, ಊಟ, ತಿಂಡಿ, ಸ್ನ್ಯಾಕ್ಸ್ ಜೊತೆಗೆ ಕ್ವಾಟರು ಕೈಗೆ ದುಡ್ಡು ಕೊಡ್ತೀರೊದ್ರಿಂದ ಕಾರ್ಮಿಕರು ಚುನಾವಣೆಯ ರ್‍ಯಾಲಿಗಳ ಹಿಂದೆ ಬಿದಿದ್ದಾರೆ ಅಂತ ಕಟ್ಟಡ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. 

ಇದನ್ನೂ ಓದಿ- ಕೈ, ಕಮಲ, ದಳದ ಪೈಕಿ ಮೇಲುಗೈ ಸಾಧಿಸುವವರು ಯಾರು..? ಇಲ್ಲಿದೆ ಪ್ರಾಂತ್ಯವಾರು ಮಾಹಿತಿ 

ಒಟ್ನಲ್ಲಿ ರಾಜ್ಯ ಚುನಾವಣೆ ರಂಗೇರಿದ್ದು ಕೂಲಿ ಕಾರ್ಮಿಕರಿಗೆ ಒಂದರ್ಥದಲ್ಲಿ ಬಂಪರ್ ಆಫರ್ ಎಂತಲೇ ಹೇಳಬಹುದು. ಅದೆನೇ ಇರಲಿ ಪ್ರಚಾರ ರ್‍ಯಾಲಿ ಅಂತಾ ಯಾವ ಪಕ್ಷದ ಅಭ್ಯರ್ಥಿಯ ಹಿಂದೆ ಹೋದ್ರು ಪರವಾಗಿಲ್ಲ. ಆದ್ರೆ, ಯಾವುದೇ ದುಡ್ಡು ಎಣ್ಣೆ ಆಸೆಗೆ ಬಿದ್ದು ಮತ ಚಲಾಯಿಸದೇ ಅರ್ಹ ಅಭ್ಯರ್ಥಿಗೆ ಓಟ್ ಹಾಕೋದು ಮಾತ್ರ ಮಿಸ್ ಮಾಡಬೇಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News