Chamarajanagar District assembly election Results- Counting Preparation: ಚುನಾವಣೆ ಮುಗಿದು ಮತ‌ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಬೆಳಗ್ಗೆ 8 ರಿಂದ ಚಾಮರಾಜನಗರ ಹೊರವಲಯದ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ ನಿಂದ ಸಿ‌.ಪುಟ್ಟರಂಗಶೆಟ್ಟಿ ನಡುವೆ ನೇರಾ ಹಣಾಹಣಿ ನಡೆದಿದ್ದು ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಹಾಗೂ ಬಿಜೆಪಿಯ ಎನ್‌.ಮಹೇಶ್, ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಕಾಂಗ್ರೆಸ್ ನ ಗಣೇಶ್ ಪ್ರಸಾದ್ ಬಿಗ್ ಫೈಟ್ ನಡೆಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ನ ಎಂ.ಆರ್.ಮಂಜುನಾಥ್, ಕಾಂಗ್ರೆಸ್ ನ ಆರ್.ನರೇಂದ್ರ ಹಾಗೂ ಬಿಜೆಪಿಯಿಂದ ಡಾ.ಪ್ರೀತನ್ ಕುಮಾರ್ ಕಾದಾಟ ನಡೆಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.


ಎಷ್ಟು ಸುತ್ತಿನ‌ ಮತ ಎಣಿಕೆ..?
ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು  ಬೆಳಗ್ಗೆ 8 ಗಂಟೆಗೆ ಅಂಚೆಮತ ಪತ್ರ ಎಣಿಕೆ ಮೂಲಕ ಕೌಂಟಿಂಗ್ ಆರಂಭವಾಗಲಿದೆ.


ಇದನ್ನೂ ಓದಿ- Chakraborty Sulibele : ಅವಿದ್ಯಾವಂತರು ಹೆಚ್ಚಾಗಿ ಕಾಂಗ್ರೆಸ್‌ ಗೆ ಮತ ಹಾಕಿದ್ದಾರೆ - ಚಕ್ರವರ್ತಿ ಸೂಲಿಬೆಲೆ !


ಪೋಸ್ಟಲ್ ಬ್ಯಾಲೆಟ್ ಎಣಿಕೆ ಕಾರ್ಯವು 2 ಟೇಬಲ್‍ಗಳಲ್ಲಿ ನಡೆಯಲಿದೆ. ಇಟಿಪಿಬಿಎಸ್ ಮತ ಎಣಿಕೆಗೆ 1 ಟೇಬಲ್ ಇರಲಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 18 ಸುತ್ತಿನಲ್ಲಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 14 ಟೇಬಲ್(ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ತಲಾ ಓರ್ವ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆದಾರರು ಹಾಗೂ ಓರ್ವ ಮೈಕ್ರೋ ಅಬ್ಸರ್‍ವರ್ ಇರಲಿದ್ದಾರೆ. 


ಮತ ಎಣಿಕೆ ಸ್ಥಳದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟ್‍ರವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಪ್ರವೇಶಿಸಲು ಈ ಎಲ್ಲರಿಗೂ ಪಾಸ್‍ಗಳನ್ನು ವಿತರಿಸಲಾಗಿದೆ. ಮತ ಎಣೀಕೆ ಕೇಂದ್ರದಲ್ಲಿ ಮತ ಎಣಿಕೆ ಅಧಿಕಾರಿ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟರಿಗೆ ಮತ ಎಣಿಕೆ ಕೇಂದ್ರದಲ್ಲಿ ಹಣ ಪಾವತಿಸಿ ಉಪಹಾರ, ಕಾಫಿ, ಚಹಾ ಪಡೆಯಲು ಖಾಸಗಿ ತಾತ್ಕಾಲಿಕ ಉಪಹಾರ ಗೃಹ ತೆರೆಯಲಾಗಿದೆ. 


ಮತದಾರನ ಗುಟ್ಟು ಶೀಘ್ರ ರಟ್ಟು!
ಮತದಾನವಾಗಿರುವ ಚಾಮರಾಜನಗರದ 04 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಈಗಾಗಲೇ ಬಿಗಿ ಭದ್ರತೆಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. 


ಸಿ.ಆರ್.ಪಿಸಿ 1973ರ ಕಲಂ 144ರ ಪ್ರಕಾರ ಮೇ 12ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಹಲವು ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ನಿಷೇಧಾಜ್ಞೆ ಹೊರಡಿಸಿದ್ದಾರೆ.


ಸಾರ್ವಜನಿಕರ ಶಾಂತಿ, ನೆಮ್ಮದಿ ಕದಡುವ ಕಾನೂನು ಸುವ್ಯವಸ್ಥೆಗೆ ಭಂಗ ಬರಬಾರದೆಂದು ಚಾಮರಾಜನಗರ ಜಿಲ್ಲೆಯಾದ್ಯಂತ ಮೆರವಣಿಗೆ, ಸಭೆ, ಸಮಾರಂಭ, ಪಟಾಕಿ, ಸಿಡಿಸುವುದು, ಗುಂಪುಗೂಡುವುದು ನಿಷೇಧಿಸಿದ್ದಯ ಮತ ಎಣಿಕೆ ಕೇಂದ್ರದ ಸುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಿದೆ.


ಇದನ್ನೂ ಓದಿ- "ಕಪ್ಪು ಹಾಗೂ ಟೋಪಿ ಎಲ್ಲವನ್ನೂ ಅವರೇ ಇಟ್ಟುಕೊಳ್ಳಲಿ"


ಮತದಾನ ಪ್ರಮಾಣ: 
ಚಾಮರಾಜನಗರ ಜಿಲ್ಲೆಯಲ್ಲಿ ಶೇ 81.70 ರಷ್ಟು ಮತದಾನವಾಗಿದೆ, ಜಿಲ್ಲೆಯಲ್ಲಿ ಒಟ್ಟು 8,61,489 ಮತದಾರರಿದ್ದು ಇವರಲ್ಲಿ 4,26,547 ಪುರುಷರು, 4,34,873 ಮಹಿಳೆಯರು, ಇತರರು 69 ಮಂದಿ ಇದ್ದಾರೆ. ಈ ಪೈಕಿ 3,51,642 ಪುರುಷರು, 3,52,179 ಮಹಿಳೆಯರು, 14 ಇತರೆ ಮಂದಿ ಸೇರಿದಂತೆ ಒಟ್ಟು 7,03,835 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 


ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 80.86 ರಷ್ಟು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.75 ರಷ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.95 ರಷ್ಟು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 87.33 ರಷ್ಟು ಮತದಾನವಾಗಿದೆ.


ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೈ ಭದ್ರಕೋಟೆ ಮುಂದುವರೆಯುವುದೋ ಇಲ್ಲವೇ ಕಮಲ ಹೆಚ್ಚು ಅರಳುವುದೋ, ತೆನೆ ಹೊತ್ತ ಮಹಿಳೆಗೆ ಸಿಹಿ ಸಿಗಲಿದೆಯಾ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.