Karnataka Election 2023 : `ದೇಶಕ್ಕೆ ಮೆಟ್ರೋ ಯೋಜನೆ ತಂದವರು ದೇವೆಗೌಡ್ರು, ರಾಜ್ಯಕ್ಕೆ ಮೆಟ್ರೋ ತಂದದ್ದು ನಾನು` : ಹೆಚ್ಡಿಕೆ
Karnataka Election 2023 : ನೆಲಮಂಗಲಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಯಾಚನೆ ಮಾಡಿದರು. ನೆಲಮಂಗಲ ವಿಧಾನಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಬೇಟೆಯಾಡಿದರು. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ನೆಲಮಂಗಲ: ಮುಂಜಾನೆಯಿಂದ ಶಿಗ್ಗಾಂವಿ ಸೇರಿ 7 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ರಸ್ತೆ ಮೂಲಕ ಬಂದಿದ್ದಕ್ಕೆ ತಡವಾಯ್ತು. ಕಳೆದ ನಾಲ್ಕು ದಿನದಿಂದ ನಿರಂತರ ಪ್ರಚಾರ ಮಾಡುತ್ತಿದ್ದೇನೆ. ಯಾವುದೇ ಕಾರ್ಯಕ್ರಮಗಳು ಮಳೆಯಿಂದ ರದ್ದಾಗಿಲ್ಲ. ನವೆಂವರ್ 18 ರಿಂದ ನಾಡಿನಾದ್ಯಂತ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡ್ತಾ ಇದ್ದೇನೆ. ಸುಮಾರು 116 ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಮಾಡಿದ್ದೇನೆ. ನಾಡಿನ ತಂದೆ-ತಾಯಿ ಯುವಕರ ಆಶಿರ್ವಾದ ಪಡೆದಿದ್ದೇನೆ. ಸ್ಪಷ್ಟ ಬಹುಮತದ ಸರ್ಕಾರವನ್ನ ಜೆಡಿಎಸ್‌ಗೆ ನೀಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿವೆ. ಎರಡನೇ ಭಾರಿ ಸಿಎಂ ಆದಾಗ ಹಲವು ಸಮಸ್ಯೆಗಳನ್ನ ಎದುರಿಸಿದ್ದೆ. ರೈತರ ಸಾಲ ಮನ್ನಾ ಮಾಡುವ ಭರವಸೆ ಈ ಹಿಂದೆ ನೀಡಿದ್ದೆ. ಆದ್ರೆ ನಮಗೆ ಬಂದಿದ್ದೆ 32 ಸ್ಥಾನ. ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ ಅಂತಾ ಹೇಳಿದ್ರು ಎಂದರು.
ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ ಬೆಂಗಳೂರು ನಗರ ಜಿಲ್ಲಾಡಳಿತ ಸಿದ್ಧತೆ: ಯಾವ್ಯಾವ ಕ್ಷೇತ್ರದಲ್ಲಿದೆ ಕಂಟ್ರೋಲ್ ರೂಂ!
ಪ್ರತಿ ಕುಟುಂಬಕ್ಕೆ ಸುಸಜ್ಜಿತ ಶಿಕ್ಷಣ, LKG ಯಿಂದ 12 ನೇ ತರಗತಿವರೆಗೂ ಉಚಿತ ಶಿಕ್ಷಣ, ವೃತ್ತಿಪರ ಶಿಕ್ಷಣದ ಸಾಲ ಮನ್ನಾ ಮಾಡುತ್ತೇನೆ. ಯಾವುದೇ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ, ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ 30 ಬೆಡ್ ಆಸ್ಪತ್ರೆ ನಿರ್ಮಾಣ, 24 ಗಂಟೆಗಳ ಕಾಲ ಆರೋಗ್ಯ ಸೇವೆ ನೀಡುತ್ತೇನೆ. ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಸಹಾಯಧನ ಕೊಡುವ ಭರವಸೆ ನೀಡುತ್ತೇನೆ. 1 ಎಕರೆಗೆ 10 ಸಾವಿರ ಸಹಾಯಧನ, ಭೂಮಿ ರಹಿತ ಕೂಲಿ ಕಾರ್ಮಿಕರಿಗೆ ತಿಂಗಳಿಗೆ 2000 ಸಹಾಯಧನ, 65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ವೃದ್ಯಾಪ್ಯ ವೇತನ, ವಿಧವೆಯರಿಗೆ 2000, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸಾಲ ಒಂದು ಭಾರಿ ಮನ್ನಾ ಮಾಡುವೆನು ಎಂದು ಭರವಸೆ ನೀಡಿದರು.
ಸ್ಥಳೀಯರ ಉದ್ಯೋಗಕ್ಕೆ ಒತ್ತು, ಪ್ರತಿ ಕುಟುಂಬಕ್ಕೂ ಉದ್ಯೋಗ, ಸ್ವಾವಲಂಬಿ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವ ಭರವಸೆಕೊಟ್ಟರು. ದೇಶಕ್ಕೆ ಮೆಟ್ರೋ ಯೋಜನೆ ತಂದವರು ದೇವೆಗೌಡ್ರು. ರಾಜ್ಯಕ್ಕೆ ಮೆಟ್ರೋ ತಂದದ್ದು ನಾನು. ನೆಲಮಂಗಲಕ್ಕೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ, ನೆಲಮಂಗಲ ಗೊರಗುಂಟೆಪಾಳು Express way ಇತ್ಯಾದಿ ಭರಸವೆಗಳನ್ನು ಜನರಿಗೆ ನೀಡಿದರು.
ಇದನ್ನೂ ಓದಿ: ಚಿನ್ನದ ನಾಡು ಕೋಲಾರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?
ನಾನು ಏಕಾಂಗಿ ಹೋರಾಟ ಮಾಡ್ತಾ ಇದ್ದೇನೆ. ಜನ ಸಂಕಷ್ಟದಲ್ಲಿದ್ದಾಗ ದೆಹಲಯಿಂದ ಯಾರು ಬಂದಿಲ್ಲ. ನದಿ ನೀರು ಉಪಯೋಗಕ್ಕೆ ಅವಕಾಶ ಕೊಟ್ಟಿಲ್ಲ. ನಾಡಿನ ದಾಸರನ್ನ, ಸಂತರನ್ನ ನೆನೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಜನ ಉತ್ತರ ಭಾರತದಿಂದ ಬರುತ್ತಿದ್ದಾರೆ. ಸಿ ವೋಟರ್ ಸಮೀಕ್ಷೆ ಬಂದಿದೆ. ಮೊನ್ನೆ ಒಂದು ಇವತ್ತು ಒಂದು ಸಮೀಕ್ಷೆ. ನಾವೊಂದು ಹತ್ತು ಕೋಟಿ ಕೊಡ್ತಿವಿ ಅಂದ್ರೆ ನಾಳೆ ನಮ್ಮದು 120 ಆಗುತ್ತೆ. ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ 25 ರಿಂದ 30 ಸ್ಥಾನ ಬರುತ್ತವೆ. ಎರಡು ಬಾರಿ ಹೃದಯ ಚಿಕಿತ್ಸೆ ಆಗಿದ್ರು ತಾಯಂದಿರ ಕಣ್ಣೀರಿಗಾಗಿ ನಾನು ಹೋರಾಟ ಮಾಡ್ತೇನೆ ಎಂದು ಹೇಳಿದರು.
ಮುಸಲ್ಮಾನರು ಜೆಡಿಎಸ್‌ಗೆ ವೋಟ್ ಹಾಕಿದ್ರೆ ಬಿಜೆಪಿ ಬಿ ಟೀಂ ಆಗುತ್ತೆ ಅಂತ ಕಾಂಗ್ರೆಸ್ ಹೇಳುದ್ರು. ಆಗ ರಾಜ್ಯದಲ್ಲಿ ಏನಾಯ್ತು ಅಂತ ನಿಮಗೂ ಗೊತ್ತು. ಜೆಡಿಎಸ್‌ಗೆ ಕೊಡುವ ಮತ ಕನ್ನಡ ನಾಡಿನ ಜನತೆಗೆ ಕೊಡುವ ಮತ. ಜೆಡಿಎಸ್‌ಗೆ ಮತ - ಕನ್ನಡಿಗರಿಗೆ ಹಿತ, ನಾಡಿನ ಬಿ ಟೀಂ ನಮ್ಮ ಜೆಡಿಎಸ್ ಪಕ್ಷ. ಐದು ವರ್ಷದ ಆಡಳಿತ ಮಾಡುವ ಅವಕಾಶ ಕೊಡಿ. ನಾನು ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನ ಮಾಡ್ತೇನೆ. ಇದ್ಯಾವ್ದು ಕಾರ್ಯರೂಪಕ್ಕೆ ಬರ್ಲಿಲ್ಲ ಅಂದ್ರೆ ನಮ್ಮ ಪಕ್ಷ ವಿಸರ್ಜನೆ ಮಾಡ್ತೇನೆ. ಮುಂದೆ ನಾವು ಮತ ಕೇಳೋಕೆ ನಿಮ್ಮ ಮುಂದೆ ವರೋದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ನಿಮ್ಮ ಕೆಲಸವನ್ನು ಸೇವಕನಾಗಿ ಮಾಡುತ್ತೇನೆ : ಸಿಎಂ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.