ಬೆಂಗಳೂರು: ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಡಿಸೈನ್‌ಬಾಕ್ಸ್ಡ್(DesignBoxed)ನ ಸಂಸ್ಥಾಪಕ ನರೇಶ್ ಅರೋರಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಾನು ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿದ್ದೇನೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿಗಿಂತ ಅತಿಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಕನಕಪುರದ ಜನರು ಡಿ.ಕೆ.ಶಿವಕುಮಾರ್ ಅವರನ್ನು ತುಂಬಾ ಪ್ರೀತಿಸುತ್ತಾರೆ’ ಅಂತಾ ಹೇಳಿದ್ದಾರೆ.  


ಇದನ್ನೂ ಓದಿ: ನಿಖಿಲ್ ಕುಮಾಸ್ವಾಮಿ ನಾಮಪತ್ರ : ದೇವೇಗೌಡರರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು


ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಡಿ.ಕೆ.ಶಿವಕುಮಾರ್​ ವಿರುದ್ಧ ಬಿಜೆಪಿ ಹೈಕಮಾಂಡ್​ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಕನಕಪುರ ಬಂಡೆಯನ್ನು ಪುಡಿ ಪುಡಿ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಪದ್ಮನಾಭನಗರ ಮತ್ತು ಕನಕಪುರ ಎರಡೂ ಕ್ಷೇತ್ರಗಳಲ್ಲಿ ಆರ್.ಅಶೋಕ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಕನಕಪುರವು ಇದೀಗ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಾಡಾಗಿದೆ.


ಹೇಗಾದರೂ ಮಾಡಿ ಡಿಕೆಶಿ ಸೋಲಿಸಲೇಬೇಕು ಅಂತಾ ಬಿಜೆಪಿ ರಣತಂತ್ರ ರೂಪಿಸಿದೆ. ಅದರಂತೆ ಆರ್.ಅಶೋಕ್ ಅವರನ್ನು ಡಿಕೆಶಿ ವಿರುದ್ಧ ಕಣಕ್ಕಿಳಿಸಿದೆ. ಆದರೆ ಕನಕಪುರದ ಜನರು ಡಿಕೆಶಿ ಪರ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಕ್ಷೇತ್ರದ ಜನರು ಯಾರಿಗೆ ವಿಜಯ ಮಾಲೆ ಹಾಕ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಅನೇಕರು ಕನಕಪುರದಲ್ಲಿ ನೂರಕ್ಕೆ ನೂರು ಡಿಕೆಶಿಯವರೇ ಗೆಲ್ಲುವುದು ಅಂತಾ ಭವಿಷ್ಯ ನುಡಿದಿದ್ದಾರೆ.


ನಿಗೂಢ ಎಲೆಕ್ಷನ್ ಸ್ಟಾಟರ್ಜಿ : ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್


ಕನಕಪುರ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಡಿಕೆಶಿಯವರ ಗೆಲುವಿನ ಓಟಕ್ಕೆ ಆರ್.ಅಶೋಕ್ ಬ್ರೇಕ್ ಹಾಕ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ಬಿಜೆಪಿ ಎಷ್ಟೇ ಮಾಸ್ಟರ್ ಪ್ಲಾನ್ ಮಾಡಿದ್ರೂ ಕನಕಪುರದಲ್ಲಿ ನಾನೇ ಗೆಲ್ಲುವುದು ಅಂತಾ ಡಿಕೆಶಿ ಆತ್ಮವಿಶ್ವಾಸ ಹೊಂದಿದ್ದಾರೆ. ಅಂತಿಮವಾಗಿ ಮತದಾರ ಯಾರ ಪರ ತೀರ್ಪು ನೀಡುತ್ತಾನೆ ಅನ್ನೋದನ್ನು ತಿಳಿಯಲು ಫಲಿತಾಂಶ ಬರುವವರೆಗೂ ಕಾಯಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.