ನಿಗೂಢ ಎಲೆಕ್ಷನ್ ಸ್ಟಾಟರ್ಜಿ : ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್

ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಮಂಗಳವಾರ ನಾಮಿನೇಷನ್ ಸಲ್ಲಿಸಲಿದ್ದಾರೆ. ವಿಚಿತ್ರ ಎನಪ್ಪಾ ಅಂದ್ರೆ, ಅವರ ಮಗ ನವನೀತ್ ಗೌಡ ಇಂದು ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಪ್ರತಿಸ್ಪರ್ಧಿಗೆ ಗೊಂದಲ ಉಂಟುಮಾಡಿದ್ದಾರೆ.

Written by - Zee Kannada News Desk | Edited by - Krishna N K | Last Updated : Apr 17, 2023, 02:05 PM IST
  • ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನಿಗೂಢ ಎಲೆಕ್ಷನ್ ಸ್ಟ್ರಾಟಜಿ.
  • ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್.
  • ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅವರ ಮಗ ನಾಮಪತ್ರ ಸಲ್ಲಿಕೆ.
ನಿಗೂಢ ಎಲೆಕ್ಷನ್ ಸ್ಟಾಟರ್ಜಿ : ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್ title=

ಚಾಮರಾಜನಗರ : ರಾಜಕೀಯ ಎಂದರೇ ಹಾಗೇ ನಿಗೂಢ, ಒಮ್ಮೆಗೆ ಅರ್ಥವಾಗದ, ಹತ್ತಾರು ಪ್ಲಾನ್ ಗಳಿರುವ ಅಖಾಡ ಎಂಬುದಕ್ಕೆ ಇದೇ ನೋಡಿ ನಿದರ್ಶನ. ಅಪ್ಪ ಮೂರು ಬಾರಿ ಎಂಎಲ್ಎ ಆಗಿ ನಾಲ್ಕನೇ ಬಾರಿ ಕಣಕ್ಕಿಳಿಯುತ್ತಿದ್ದರೇ ಮಗ ಪಕ್ಷೇತರನಾಗಿ ನಾಮಿನೇಷನ್ ಸಲ್ಲಿಸಿದ್ದಾರೆ.

ಹೌದು... ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಮಂಗಳವಾರ ನಾಮಿನೇಷನ್ ಸಲ್ಲಿಸಲಿದ್ದಾರೆ. ಆದರೆ, ಅವರ ಮಗ ನವನೀತ್ ಗೌಡ ಇಂದು ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಎದುರಾಳಿಗಳ ತಲೆಗೆ ಹುಳು ಬಿಟ್ಟಿದ್ದಾರೆ.

ಇದನ್ನೂ ಓದಿ: ನಿಖಿಲ್ ಕುಮಾಸ್ವಾಮಿ ನಾಮಪತ್ರ : ದೇವೇಗೌಡರರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು

ಈಗಾಗಲೇ ನರೇಂದ್ರ ಪರ ಮಗ ನವನೀತ್ ಬೆಟ್ಟಗುಡ್ಡ ಹತ್ತಿಳಿದು ಪ್ರಚಾರ ನಡೆಸಿದ್ದು, ತಮ್ಮ ಕುಟುಂಬದ ಮತ ಬ್ಯಾಂಕ್ ಬೇರೆಯವರ ಪಾಲಾಗದಂತೆ ಎಚ್ಚರ ವಹಿಸಿದ್ದಾರೆ. ಆದರೆ, ಈ ನಡುವೆ ನವನೀತ್ ಗೌಡ ಪಕ್ಷೇತರನಾಗಿ ನಾಮಿನೇಷನ್ ಕೂಡ ಫೈಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಗನಿಗೆ ನಾಮಿನೇಷನ್ ಫೈಲ್ ಮಾಡಿಸುವ ಮೂಲಕ ಎಲೆಕ್ಷನ್ ಪಾಠವನ್ನು ಎಂಎಲ್ಎ ನರೇಂದ್ರ ಧಾರೆ ಎರೆಯುವುದು ಆಗಿದೆ. ಇಲ್ಲವೇ, ಬೇರೆ ಏನೂ ರಣನೀತಿ ಇದೆಯೋ ಸದ್ಯಕ್ಕಂತೂ ತಿಳಿಯದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News