ನಾನು ಚುನಾವಣಾ ರಾಜಕಾರಣದಿಂದಷ್ಟೇ ನಿವೃತ್ತನಾಗಿದ್ದೇನೆ, ಪಕ್ಷ ಸಂಘಟನೆಯಿಂದಲ್ಲ- ಕೆ. ಎಸ್. ಈಶ್ವರಪ್ಪ
Karnataka Assembly Election 2023: ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ ನನಗೆ ದೂರವಾಣಿ ಕರೆ ಮಾಡುತ್ತಾರೆಂದು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಅವರ ಕರೆ ನನಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಶಿವಮೊಗ್ಗ ನಗರವನ್ನ ಅಲ್ಲದೆ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ.
Karnataka Assembly Election: ನಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದ್ದೇನೆ ಹೊರತು ಪಕ್ಷ ಮತ್ತು ಸಂಘಟನೆಯನ್ನು ಮುಂದುವರೆಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ ನನಗೆ ದೂರವಾಣಿ ಕರೆ ಮಾಡುತ್ತಾರೆಂದು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ .ಅವರ ಕರೆ ನನಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಶಿವಮೊಗ್ಗ ನಗರವನ್ನ ಅಲ್ಲದೆ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ.
ಇದನ್ನೂ ಓದಿ- ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ
ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ನಂತರ ಅನೇಕ ಹಿರಿಯ ಮುಖಂಡರು, ಪರಿವಾರದವರು ಮನೆಗೆ ಬಂದು ನೀವು ತೆಗೆದುಕೊಂಡ ನಿರ್ಧಾರ ಒಳ್ಳೆಯದು ಎಂದು ಶುಭ ಹಾರೈಸಿದ್ದಾರೆ. ನೀವು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಆದರೆ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ರಾಜಿನಾಮೆ ಕೊಟ್ಡು ಕಾಂಗ್ರೆಸ್ ಗೆ ಹೋಗಿದ್ದು ನನಗೆ ನೋವನ್ನುಂಟು ಮಾಡಿದೆ. ಅದಕ್ಕಾಗಿ ಅವರಿಗೆ ಒಂದು ಖಾಸಗಿ ಪತ್ರವನ್ನು ಕೂಡ ನಾನು ಬರೆದೆ. ಅದರಲ್ಲಿ ಮೂರು ಅಂಶಗಳನ್ನು ನಾನು ಅವರಿಗೆ ಉಲ್ಲೇಖಿಸಿದ್ದೇನೆ. ಆ ಮೂರು ಅಂಶಗಳಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಇದನ್ನೂ ಓದಿ- ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್
ನಾನು ಚುನಾವಣಾ ರಾಜಕೀಯ ನಿವೃತ್ತಿ ಪಡೆದಿದ್ದೇನೆ ಹೊರತು ಪಕ್ಷದ ಸಂಘಟನೆಯಿಂದಲ್ಲ. ಇಡೀ ಜೀವನಪರ್ಯಂತ ಪಕ್ಷದ ಮತ್ತು ಸಂಘಟನೆಯ ರಾಜಕಾರಣವನ್ನು ಮುಂದುವರಿಸುತ್ತೇನೆ. ಸಂಘಟನೆಯಿಂದ ಯಾವುದೇ ಕಾರಣಕ್ಕೂ ನಿವೃತ್ತಿ ಪಡೆಯುವುದಿಲ್ಲ ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.