ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ರಿಲೀಸ್‌- ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ

Karnataka assembly Election: ಪಕ್ಷದ ಘಟಾನುಘಟಿ ಲಿಂಗಾಯತ ನಾಯಕರಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ದಶಕಗಳಿಂದ ಬಿಜೆಪಿಯಲ್ಲಿ ನಿರತರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ನಾಯಕರು ಬಿಜೆಪಿ ತೊರೆದಿದ್ದಾರೆ. ಇದರೊಂದಿಗೆ ವಿರೋಧ ಪಕ್ಷಗಳು ಬಿಜೆಪಿ ಲಿಂಗಾಯತ ವಿರೋಧಿ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿವೆ.

Written by - Yashaswini V | Last Updated : Apr 20, 2023, 11:33 AM IST
  • ಬಿಜೆಪಿಗೆ ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟಲು ʻಕೈʼ ಪ್ಲಾನ್‌
  • ಜಾತಿವಾರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
  • ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ
ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ರಿಲೀಸ್‌- ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ title=

Karnataka assembly Election 2023: ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ ಜಾತಿವಾರು ಲೆಕ್ಕಾಚಾರದ ಪಟ್ಟಿ ಬಿಡುಗಡೆಗೊಳಿಸಿದೆ.   

ಪಕ್ಷದ ಘಟಾನುಘಟಿ ಲಿಂಗಾಯತ ನಾಯಕರಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ದಶಕಗಳಿಂದ ಬಿಜೆಪಿಯಲ್ಲಿ ನಿರತರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ನಾಯಕರು ಬಿಜೆಪಿ ತೊರೆದಿದ್ದಾರೆ. ಇದರೊಂದಿಗೆ ವಿರೋಧ ಪಕ್ಷಗಳು ಬಿಜೆಪಿ ಲಿಂಗಾಯತ ವಿರೋಧಿ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿವೆ. ಇದೆಲ್ಲದಕ್ಕೂ ಉತ್ತರ ಎಂಬಂತೆ ಇದೀಗ ಬಿಜೆಪಿ ಜಾತಿವಾರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪಕ್ಷದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 

ಇದನ್ನೂ ಓದಿ- ಚಾಮರಾಜನಗರದ ಊರೂರಿಗೆ ಸೋಮಣ್ಣ ಭೇಟಿ: ಮುಂದಿನ ಸಿಎಂ ಎಂದು ಅಭಿಮಾನಿಗಳ ಜೈಕಾರ

ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ:
ಲಿಂಗಾಯತ - 67.
ಒಕ್ಕಲಿಗ - 42.
ಎಸ್‌ಸಿ - 38.
ಎಸ್‌ಟಿ - 17.
ಬ್ರಾಹ್ಮಣ - 13.
ಈಡಿಗ, ಬಿಲ್ಲವ - 8.
ಕುರುಬ - 7.
ರೆಡ್ಡಿ‌ - 7.
ಬಂಟ - 6.
ಮರಾಠ - 3.
ಗಾಣಿಗ - 2.
ನಾಯ್ಡು - 2.
ರಜಪೂತ್ - 2.
ಯಾದವ - 2.
ಬಲಿಜ -1.
ಜೈನ - 1.
ಕೊಡವ - 1.
ಕೋಲಿ ಕಬ್ಬಲಿಗ - 1.
ಕೋಮಾರಪಂಥ್ - 1.
ಮೊಗವೀರ - 1.
ತಿಗಳ - 1.
 
ಡ್ಯಾಮೇಜ್ ಕಂಟ್ರೋಲ್‌ಗೆ ಕೇಸರಿ ಕಲಿಗಳ ಭರ್ಜರಿ‌ ಪ್ಲಾನ್:
ಇದಲ್ಲದೆ, ತಡರಾತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ  ಲಿಂಗಾಯತ ನಾಯಕರ ಸಭೆಯಲ್ಲಿ  ಬಿಜೆಪಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ತಪ್ಪಿಸಿಕೊಳ್ಳಲು ಲಿಂಗಾಯತ ಸಿಎಂ ಘೋಷಣೆ ಮಾಡುವಂತೆಒಕ್ಕೊರಲ ಅಭಿಪ್ರಾಯಕ್ಕೆ ಬರಲಾಗಿದೆ. ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ ಮುಂದಿನ ಸಿಎಂ ಲಿಂಗಾಯತ ಎಂದು ಘೋಷಿಸುವಂತೆ ಪಟ್ಟು ಹಿಡಿದಿದ್ದಾರೆ.  

ಇದನ್ನೂ ಓದಿ- Karnataka Election : 200 ಕೋಟಿಗೂ ಮೀರಿದ ಚುನಾವಣಾ ಅಕ್ರಮ ವಸ್ತುಗಳ ವಶ
 
ಈ ಕುರಿತಂತೆ ಸಿಂಗಲ್ ಲೈನ್ ಡಿಸಿಷನ್ ತೆಗೆದುಕೊಂಡಿರುವ ವೀರಶೈವ ಲಿಂಗಾಯತ ಮುಖಂಡರು ಜಗದೀಶ್ ಶೆಟ್ಟರ್, ‌ಲಕ್ಷ್ಮಣ್ ಸವದಿ ಪಕ್ಷದಿಂದ ದೂರ ಸರಿದ‌ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ ಮಾಡಲು ಮತ್ತು ಲಿಂಗಾಯತ ಮತಗಳ ವಿಭಜನೆಯನ್ನು ತಡೆಯಲು ಇದೊಂದು ಉತ್ತಮ ಸಲಹೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News