ಹುಬ್ಬಳ್ಳಿ : ಬೆಳಿಗ್ಗೆ ಎಲ್ಲ ಕಾರ್ಯಕರ್ತರ ಸಭೆ ಕರೆದಿದ್ದೆ, ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ, ಧರ್ಮೇಂದ್ರ ಪ್ರಧಾನ್ ಅವರು ಬರಲಿದ್ದಾರೆ ಎಂದು ಹೇಳಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ತಿಳಿಸಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾತನಾಡಿದ ಅವರು, ನಮ್ಮ ಜೊತೆ ಸಮಾಲೋಚನೆ ಮಾಡಲು ಧರ್ಮೆಂದ್ರ ಪ್ರಧಾನ್‌ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿಎಂ, ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಹ್ಲಾದ್ ಜೋಶಿ ನಮ್ಮ ಮನೆಗೆ ಬರಲಿದ್ದಾರೆ. ಮೂವರೂ ಸೇರಿ ನಮ್ಮ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸಮಾಲೋಚನೆ ನಂತರ ಮುಂದಿನ ನಿರ್ಧಾರವನ್ನು ಪ್ರಕಟ ಮಾಡಲಿದ್ದೇವೆ. ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಇದೆ. ಅದ್ರೆ, ಕುಟುಂಬದಲ್ಲಿ ಯಾರಿಗೂ ಟಿಕೆಟ್ ನೀಡುವ ಪ್ರಮೇಯವೇ ಇಲ್ಲ ಸ್ಪರ್ಧೆ ಮಾಡುವುದಿದ್ದರೆ ನಾನೇ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದರು.


ಇದನ್ನೂ ಓದಿ: ಟಿಕೆಟ್ ನೀಡದಿರುವ ಬೆನ್ನಲ್ಲೇ ಫೈಟರ್ ರವಿ ಬಿಜೆಪಿಗೆ ರಾಜೀನಾಮೆ


ಮುಂದಿನ ನಿರ್ಧಾರದ ತಯಾರಿ ಮಾಡಿಕೊಂಡಿದ್ದೇನೆ. ಮೂವರೂ ನಾಯಕರು ಮನೆಗೆ ಬಂದು ಏನು ಮಾತನಾಡುತ್ತಾರೆ ಕಾಯ್ದು ನೋಡುತ್ತೇನೆ. ಅವರು ಬಂದು ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಬಗ್ಗೆ ತಿಳಿಸುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಸ್ಪೀಕರ್ ಕಾಗೇರಿ ಅವರ ಬಳಿ ಭೇಟಿಯಾಗಲು ಸಮಯ ಕೇಳಿದ್ದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಹೋಗಲು ಆಗಿಲ್ಲ. ಇವತ್ತಿನ ಚರ್ಚೆಯಿಂದ ಇದು ಅಂತಿಮವಾಗುತ್ತೆ. ನಾಮಪತ್ರ ಸಲ್ಲಿಸಲು ಇನ್ನೂ 20 ರವರೆಗೂ ಟೈಂ ಇದೆ. ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಶೆಟ್ಟರ್ ಖಡಕ್‌ ಸಂದೇಶ ನೀಡಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.