ಕಲಬುರಗಿ: ಶರಣರ ನಾಡು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿವೆ. ಕಲಬುರಗಿಯನ್ನು ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ ಎಂದು 3 ವಿಧಾನಸಭಾ ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ. ಚಿತ್ತಾಪುರ, ಸೇಡಂ, ಚಿಂಚೋಳಿ, ಆಳಂದ, ಅಫ್ಜಲಪುರ, ಜೇವರ್ಗಿ ಇನ್ನುಳಿದ ಕ್ಷೇತ್ರಗಳಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು ಸಿಟಿ ರವಿಗೆ ಹೀನಾಯ ಸೋಲು!


ಕಲಬುರಗಿ ಫಲಿತಾಂಶದ ವಿವರ:


ಕಲಬುರಗಿ ಉತ್ತರ - ಕಾಂಗ್ರೆಸ್ - ಕನೀಝ್ ಫಾತೀಮಾ


ಕಲಬುರಗಿ ದಕ್ಷಿಣ – ಕಾಂಗ್ರೆಸ್- ಚಂದ್ರಕಾಂತ್ ಬಿ.ಪಾಟೀಲ್


ಕಲಬುರಗಿ ಗ್ರಾಮಾಂತರ – ಬಿಜೆಪಿ - ಬಸವರಾಜ್ ಮಟ್ಟಿಮಡು


ಚಿತ್ತಾಪುರ – ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ


ಜೇವರ್ಗಿ – ಕಾಂಗ್ರೆಸ್ - ಅಜಯ್ ಧರಮ್ ಸಿಂಗ್


ಸೇಡಂ – ಕಾಂಗ್ರೆಸ್ - ಡಾ.ಶರಣಪ್ರಕಾಶ್ ಪಾಟೀಲ್


ಚಿಂಚೋಳಿ – ಬಿಜೆಪಿ - ಅವಿನಾಶ್ ಉಮೇಶ್ ಜಾಧವ್


ಆಳಂದ – ಕಾಂಗ್ರೆಸ್ - ಭೋಜರಾಜ


ಅಫ್ಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್


ಮೇ 10ರ ಬುಧವಾರ ನಡೆದ ಮತದಾನದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಶೇ.66ರಷ್ಟು ಮತದಾನವಾಗಿತ್ತು. 9 ಕ್ಷೇತ್ರಗಳ ಪೈಕಿ ಸೇಡಂನಲ್ಲಿಯೇ ಅತಿಹೆಚ್ಚು ಅಂದರೆ ಶೇ.77.03ರಷ್ಟು ಮತದಾನವಾಗಿತ್ತು.


ಕಳೆದ ಚುನಾವಣೆಯಲ್ಲಿ ಕಲಬುರಗಿಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 4 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ 7ರಲ್ಲಿ ಜಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ.


ಇದನ್ನೂ ಓದಿ: Yadgir Assembly Election Result 2023: ಯಾದಗಿರಿ ಜಿಲ್ಲೆಯಲ್ಲಿ ‘ಕೈ’ಚಳಕಕ್ಕೆ ಬಿಜೆಪಿ ಕಂಗಾಲು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.