Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು.. ಸಿಟಿ ರವಿಗೆ ಹೀನಾಯ ಸೋಲು!

Chikmagalur Assembly Constituency: ಚಿಕ್ಕಮಗಳೂರು ವಿಧಾನ ಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಠಿಯಾಗಿದೆ. ಕಾರಣ ಕಾಫಿನಾಡಿನಲ್ಲಿ ಪ್ರತಿ ಚುನಾವಣೆಯಲ್ಲಿ ಸಿಟಿ ರವಿ ಗೆಲುವು ಸಾಧಿಸುತ್ತಿದ್ದರು ಇವರ ವಿರುದ್ದ ಸ್ಪರ್ದಿಸಿದ್ದ ಎಚ್ ಡಿ ತಮ್ಮಯ್ಯ ಗೆಲುವು ಪಡೆದುಕೊಂಡಿದ್ದಾರೆ.  

Written by - Zee Kannada News Desk | Last Updated : May 13, 2023, 07:52 PM IST
  • ಚಿಕ್ಕಮಗಳೂರು ವಿಧಾನ ಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಠಿಯಾಗಿದೆ
  • ಸಿಟಿ ರವಿ ವಿರುದ್ದ ಕಾಂಗ್ರೆಸ್‌ ಅಭ್ಯರ್ಥಿ ತಮ್ಮಯ್ಯಗೆ ಗೆಲುವು
  • ಕಾಫಿನಾಡಿನಲ್ಲಿ ತಮ್ಮಯ್ಯನಿಗೆ ಜಯ
Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು.. ಸಿಟಿ ರವಿಗೆ ಹೀನಾಯ ಸೋಲು!   title=

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಠಿಯಾಗಿದೆ. ಕಾರಣ ಈ ಭಾಗದಲ್ಲಿ ಪ್ರತಿ ಚುನಾವಣೆಯಲ್ಲಿ ಸಿಟಿ ರವಿ ಗೆಲುವು ಸಾಧಿಸುತ್ತಿದ್ದರು ಮೊದಲ ಬಾರಿಗೆ ಬಿಜೆಪಿ ನಾಯಕನ ವಿರುದ್ಧ ಮಲೆನಾಡಿನಲ್ಲಿ ಸೋಲು ದೊರಕಿದೆ.

ಇದನ್ನೂ ಓದಿ: Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು

ಇವರ ವಿರುದ್ದ ಸ್ಪರ್ದಿಸಿದ್ದ  ಎಚ್ ಡಿ ತಮ್ಮಯ್ಯ ಗೆಲುವು ಪಡೆದುಕೊಂಡಿದ್ದಾರೆ. ಹಿಂದುತ್ವವನ್ನು ಎತ್ತಿ ಹಿಡಿಯುತ್ತಿದ್ದ ಹಿಂದೂ ವಾದಿ ಸಿಟಿ ಚುನಾವಣೆ ಫಲಿತಾಂಶ ನಿರಾಸೆ ಉಂಟು ಮಾಡಿದೆ. ಇತ್ತಿಚೀನ ದಿನಗಳಲ್ಲಿ ಅನೇಕ ವಿಷಯಗಳನ್ನು ಎಳೆದುಕೊಂಡಿದ್ದರು. ಹೆಚ್ಚಾಗಿ ಕೋಮುವಾದ ವಿಷಯಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು. 

ಹೀಗಿರುವಾಗ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ತಮ್ಮಯ್ಯ 6803 ಮತ ಗಳಿಸಿ ಜಯ ಸಾಧಿಸಿದ್ದಾರೆ. ಎಲ್ಲರ ಮನದಲ್ಲಿ ಸಿಟಿ ರವಿ ವಿರುದ್ದ ಸ್ಪರ್ದಿಸಲು ಯಾರಿಗೂ ಸಾಧ್ಯವಾಗುವುದಿಲ್ಲ, ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ಅವರಿಗೆ ಮೀಸಲು, ಬಿಜೆಪಿ ಅಭ್ಯರ್ಥಿಗೆ ಗೆಲುವು ಕಟ್ಟು ಇಟ್ಟ ಬುತ್ತಿ ಎಂಬ ನಂಬಿಕೆ ಈಗ ನಿರಾಸೆ ಉಂಟು ಮಾಡಿತ್ತು

ಇದನ್ನೂ ಓದಿ: Hubli-Dharwad Assembly Election Result 2023: ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಗೆಲುವು

ಈ ಭಾಗದಲ್ಲಿ ಯಾರೇ ನಿಂತರೂ ಗೆಲುವು ಮಾತ್ರ ಸಿ ಟಿ ರವಿಗೆ ಎಂಬ ಮಾತೊಂದು ಎಲ್ಲರ ಮನದಲ್ಲಿ ಬೇರೂರಿತ್ತು. ಕಾರಣ ಪ್ರತಿ ಚುನಾವಣೆಯಲ್ಲೂ ಗೆಲುವು ಅವರ ಪಾಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಫಲಿತಾಂಶ ನೀರಿಕ್ಷೆ ಭ್ರಮೆ ಲೋಕದಲ್ಲಿ ಇದ್ದ ಕೆಲವರಲ್ಲಿ ಅಚ್ಚರಿ ಮೂಡಿಸಿದರೇ,  ಇನ್ನು ಕೆಲವರಲ್ಲಿ ಸಿಟಿ ರವಿಯನ್ನು ಸೋಲಿಸುವವರು ಇದ್ದಾರೆಂದು ಸಂತಹ ವ್ಯಕ್ತ ಪಡಿಸುತ್ತಿದ್ದಾರೆ.  ಸದ್ಯ ಕಾಂಗ್ರೆಸ್‌ ಅಭ್ಯರ್ಥಿ ತಮ್ಮಯ್ಯ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದರೇ ಇತ್ತ ಸಿಟಿ ರವಿ ಅಭಿಮಾನಿಗಳ ಫೋನ್‌ ಗಳನ್ನು ಸ್ವೀಚ್ ಆಫ್‌ ಮಾಡಿ ಮನೆ ಸೇರಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News