ರಾಯಚೂರು: ಒಂದೇ ಕ್ಷೇತ್ರಕ್ಕೆ ಗಂಡ-ಹೆಂಡತಿ ನಾಮಪತ್ರ ಸಲ್ಲಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ‌ಕ್ಷೇತ್ರಕ್ಕೆ ಸತಿ-ಪತಿ ಅಭ್ಯರ್ಥಿಗಳಾಗಿದ್ದಾರೆ. ಸಿಂಧನೂರು ‌ವಿಧಾನಸಭಾ ಕ್ಷೇತ್ರಕ್ಕೆ KRP ಪಕ್ಷದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನೆಕ್ಕಂಟಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಎನ್.ರಮ್ಯಾ ನಾಮಪತ್ರ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಲ್ಲಿಕಾರ್ಜುನ ನೆಕ್ಕಂಟಿಯವರು ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿದ KRP ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಜೋಡಿಯಾಗಿ ಬಂದಿದ್ದರು. ಮೊದಲು ಪತಿ ಮಲ್ಲಿಕಾರ್ಜುನ ನೆಕ್ಕಂಟಿ ನಾಮಪತ್ರ ಸಲ್ಲಿಸಿದರೆ, ಬಳಿಕ ಪತ್ನಿ ಎನ್.ರಮ್ಯಾ ನಾಮಪತ್ರ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಬಿ.ಎಲ್.ಸಂತೋಷ್ ಕಪಿಮುಷ್ಟಿಯಲ್ಲಿ ಬಿಜೆಪಿ; ಈಶ್ವರಪ್ಪಗೆ ಬಾಯಿ ಸರಿಯಿಲ್ಲ: ಸಿದ್ದರಾಮಯ್ಯ


ಸಿಂಧನೂರು ತಹಶೀಲ್ದಾರರ ‌ಕಚೇರಿಯಲ್ಲಿ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬಂದ ಜೋಡಿಗೆ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ‌ ಜೋಡಿ ಅಭ್ಯರ್ಥಿಗಳಿಗೆ ಹೂಮಳೆ ಸಹ ಸುರಿಸಲಾಗಿದೆ.


ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ!


ಮಾಜಿ ಶಾಸಕ ನೇಮಿರಾಜ್ ನಾಯ್ಕ್‍ಗೆ ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ನೇಮಿರಾಜ್ ನಾಯ್ಕ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಬೆಳಗಿನ ಜಾವ 4 ಗಂಟೆಯವರೆಗೆ ಕಾರ್ಯಕರ್ತರ ಜೊತೆ ನೇಮಿರಾಜ್ ಸಮಾಲೋಚನೆ ನಡೆಸಿದ್ದಾರೆ.  


ಇದನ್ನೂ ಓದಿ: ಹ್ಯಾಟ್ರಿಕ್ ಶಾಸಕ ನರೇಂದ್ರ 17 ಕೋಟಿ ಒಡೆಯ: ಮಗನಿಗಿದೆ 1.7 ಲಕ್ಷ ಸಾಲ


ಹಗರಿಬೊಮ್ಮನ ಹಳ್ಳಿಯ ಬಿಜೆಪಿ ಟಿಕೆಟ್‍ಗೆ ನೇಮಿರಾಜ್ ನಾಯ್ಕ್ ಪ್ರಬಲ ಪೈಪೋಟಿ ನಡೆಸಿದ್ದರು. ಹಗರಿಬೊಮ್ಮನ ಹಳ್ಳಿ ಕ್ಷೇತ್ರಕ್ಕೆ ಬಿಜೆಪಿ ಬಲ್ಲಾಹುಣ್ಸಿ ರಾಮಣ್ಣಗೆ ಟಿಕೆಟ್ ಘೋಷಣೆ ಮಾಡಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಅಂತಾ ಕಾರ್ಯಕರ್ತರು ನೇಮಿರಾಜ್‍ಗೆ ಒತ್ತಾಯಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.