ಹ್ಯಾಟ್ರಿಕ್ ಶಾಸಕ ನರೇಂದ್ರ 17 ಕೋಟಿ ಒಡೆಯ: ಮಗನಿಗಿದೆ 1.7 ಲಕ್ಷ ಸಾಲ

Karnataka Assembly Election: ಇಂದು ಹನೂರು ವಿಧನಾಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ ಹ್ಯಾಟ್ರಿಕ್ ಶಾಸಕ ನರೇಂದ್ರ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. 

Written by - Yashaswini V | Last Updated : Apr 18, 2023, 02:49 PM IST
  • ಹನೂರು ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ, ಹಾಲಿ ಶಾಸಕ ನರೇಂದ್ರ ನಾಮಪತ್ರ ಸಲ್ಲಿಕೆ
  • ಹನೂರಿನ ದೇಗುಲಗಳಿಗೆ ಭೇಟಿ ಕೊಟ್ಟು,ಬೃಹತ್‌ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ನರೇಂದ್ರ
  • ನಿನ್ನೆಯಷ್ಟೇ ಪಕ್ಷೇತರನಾಗಿ ನಾಮಿನೇಷನ್ ಸಲ್ಲಿಸಿ ಇಂದು ಅಪ್ಪನೊಟ್ಟಿಗೆ ಹೆಜ್ಜೆ ಹಾಕಿದ ಪುತ್ರ ನವನೀತ್ ಗೌಡ
ಹ್ಯಾಟ್ರಿಕ್ ಶಾಸಕ ನರೇಂದ್ರ 17 ಕೋಟಿ ಒಡೆಯ: ಮಗನಿಗಿದೆ 1.7 ಲಕ್ಷ ಸಾಲ title=

Karnataka Assembly Election 2023: ಹನೂರು ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಿನೇಷನ್ ನಲ್ಲಿ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದು  ಸ್ವಯಾರ್ಜಿತವಾಗಿ 13,46,49,000 ಕೋಟಿ ಸಂಪಾದನೆ ಮಾಡಿದ್ದು ಪಿತ್ರಾರ್ಜಿತವಾಗಿ 3.64 ಕೋಟಿ ರೂ‌. ಆಸ್ತಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ- Karnataka Assembly Election: ಶತ ಕೋಟ್ಯಾಧಿಪತಿ ಬಳಿ ಕಾರಿಲ್ಲ- ಹಾಲಿ ಶಾಸಕಗೆ 8 ಕೋಟಿ ಸಾಲ

ಇನ್ನು, ಪತ್ನಿ ಸ್ವಯಾರ್ಜಿತವಾಗಿ 2.6 ಕೋಟಿ ಸಂಪಾದಿಸಿದ್ದು ಪುತ್ರ ನವನೀತ್ ಗೌಡ 3.8 ಕೋಟಿ ಆದಾಯ ಮಾಡಿದ್ದು 1.7 ಲಕ್ಷ ಸಾಲವನ್ನು ಪಡೆದಿದ್ದಾರೆ.  ಶಾಸಕ ಆರ್.ನರೇಂದ್ರ 2 ಕಾರು, 1 ಟ್ರಾಕ್ಟರ್ ಹೊಂದಿದ್ದು ಪುತ್ರ 2 ಬೈಕ್, 1 ಕಾರನ್ನು ಹೊಂದಿದ್ದಾರೆ.  

ಇದನ್ನೂ ಓದಿ- Karnataka Assembly Election: ಶೆಟ್ಟರ್ ಟಿಕೆಟ್ ತಪ್ಪಿಸಲು ನಡೆದಿತ್ತಾ ಷಡ್ಯಂತ್ರ

ಚಿನ್ನಾಭರಣ ವಿಚಾರ ಗಮನಿಸಿದರೇ ನರೇಂದ್ರ ಬಳಿ 16 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಇದ್ದರೇ ಪತ್ನಿ 580 ಗ್ರಾಂ ಚಿನ್ನ, 2.4 ಕೆಜಿ ಬೆಳ್ಳಿ ಹೊಂದಿದ್ದಾರೆ. ಮಗನ ಬಳಿಯೂ 20 ಗ್ರಾಂ ಚಿನ್ನ ಇದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News