ಬೆಂಗಳೂರು : ಬಿಜೆಪಿ ಬಳಿಕ ಇದೀಗ ಕಾಂಗ್ರೆಸ್ ತನ್ನ ಪ್ರಣಾಳಿಕೆ  ಬಿಡುಗಡೆ ಮಾಡಿದೆ.  ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಭಾರೀ ಆಶ್ವಾಸನೆಗಳನ್ನು ನೀಡಲಾಗಿದೆ.   ೨೦೦ ಯೂನಿಟ್ ಉಚಿತ ವಿದ್ಯುತ್ ಯುವಕರಿಗೆ ೩೦೦೦ ನಿರುದ್ಯೋಗ ಭತ್ಯೆ, ಪ್ರತಿ ವ್ಯಕ್ತಿಗೆ ೧೦ ಕೆ.ಜಿ ಅಕ್ಕಿ
ಸೇರಿದಂತೆ ಪ್ರಮುಖ ಆಶ್ವಾಸನೆಗಳನ್ನು ಈ ಪ್ರಣಾಳಿಕೆ  ಒಳಗೊಂಡಿದೆ. ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಚುನಾವಣಾ ಪ್ರಣಾಳಿಕೆ  ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.


COMMERCIAL BREAK
SCROLL TO CONTINUE READING

ಕಾಂಗ್ರೆಸ್  ಪ್ರಣಾಳಿಕೆಯಲ್ಲಿರುವ  ಪ್ರಮುಖ ಅಂಶ : 
೨೦೦ ಯೂನಿಟ್ ಉಚಿತ ವಿದ್ಯುತ್ 
ಯುವನಿಧಿ ಅಡಿಯಲ್ಲಿ ಯುವಕರಿಗೆ ೩೦೦೦ ನಿರುದ್ಯೋಗ ಭತ್ಯೆ


ಡಿಪ್ಲಮೋ ಪದವೀಧರರಿಗೆ ೧೫೦೦ ಸಹಾಯ ಧನ 


ಅನ್ನ ಭಾಗ್ಯ ಯೋಜನೆಯಡಿ ವ್ಯಕ್ತಿಗೆ ೧೦ ಕೆ.ಜಿ ಅಕ್ಕಿ
ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ೨೦೦೦ ರೂಪಾಯಿ 
ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ


ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರಿಂದ 10 ಸಾವಿರಕ್ಕೆ ಏರಿಕೆ 


ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ


ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ


ಇದನ್ನೂ ಓದಿ : ಹೊಸ ಕಟ್ಟಡ ಕಾಮಗಾರಿ ಕೆಲಸಗಳಿಗೂ ತಟ್ಟಿದ ಎಲೆಕ್ಷನ್​ ಬಿಸಿ


ರೈತರಿಗೆ ಕೈ ಪಕ್ಷದ ಭರವಸೆ : 
ಸಸ್ಯ ಶಾಮಲೆ ಹೆಸರಿನಲ್ಲಿ ರೈತ ಸ್ನೇಹಿ ಕಾರ್ಯಕ್ರಮ
ಪ್ರತಿ ವಿಭಾಗಕ್ಕೆ ಕೃಷಿ ಬೆಲೆ ಆಯೋಗ ಸ್ಥಾಪನೆ
ಗ್ರಾಮೀಣ ಭಾಗದಲ್ಲಿ ೮ ಗಂಟೆ ವಿದ್ಯುತ್ ಪೂರೈಕೆ
ರೈತರಿಗೆ ಬಡ್ಡಿ ರಹಿತ ೧೦ ಲಕ್ಷ ಸಾಲಸೌಲಭ್ಯ
ಕೃಷಿ‌ತೋಟಗಾರಿಕೆ ಉತ್ಪನ್ನಗಳಿಗೆ ಬೆಲೆ ನಿಗದಿ
ಸ್ವಾಮಿನಾಥನ್ ವರದಿಯ ಅನುಷ್ಠಾನ
ಕೃಷಿ ಉತ್ಪನ್ನ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಸೇವೆ
ಪ್ರತಿ ಕ್ಷೇತ್ರದಲ್ಲಿ ಶೀತಲೀಕರಣ ಘಟಕ ಸ್ಥಾಪನೆ
ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
ಎಪಿಎಂಸಿ ಕಾಯ್ದೆ ರದ್ಧು  ಮಾಡುವ ಭರವಸೆ 
ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
ಸಾವಯವ ಕೃಷಿ ಯೋಜನೆಗೆ ೨೫೦೦ ಕೋಟಿ ಹೂಡಿಕೆ
ನೇಗಿಲ ತುಡಿತ ಹೆಸರಿನಲ್ಲಿ ಮಂಡಳಿ ಸ್ಥಾಪನೆ
ಹನಿ,ತುಂತುರು ನೀರಾವರಿಗೆ ೧೦೦ ರಷ್ಟು ಸಬ್ಸಿಡಿ
ಸೌರ ಪಂಪ್ ಸೆಟ್ ಯೋಜನೆಗೆ ಸಬ್ಸಿಡಿ
ಬೀದರ್,ಕಲಬುರಗಿಯಲ್ಲಿ ಕೃಷಿ ಉತ್ಪನ್ನ ಸಂಶೋಧನಾ ಸಂಸ್ಥೆ


ಇದನ್ನೂ ಓದಿ : ಮೋದಿ ರೋಡ್ ಶೋ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ..!


ಪೋಲಿಸ್ ಇಲಾಖೆಯಲ್ಲಿ  ಶೇ.೩೩ ರಷ್ಟು‌ಮಹಿಳಾ ಪೊಲೀಸ್ ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಶೇ೧ ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ ನೀಡುವ ಬಗ್ಗೆ ಹೇಳಲಾಗಿದೆ. ರಾತ್ರಿ ಪಾಳಿ ಮಾಡಿದರೆ ೫ ಸಾವಿರ ವಿಶೇಷ ಭತ್ಯೆ, ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ, ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಕಲ್ಯಾಣ ಕೇಂದ್ರ ಸ್ಥಾಪನೆ, ನಾಲ್ಕು ವರ್ಷದೊಳಗೆ ಪೊಲೀಸ್ ಸಿಬ್ಬಂದಿಗೆ ವಸತಿ ನಿರ್ಮಾಣ   ಹೊಸ ಠಾಣೆಗಳ ನಿರ್ಮಾಣ,ಹಳೆ ಠಾಣೆ ನವೀಕರಣದ ಭರವಸೆ, ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಠಾಣೆಯ ಭರವಸೆ ನೀಡಲಾಗಿದೆ. 


ಗ್ರಾ.ಪಂ ವ್ಯಾಪ್ತಿಯಲ್ಲಿ ಯಾಂತ್ರೀಕರಣ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ೩ ಲಕ್ಷ ಬಡ್ಡಿರಹಿತ ಸಾಲ, ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ, ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ, ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ, ಬೆಳಗಾವಿ,ಬಾಗಲಕೋಟೆ,ಮಂಡ್ಯದಲ್ಲಿ ಎಥೆನಾಲ್ ಘಟಕ, ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣಾ ಘಟಕ, ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
ಜೇನು ಸಾಕಾಣಿಕೆಗೆ ೫೦ ಕೋಟಿ, ರಬ್ಬರ್ ಕೃಷಿಗೆ ೨೫ ಕೋಟಿ ಪ್ಯಾಕೇಜ್, ಮಲೆನಾಡು ರೈತರಿಗೆ ಸಾಗುವಳಿ ಪತ್ರ ನೀಡಿಕೆ
ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ, ಕೋಲಾರ,ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣೆ ಕೇಂದ್ರ, ಕಾಫಿ ಕರ್ನಾಟಕ ಬ್ರಾಂಡ್ ಸೃಷ್ಟಿ
ರೇಷ್ಮೆ ರೀಲರ್ ಗಳಿಗೆ ೩ ಲಕ್ಷ ಬಡ್ಡಿ ರಹಿತ ಸಾಲದ  ಬಗ್ಗೆ ಹೇಳಲಾಗಿದೆ. 


ಮಿಷನ್ ಕ್ಷೀರ ಕ್ರಾಂತಿ ಕಾರ್ಯಕ್ರಮ, ಹಾಲಿನ ಸಬ್ಸಿಡಿ ೫ ರಿಂದ ೭ ರೂಗೆ ಹೆಚ್ಚಳ, ಋಣ ಮುಕ್ತ ಕುರಿಗಾಹಿ ಯೋಜನೆ ಜಾರಿ ಬಗ್ಗೆ ಭರವಸೆ ನೀಡಲಾಗಿದೆ.  


ಇದನ್ನೂ ಓದಿ : ನಮ್ಮ ನಡೆ ಮತಗಟ್ಟೆ ಕಡೆ: ಗ್ರಾಮೀಣ ಭಾಗದಲ್ಲೂ ಹಬ್ಬದ ಸಂಭ್ರಮ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.