ಮೋದಿ ರೋಡ್ ಶೋ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ..!

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದೆ. ಆದ್ರೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ವೇಳೆ ಪಕ್ಷದ ನಾಯಕರು ನೀತಿ ಸಂಹಿತೆಯನ್ನ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.

Written by - Zee Kannada News Desk | Last Updated : May 2, 2023, 02:25 AM IST
  • ಮೋದಿ ರೋಡ್ ಶೋ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ
  • ಮೋದಿಗಾಗಿ ವೆಲ್ ಕಂ‌ ಬ್ಯಾನರ್.‌! ಪಕ್ಷದ ಧ್ವಜಗಳ ಅಳವಡಿಕೆ
  • ಕಂಬಕ್ಕೆ ಕಟ್ಟಿರುವ ಧ್ವಜಗಳನ್ನ ತೆರವು ಮಾಡಿಸದ ಬಿಬಿಎಂಪಿ
ಮೋದಿ ರೋಡ್ ಶೋ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ..! title=
screengrab

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದೆ. ಆದ್ರೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ವೇಳೆ ಪಕ್ಷದ ನಾಯಕರು ನೀತಿ ಸಂಹಿತೆಯನ್ನ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Gas Leak Incident: ಲುಧಿಯಾನಾದಲ್ಲಿ ಗ್ಯಾಸ್ ಸೋರಿಕೆಯಿಂದ ದುರ್ಘಟನೆ, 9 ಸಾವು 10 ಜನರಿಗೆ ಗಾಯ

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಹಿನ್ನಲೆ, ಪಕ್ಷದ ಚಿನ್ಹೆ, ಬಾವುಟ, ಅಭ್ಯರ್ಥಿ ಗಳ ಬ್ಯಾನರ್, ಕಟೌಟ್ ಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ. ಆದ್ರೆ ಬೆಂಗಳೂರಿನ ಪ್ರಧಾನಿ ಮೋದಿ ರೋಡ್ ಶೋ ಗೆ, ಸುಂಕದಕಟ್ಟೆ ಮುಖ್ಯ ರಸ್ತೆಯಲ್ಲಿ ಕಂಬಗಳಿಗೆ ಪಕ್ಷದ ಭಾವುಟಗಳನ್ನ ಕಟ್ಟಿ, ಎರಡ್ಮೂರು ಕಡೆ ಪ್ರಧಾನಿಗೆ ವೆಲ್ ಕಂ ಮಾಡುವ ಬ್ಯಾನರ್  ಅನ್ನು ಅಳವಡಿಸಿದ್ದಾರೆ. ನೀತಿ ಸಂಹಿತೆಯನ್ನ ಉಲ್ಲಂಘಿಸಿದವ್ರ ವಿರುದ್ಧ ಕ್ರಮ ಕೈಗೊಳ್ಳದೇ, ಕಟ್ಟಿರುವ ಧ್ವಜಗಳನ್ನೂ ಬಿಬಿಎಂಪಿ ತೆರವು ಮಾಡಿಲ್ಲ ಅಂತ ಸಾಮಾಜಿಕ ಹೋರಾಟಗಾರರೊಬ್ಬರು ಬಿಬಿಎಂಪಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡರಹಳ್ಳಿ ಪೊಲೀಸ್ ಠಾಣೆಯಿಂದ ಸುಂಕದಕಟ್ಟೆ ಸರ್ಕಲ್ ಗೆ ಬರುವ  ಸುಂಕದಕಟ್ಟೆ ಮುಖ್ಯ ರಸ್ತೆಯ ಮೂರ್ನಾಲ್ಕು ಕಡೆಗಳಲ್ಲಿ ಭಾವುಟಗಳನ್ನ ಕಟ್ಟಿದ್ದಾರೆ. ಇದೇ ರಸ್ತೆಯಲ್ಲಿ ಕೆಲ ಮನೆಗಳ ಮೇಲೂ ಭಾವುಟಗಳನ್ನ ಅಳವಡಿಸಿದ್ದಾರೆ.ಈ ಬಗ್ಗೆ  ಸ್ಥಳೀಯ ಜನ ಪ್ರಶ್ನೆ ಮಾಡ್ತಿದ್ದಂತೆ ಕೆಲ ಕಡೆ ಹಾಕಿದ್ದ ಬ್ಯಾನರ್ ನ್ನು ಕಟ್ ಮಾಡಿದ್ದಾರೆ.ಈ ಬಗ್ಗೆ ಬಿಬಿಎಂಪಿ ಕಂಟ್ರೋಲ್ ರೂಂಗೆ ಸ್ಥಳೀಯರು ದೂರು ನೀಡಿದ್ರೂ ಸಂಭಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಮಾಡಿಸದೇ ಇರೋದು ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ಧರೆಗುರುಳಿದ ಮರಗಳು, ವಾಹನ ಸವಾರರ ಪರದಾಟ

ನಿರ್ಧಿಷ್ಟ ರೋಡ್ ಶೋಗಳಿಗೆ, ಚುನಾವಣಾ ಆಯೋಗದಿಂದ ಅನುಮತಿ ಪಡೆದು ವೆಲ್ ಕಂ ಬೋರ್ಡ್ ಗಳನ್ನ ಸೀಮೀತವಾಗಿ ಬಳಸಬಹುದು. ಆದ್ರೆ ಯಾವ್ದೇ ಅನುಮತಿ ಪಡೆಯದೇ ಪ್ರಧಾನಿಗಳು ಬರ್ತಾರೆ ಅಂದ ಮಾತ್ರಕ್ಕೆ ರೂಲ್ಸ್ ನ್ನೇ ಬ್ರೇಕ್ ಮಾಡ್ತಾರೆ ಅಂದ್ರೆ ಕಾನೂನು ಇವ್ರಿಗೆ ಲೆಕ್ಕಕ್ಕಿಲ್ವಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಒಟ್ನಲ್ಲಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದ್ದ ಪಾಲಿಕೆ ಸೈಲೆಂಟ್ ಆಗಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News