ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್
Karnataka assembly Election: ಲಿಂಗಾಯತರು ದಡ್ಡರಲ್ಲ, ಅವರು ಮತ ಬ್ಯಾಂಕ್ ಆಗಿ ಇಟ್ಟುಕೊಂಡು ವರ್ಗಗಳಿಗೆ ಕಾಂಗ್ರೆಸ್ ಏನು ಮಾಡಿಲ್ಲ, ಜನರು ಬದಲಾವಣೆ ಬಯಸುತ್ತಿದ್ದಾರೆ. ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ.
Karnataka assembly Election 2023: ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ ಎಂದು ಸಚಿವ ಸೋಮಣ್ಣ ಸವಾಲ್ ಹಾಕಿದರು.
ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ರಾಜಶೇಖರ ಮೂರ್ತಿ ಅವರನ್ನು ಓಡಿಸಿದ್ದು ಯಾರು.? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು..? ಈ ಕಾಂಗ್ರೆಸ್ ಗೆ ಲಿಂಗಾಯತರನ್ನು ಇಲ್ಲದಾಗ ಏನಾಯ್ತು..! ಜಗದೀಶ್ ಶೆಟ್ಟರ್, ಸವದಿ ಅಂಥಾ ಹೇಳ್ತಾ ಇದಾರೆ, ಲಿಂಗಾಯತ ಸಿಎಂ ಮಾಡಲಿ..! ಇವೆಲ್ಲಾ ಕಣ್ಣೊರೆಸುವ ತಂತ್ರ ಎಂದು ಕೈಪಡೆ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ- ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ರಿಲೀಸ್- ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ
ಲಿಂಗಾಯತರು ದಡ್ಡರಲ್ಲ, ಅವರು ಮತ ಬ್ಯಾಂಕ್ ಆಗಿ ಇಟ್ಟುಕೊಂಡು ವರ್ಗಗಳಿಗೆ ಕಾಂಗ್ರೆಸ್ ಏನು ಮಾಡಿಲ್ಲ, ಜನರು ಬದಲಾವಣೆ ಬಯಸುತ್ತಿದ್ದಾರೆ. ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೇ ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ, ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ- ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ : ಸಿಎಂ ಬೊಮ್ಮಾಯಿ
ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದಕ್ಕೇ, ಕಾಂಗ್ರೆಸ್ ನವರು ಒಂದೊಂದು ಗಂಟೆಗೆ ಒಂದು, ಘಳಿಗೆಗೊಂದು ದಾಳ ಹಾಕ್ತಾ ಇದಾರೆ, ಆದರೆ ಅವೆಲ್ಲಾ ಏನು ಆಗಲ್ಲ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.