ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ವರ್ಚಸ್ಸು ಕಡಿಮೆ ಆಗಿಲ್ಲ; ಮಾಜಿ ಸಿಎಂ ಶೆಟ್ಟರ್
Karnataka Assembly Election: ಏನೂ ತಪ್ಪು ಮಾಡದವರಿಗೆ ಟಿಕೆಟ್ ಏಕೆ ಕೈತಪ್ಪಿಸಿದ್ದಾರೆಂಬ ಪ್ರಶ್ನೆ ಇದೆ. ಜನರ ಸಿಂಪತಿ, ಬೇಸರ ಯಾವತ್ತೂ ಕೂಡಾ ಶೆಟ್ಟರ್ ಅವರನ್ನು ಆರಿಸಿ ತರಬೇಕೆಂಬ ಛಲ ತೊಟ್ಟಿದ್ದಾರೆ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆದು ಆರಿಸಿ ಬರುತ್ತೇನೆ - ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ
Karnataka Assembly Election 2023: ಇವತ್ತು ಕೊಪ್ಪಳ, ವಿಜಯಪುರ ಪ್ರವಾಸ ಕೈಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಎಲ್ಲಿ ಎಲ್ಲಿ ನನಗೆ ಪ್ರಚಾರಕ್ಕೆ ಕಳಿಸ್ತಾರೆ ಅಲ್ಲಿ ಪ್ರಚಾರ ಮಾಡತ್ತೇನೆ. ನನ್ನ ಪರವಾಗಿ ಸ್ಟಾರ್ ಪ್ರಚಾರಕರು ಬಂದು ಕ್ಯಾಂಪೇನ್ ಮಾಡತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬರುವ ದಿನಗಳಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಸರ್ವೇ ಯಾವುದೇ ಬರಲಿ, ಅಧಿಕಾರ ಮಾತ್ರ ಬಿಜೆಪಿಗೆ ಎಂಬ ಬಿ.ಎಲ್.ಸಂತೋಷ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದೊಂದು ರಾಜಕೀಯವಾದ ಹೇಳಿಕೆ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ವರ್ಚಸ್ಸು ಕಡಿಮೆ ಆಗಿಲ್ಲ. ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದೇನೆ. ಜನರ ಮನಸ್ಸಿನಲ್ಲಿ ನನ್ನ ಬಗ್ಗೆ ಅನುಕಂಪ ಇದೆ ಎಂದರು.
ಏನೂ ತಪ್ಪು ಮಾಡದವರಿಗೆ ಟಿಕೆಟ್ ಏಕೆ ಕೈತಪ್ಪಿಸಿದ್ದಾರೆಂಬ ಪ್ರಶ್ನೆ ಇದೆ. ಜನರ ಸಿಂಪತಿ, ಬೇಸರ ಯಾವತ್ತೂ ಕೂಡಾ ಶೆಟ್ಟರ್ ಅವರನ್ನು ಆರಿಸಿ ತರಬೇಕೆಂಬ ಛಲ ತೊಟ್ಟಿದ್ದಾರೆ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆದು ಆರಿಸಿ ಬರುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ- Karnataka Assembly Election: ಬಿಜೆಪಿ ಪ್ರಜಾ ಪ್ರಣಾಳಿಕೆಯ ಮುಖ್ಯಾಂಶಗಳು
ಬಿಜೆಪಿ ಪದಾಧಿಕಾರಿಗಳ ಉಚ್ಚಾಟನೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು ಮೊದಲೇ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಪುನಃ ಉಚ್ಚಾಟನೆ ಮಾಡುವುದು ಆಸ್ಯಾಸ್ಪದ. ಇದೀಗ ಕಾರ್ಯಕರ್ತರ ಮೇಲೆ ಒತ್ತಡ ತರುವ ಕೆಲಸವನ್ನು ಬಿಜೆಪಿಯವರು ಮಾಡತ್ತಾ ಇದ್ದಾರೆ.
ಈ ಒತ್ತಡ ಬಹಳ ದಿನ ನಡೆಯೋದಿಲ್ಲ. ಈಗಾಗಲೇ ಡ್ಯಾಂ ಒಡೆದು ಹೋಗಿದೆ. ರಾಜಕಾರಣದಲ್ಲಿ ಒಳ ಹೊಡೆದ, ಹೊರ ಒಡೆತ ಎಂಬುದಿದೆ. ಈಗಾಗಲೇ ಕಾರ್ಯಕರ್ತರು ಒಳ ಹೊಡೆತ ಶುರು ಮಾಡಿದ್ದಾರೆ ಎಂದರು.
ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅಮಿತ್ ಶಾ ಹೇಳಿಕೆ ವಿಚಾರವಾಗಿಯೂ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನೇ ಹೇಳಿದ್ರು, ಅವರಿಗಿಂತ ಅತಿಹೆಚ್ಚು ಮತಗಳಿಂದ ಗೆದ್ದು ಬರುತ್ತೇನೆ ಲೆಂಡು ವಿಶ್ವಾಸದಿಂದ ನುಡಿದರು. ಇದೇ ವೇಳೆ, ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಶೆಟ್ಟರ್ ಮಂತ್ರಿ ಸ್ಥಾನ ಬೇಡಾ ಎಂದಿದ್ದಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಅಮಿತ್ ಶಾ ಹೇಳಿಕೆ ವಿಚಾರ, ಕ್ಯಾಬಿನೆಟ್ ನಲ್ಲಿ ಮಿನಿಸ್ಟರ್ ಆಗಲಿಲ್ಲ, ಅಂದರೆ ಎಮ್ ಎಲ್ ಎ ಟಿಕೆಟ್ ಕೊಡುವುದಿಲ್ಲ ಎಂಬುದು ಸರಿಯಲ್ಲ, ಇದು ವಿಚಿತ್ರ ಹೇಳಿಕೆ. ಅಧಿಕಾರ ಬೇಡಾ ಎಂದು ಸುಮ್ಮನೆ ಮನೆಯಲ್ಲಿ ಕುಂತರೇ, ಅದನ್ನು ಗುರುತು ಮಾಡಬೇಕಿತ್ತು. ಅದು ಬಿಟ್ಟು ಕ್ಯಾಬಿನೆಟ್ ಬೇಡಾ ಎಂದಾಗ ಟಿಕೆಟ್ ಕೊಡುವುದಿಲ್ಲ ಎಂದಿದ್ದರೇ ಮೊದಲೇ ಮುಗಿದು ಹೋಗುತ್ತಿತ್ತು. ಆರು ಅಥವಾ ಮೂರು ತಿಂಗಳಿಂದ ಮಂತ್ರಿ ಸ್ಥಾನ ಬೇಡಾ ಎಂದಿದ್ದೀರಿ. ಅದಕ್ಕೆ ನಾವು ಟಿಕೆಟ್ ಕೊಡುವುದಿಲ್ಲ ಎಂದು ಕರೆದು ಹೇಳಬೇಕಿತ್ತು. ಅದು ಬಿಟ್ಟು ಇದೀಗ ವಿತಂಡ ವಾದಾ ಮಾಡೋದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ- Karnataka Assembly Elections: ಮೈಸೂರಿನಲ್ಲಿ ಪ್ರಧಾನಿ ನರೇಂದ್ರಮೋದಿ ರ‍್ಯಾಲಿಯಲ್ಲಿ ಭದ್ರತಾ ಲೋಪ- ವಿಡಿಯೋ ವೈರಲ್
ಜಗದೀಶ್ ಶೆಟ್ಟರ್ ಸೋಲಿಸುವ ವಿಚಾರವಾಗಿ ಹೈಕಮಾಂಡ್ ಜೋಶಿಗೆ ಟಾಸ್ಕ್ ಕೊಟ್ಟ ವಿಚಾರವಾಗಿಯೂ ಮಾತನಾಡಿದ ಜಗದೀಶ್ ಶೆಟ್ಟರ್, ಇಷ್ಟು ದಿನ ಜೋಶಿ ಅವರು ಯಾವತ್ತೂ ಈ ಕ್ಷೇತ್ರದಲ್ಲಿ ಇಷ್ಟು ಕ್ಯಾಂಪ್ ಮಾಡಿರಲಿಲ್ಲ. ಅವರ ಮೇಲೆ ಕೇಂದ್ರದ ಒತ್ತಡ ಇದ್ದೆ ಇದೆ, ಅದನ್ನು ಬೇರೆಯವರ ಮೇಲೆ ಹಾಕಲು ಮುಂದಾಗುತ್ತಿದ್ದಾರೆ. ಸೋಲುವ ಭಯದಲ್ಲಿ ಜನರಿಗೆ ಹೆದರಿಕೆ, ದಬ್ಬಾಳಿಕೆ ಹಾಕುವುದು ಪ್ರಾರಂಭ ಆಗಿದೆ. ಮುಂದೆ 2024 ಲೋಕಸಭಾ ಚುನಾವಣೆ ಬರುತ್ತದೆ ಕಾದು ನೋಡಿ ಎಂದು ಮಾರ್ಮಿಕವಾಗಿ ಮಾತನಾಡಿದರು. ನನ್ನ ಜೀವನದಲ್ಲಿಯೇ ಈ ತರಹ ಪರಿಸ್ಥಿತಿ ನೋಡಿಲ್ಲ. ಈ ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ಅಷ್ಟೇ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.