`ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ`
ಬಿಜೆಪಿ ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಾಗಿದ್ದು, ಇವರು ಈ ವಿಚಾರವಾಗಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
ಬೆಂಗಳೂರು: ಬಿಜೆಪಿ ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಾಗಿದ್ದು, ಇವರು ಈ ವಿಚಾರವಾಗಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
ನೀವು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದು,ಈ ಆಡಿಯೋದ ಸತ್ಯತೆ ಏನು ಎಂದು ಕೇಳಿದಾಗ ‘ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಹಾಗೂ ಮಕ್ಕಳ ಹತ್ಯೆಗೆ ಸಂಚು ರೂಪಿಸಿರುವುದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಬೆದರಿಕೆ ಹಾಕಿರುವುದು ಬೇರಾರೂ ಅಲ್ಲ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಈತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಯ ಆತ್ಮೀಯ ನೀಲಿ ಕಂಗಳ ಹುಡುಗ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಅವರು ಮೌನಕ್ಕೆ ಶರಣಾಗಿದ್ದಾರೆ. ಆದರೆ ರಾಜ್ಯದ ಜನ ಇದನ್ನು ಸಹಿಸಿಕೊಂಡು ಕೂರುವುದಿಲ್ಲ, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ತಿಳಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್
ಚುನಾವಣೆ ಸಮಯದಲ್ಲಿ ಯಾರ ನಿರ್ದೇಶನದ ಮೇರೆಗೆ ಈ ಪಿತೂರಿ ನಡೆದಿದೆ ಎಂದು ಕೇಳಿದಾಗ, ‘ಈ ಪ್ರಕರಣದಿಂದ ಬಿಜೆಪಿಯ ಇಡೀ ನಾಯಕ್ವತದ ಮೇಲೆ ಪ್ರಶ್ನೆ ಎದ್ದಿದೆ. ಮೋದಿ ಹಾಗೂ ಬೊಮ್ಮಾಯಿ ಆತ್ಮೀಯ ನೀಲಿ ಕಂಗಳ ಹುಡುಗ ಮಣಿಕಂಠ ರಾಥೋಡ್ ಚಿತ್ತಾಪುರದ ಅಭ್ಯರ್ಥಿಯಾಗಿದ್ದಾನೆ. ಆತನ ಆಡಿಯೋದಲ್ಲಿ ಆತ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಕೆಲ ದಿನಗಳ ಹಿಂದೆ ಬಿಜೆಪಿ ಸಚಿವ ಅಶ್ವತ್ಥ್ ನಾರಾಯಣ ಸಿದ್ದರಾಮಯ್ಯ ಅವರ ವಿಚಾರದಲ್ಲೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಬಿಜೆಪಿಯ ಹತಾಶೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಮೋದಿ ಅವರೇ ನೀವು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೀರಿ, ಇತ್ತ ನಿಮ್ಮ ನಾಯಕರು ಹತ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಾಗಿದ್ದು, ಇವರು ಈ ವಿಚಾರವಾಗಿ ಉತ್ತರ ನೀಡಬೇಕು’ ಎಂದು ತಿಳಿಸಿದರು.
ಇದನ್ನೂ ಓದಿ: ಬಂದ್ ಮಾರ್ಗ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ
ಚುನಾವಣಾ ಆಯೋಗದ ಮೇಲೆ ಭರವಸೆ ಇಟ್ಟು ಆಯೋಗಕ್ಕೆ ಈ ವಿಚಾರವಾಗಿ ದೂರು ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಚುನಾವಣಾ ಆಯೋಗ ಕೇವರ ಕಾಂಗ್ರೆಸ್ ನಾಯಕರಿಗೆ ಮಾತ್ರ ನೊಟೀಸ್ ನೀಡುತ್ತದೆ. ಅಮಿತ್ ಶಾ, ಮೋದಿ ಅವರು ಚುನಾವಣಾ ಆಯೋಗ ಹಾಗೂ ದೇಶದ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಬಿಜೆಪಿ ನಾಯಕರು ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ? ಬಿಜೆಪಿ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟ ನೀಚ ಮಟ್ಟಕ್ಕೆ ಇಳಿಯುವುದಾದರೆ, ಅವರ ಹತ್ಯೆ ಮಾಡಿ. ಆಮೂಲಕವಾದರೂ ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ’ ಎಂದು ಹರಿಹಾಯ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.