ಬೆಂಗಳೂರು: ಈ ವರ್ಷದ ಕೊನೆಯ ಹೊತ್ತಿಗೆ ರಾಜಾಸ್ಥಾನ, ಛತ್ತೀಸಗಢಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲೆಲ್ಲ ಕಾಂಗ್ರೆಸ್ ಧೂಳೀಪಟ ಆಗಲಿದೆ. ಆ ವಿದ್ಯಮಾನದ ದೃಷ್ಟಿಯಿಂದ ಕರ್ನಾಟಕದ ಚುನಾವಣೆ ಮಹತ್ವದ್ದಾಗಿದೆ.  ಹೀಗಾಗಿ ಬಿಜೆಪಿಗೆ ತಮ್ಮ ಮತ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.


COMMERCIAL BREAK
SCROLL TO CONTINUE READING

ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿನ ಸುಬ್ರಹ್ಮಣ್ಯ ನಗರದ ಶ್ರೀವಾಣಿ ವಿದ್ಯಾಕೇಂದ್ರ ಮತ್ತು ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಹ್ಲಾದ್‌ ಜೋಶಿ, ಮಲ್ಲೇಶ್ವರ ಕ್ಷೇತ್ರದಲ್ಲಿ 250 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ರಾಜ್ಯದಲ್ಲಿ ಮೋದಿಯವರ ವೇಗ ಮತ್ತು ಕಲ್ಪನೆಗೆ ತಕ್ಕ ಸರಕಾರ ಇರಬೇಕು. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಬೇಕು ಎಂದು ಅವರು ಕೋರಿದರು.


ಇದನ್ನೂ ಓದಿ: ಮಾನ್ಯ ನರೇಂದ್ರ ಮೋದಿ ಅವರೇ ಈಗಲಾದರೂ ‘‘ಜನ್ ಕಿ ಬಾತ್” ಕೇಳುತ್ತಿರಾ? : ಸಿದ್ದರಾಮಯ್ಯ


ಕಾಂಗ್ರೆಸ್ ಈಗ ಏನೇನೋ ಗ್ಯಾರಂಟಿಗಳನ್ನು ಕೊಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಯಾಕೆ ಏನನ್ನೂ ಕೊಡಲಿಲ್ಲ. ಜನರಿಗೆ ಟೋಪಿ ಹಾಕುವುದೇ ಆ ಪಕ್ಷದ ಸಂಸ್ಕೃತಿ ಎಂದು ಅವರು ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಈಗ ದೇಶದ ಬಗ್ಗೆ, ರಾಮನ ಬಗ್ಗೆಯೆಲ್ಲ ಮಾತನಾಡುತ್ತಿದ್ದಾರೆ. ಆದರೆ ಹೊರದೇಶಗಳಲ್ಲಿ ಭಾರತದ ಅಸ್ತಿತ್ವವನ್ನೇ ಇವರು ಪ್ರಶ್ನಿಸಿದ್ದರು. ರಾಮನ ಮೂಲವನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದ ಅಯೋಗ್ಯರು ಇವರು. ಈ ದೇಶ ಅವರ ತಾತ, ಮುತ್ತಾತನ ಆಸ್ತಿಯಲ್ಲ. ಇವರು ಮಾಡಿಕೊಂಡು ಬಂದಿದ್ದೆಲ್ಲ ಬರೀ ತುಷ್ಟೀಕರಣದ ರಾಜಕಾರಣ ಎಂದು ಜೋಶಿ ಪ್ರಹಾರ ನಡೆಸಿದರು.


ಮೋದಿಯವರು ಭಾರತವನ್ನು 2047ರ ಹೊತ್ತಿಗೆ ನಂಬರ್ ಒನ್ ಮಾಡಲು ಪಣ ತೊಟ್ಟಿದ್ದಾರೆ. ಇದು ನನಸಾಗಲು ದೇಶದಲ್ಲಿ ಕರ್ನಾಟಕವೂ ನಂಬರ್ ಒನ್ ಆಗಬೇಕು. ಒಂದು ದಿನ ಮುಸ್ಲಿಮರ ಟೋಪಿ, ಮರುದಿನ ಜನಿವಾರ ಹಾಕಿಕೊಂಡು ಹೋಗುವ ಕಾಂಗ್ರೆಸ್ಸಿನವರನ್ನು ನಂಬಿ ಹಾಳಾಗಬಾರದು ಎಂದು ಅವರು ಪ್ರತಿಪಾದಿಸಿದರು. ಡಬಲ್ ಎಂಜಿನ್ ಬಿಜೆಪಿ ಸರಕಾರವು ರಾಜ್ಯದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ, ಮೂಲಸೌಲಭ್ಯ, ರಿಂಗ್ ರಸ್ತೆ, ಎಕ್ಸ್‌ಪ್ರೆಸ್ ವೇ, ವಂದೇ ಭಾರತ ಎಕ್ಸ್‌ಪ್ರೆಸ್ ಎಲ್ಲವನ್ನೂ ಮಾಡಿ ತೋರಿಸಿದೆ. ಬಿಜೆಪಿ ನೇತೃತ್ವದಲ್ಲಿ ದೇಶವು ಸ್ವಾವಲಂಬಿ ಆಗುತ್ತಿದೆ ಎಂದು ಅವರು ನುಡಿದರು. ಸಂವಾದದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮುಂತಾದವರು ಉಪಸ್ಥಿತರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.