Karnataka Assembly Election: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಮುಂದಾದ ಸ್ಯಾಂಡಲ್ವುಡ್ ಸ್ಟಾರ್ಸ್, ಯಾರ್ಯಾರು ಗೊತ್ತಾ?
ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರು ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು ಪ್ರಚಾರದ ಬ್ಯೂಸಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ರಾಜ್ಯ ನಾಯಕರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಸ್ಟಾರ್ಸ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ..
ಬೆಂಗಳೂರು: ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರು ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು ಪ್ರಚಾರದ ಬ್ಯೂಸಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ರಾಜ್ಯ ನಾಯಕರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಸ್ಟಾರ್ಸ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ..
ಇದರ ಬೆನ್ನಲೇ ಚುನಾವಣೆ ಸದ್ಯದಲ್ಲೇ ಇರುವುದರಿಂದ ಕಾಂಗ್ರೆಸ್ ಪ್ರಚಾರಕ್ಕೆ ಕೆಲ ಸಿನಿ ತಾರೆಯರು ಬರಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದೀಗ ಮೊನ್ನೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ಸೇರಿದಂತೆಯೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಪ್ರಚಾರ ಮಾಡಲು ಬರಲಿದ್ದಾರೆ.
ಇದನ್ನೂ ಓದಿ: Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್
ಮೇ.1 ರಿಂದ ವರುಣಾದಲ್ಲಿ ಶಿವಣ್ಣ ಪ್ರಚಾರ ಆರಂಭಿಸಲಿದ್ದಾರೆ. ಇವರ ಜೊತೆಯಲ್ಲಿ ನಟಿ ರಮ್ಯಾ, ನಟ ದುನಿಯಾ ವಿಜಯ್ ಪ್ರಚಾರ ಮಾಡಲಿದ್ದಾರೆ. ರಾಜ್ಯ ರಾಜಕೀಯದಿಂದ ದೂರ ಉಳಿದಿದ್ದ ಹಲವು ನಟರು ಇದೀಗ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ಸ್ಯಾಂಡಲ್ವುಡ್ ಕ್ವೀನ್ ಸಹ ಮುಂದಾಗಿದ್ದಾರೆ.
ಸೋಮವಾರದಿಂದಲೇ ಶಿವಮೊಗ್ಗದ ಸೊರಬದ ಕ್ಷೇತ್ರದಲ್ಲಿ ಭಾಮೈದ ಮಧು ಬಂಗಾರಪ್ಪ ಪರ ಶಿವರಾಜ್ ಕುಮಾರ ಮತಯಾಚಿಸಲಿದ್ದಾರೆ.ಇದರ ಜೊತೆಗೆ ಶಿವಮೊಗ್ಗ ಮುಗಿಸಿ ವರುಣಾದಲ್ಲಿಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್,ಶಿರಸಿಯಲ್ಲಿ ಭೀಮಣ್ಣ ನಾಯಕ ಮತ್ತು ಅಶೋಕ್ ಖೇಣಿ ಪರ ಕೂಡ ಶಿವಣ್ಣ ಪ್ರಚಾರ ಮಾಡಲಿದ್ದಾರೆ.
ಇನ್ನು ಉಳಿದಂತೆಯೇ ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಕ್ಷೇತರ ಅಭ್ಯರ್ಥಿ ಪರವಾಗಿಯೇ ಪ್ರಚಾರ ಮಾಡಲಿದ್ದಾರೆ. ಸದ್ಯದ ಮಟ್ಟಿಗೆ ಸಿನಿಮಾ ಬಿಡುಗಡೆ ಹಾಗೂ ಚಿತ್ರಿಕರಣದ ಬಿಡುವು ಪಡೆದು ಚುನಾವಣೆ ಅಖಾಡದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ದರ್ಶನ್, ಸುದೀಪ್ ಸೇರಿದಂತೆ ಅನೇಕರು ಮತ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಚುನಾವಣೆ ಅಬ್ಬರ ಜೋರು ಇರುವುದರಿಂದ ಈ ಬಾರಿಯ ಚುನಾವಣೆ ಮೇಲೆ ನೀರಿಕ್ಷೆ ಹೆಚ್ಚಿಸಿದೆ. ಯಾರು ಸಿಎಂ ಸ್ಥಾನ ಪಡೆದು ಗದ್ದುಗೆ ಏರುತ್ತಾರೆಂದು ಮೇ 13 ರ ವರೆಗೂ ಕಾಯಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ